ದಾರಂದಕುಕ್ಕು ಸೈಫುಲ್ ಹುದಾ ಮದ್ರಸ ಕಮಿಟಿಯಿಂದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದಾರಂದಕುಕ್ಕು ಮದ್ರಸ ವಠಾರದಲ್ಲಿ ಧ್ವಜ ಹರೋಹಣವನ್ನು ಸೈಫುಲ್ ಹುದಾ ಮದ್ರಸ ಕಮಿಟಿ ಅಧ್ಯಕ್ಷ ರು, ಕುಂಬ್ರದ ಅಡಿಕೆ ವ್ಯಾಪಾರಿಯೂ ಆಗಿರುವ ಡಿ.ಕೆ ಉಮ್ಮರ್‌ರವರು ನೆರೆವೇರಿಸಿದರು.

ಕಾರ್ಯಕ್ರಮದ ದುಹ್ ಹಾಗೂ ಪ್ರಾಸ್ತಾವಿಕ ಭಾಷಣವನ್ನು ಹಾಜಿ ಯಾಕುಬು ದಾರಿಮಿ ಉಸ್ತಾದ್ ನೆರವೇರಿಸಿ ಕೊಟ್ಟರು. ಮದ್ರಸಾ ಮಕ್ಕಳಿಂದ ಸ್ವಾತಂತ್ರೋತ್ಸವದ ಪ್ರಯುಕ್ತ ಹಾಡು ಹಾಗೂ ಭಾಷಣದ ಮೂಲಕ ಸ್ವಾತಂತ್ರ ಸಂದೇಶವನ್ನು ಸಾರಿದರು.ಕಾರ್ಯಕ್ರಮದಲ್ಲಿ ಮೂಹಿನುಲ್ ಇಸ್ಲಾಂ ಜಮಾಹತ್ ಕಮಿಟಿ ಅಧ್ಯಕ್ಷರು ಅಶ್ರಫ್ ಹಾಜಿ, ಸೈಫುಲ್ ಹುದಾ ಮದ್ರಸ ಕಮಿಟಿಯಾ ಗೌರವಾಧ್ಯಕ್ಷ ಎ.ಕೆ ಬಶೀರ್ ಹಾಜಿ, ಎಸ್‌ಕೆಎಸ್‌ಎಸ್‌ಎಫ್ ದಾರಂದಕುಕ್ಕು ಯೂನಿಟ್ ಉಪಾಧ್ಯಕ್ಷ ಬಶೀರ್ ಮುಸ್ಲಿಯಾರ್, ನೂರುಲ್ ಹುದಾ ಸ್ವಲಾತ್ ಕಮಿಟಿ ಕಾರ್ಯದರ್ಶಿ ನಿಜಾಮ್ ಡಿ.ಕೆ ಹಾಗೂ ಊರಿನ ಎಲ್ಲಾ ಹಿರಿಯ ಕಿರಿಯ ವ್ಯಕ್ತಿಗಳು ಮದ್ರಸಾ ಮಕ್ಕಳು ಭಾಗವಹಿಸಿದ್ದರು.ಸೈಫುಲ್ ಹುದಾ ಮದ್ರಸ ಕಮಿಟಿ ಕಾರ್ಯದರ್ಶಿ ಡಿ.ಕೆ ಹಕೀಮ್ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here