ಪುತ್ತೂರು: ಸವಣೂರು ಮೊಗರು ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಫೀಕ್ ಎಂ ಎ ರವರು ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸವಣೂರು ಗ್ರಾ.ಪಂ.ಸದಸ್ಯರುಗಳಾದ ರಝಕ್ ಕೆನರ, ಬಾಬು ಏನ್ ಜರಿನಾರು, ಚೆನ್ನು, ಶಬೀನಾ, ಪ್ರಭಾರ ಮುಖ್ಯಗುರು ಜುಸ್ತಿನಾ ಲಿಡ್ವಿನ್ ಡಿಸೋಜ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಯಶೋಧ, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಜಕಾರಿಯ ಮಾಂತೂರು, ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಗಂಗಾಧರ ಪೆರಿಯಡ್ಕ, ಬದ್ರೀಯಾ ಜುಮಾ ಮಸೀದಿ ಚಾಪಲ್ಲ ಸದಸ್ಯರಾದ ಉಸ್ಮಾನ್ ಅತಿಕರೆ, ರಹ್ಮಾನೀಯ ಜುಮಾ ಮಸೀದಿ ಪಣೆಮಜಲು ಕಾರ್ಯದರ್ಶಿ ಹಂಝ ಎಸ್ ಎ, ಸವಣೂರು ಯುವಕ ಮಂಡಲದ ಕಾರ್ಯದರ್ಶಿ ರಾಜೇಶ್, ಸಾಹಿತಿಗಳಾದ ಹೈದರ್ ಅಲಿ ಐವತೊಕ್ಲು, ಸಫ್ವಾನ್ ಅರೆಲ್ತಡಿ, ಬಾಲವಿಕಾಸ ಸಮಿತಿ ಅಧ್ಯಕ್ಷರಾದ ರುಬಿನ, ಅಂಗನವಾಡಿ ಕಾರ್ಯಕರ್ತೆ, ಅಂಗವಾಡಿ ಸಹಾಯಕಿ, ಬಾಲವಿಕಾಸ ಸಮಿತಿ ಸದಸ್ಯರುಗಳು, ಹಿರಿಯ ವಿದ್ಯಾರ್ಥಿ ಸಂಘದ ಸದಸ್ಯರುಗಳು, ಶಾಲಾಭಿವೃದ್ದಿ ಸಮಿತಿ ಸದಸ್ಯರುಗಳು, ಅಡುಗೆ ಸಿಬ್ಬಂದಿಗಳು, ಶಾಲಾ ವಿದ್ಯಾರ್ಥಿಗಳು, ಊರ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳಿಂದ ಭಾರತಾಂಬೆ ಸಹಿತ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಆಕರ್ಷಕ ಮೆರವಣಿಗೆ ನಡೆಯಿತು. ಕಾರ್ಯಕ್ರಮಕ್ಕೆ ಪ್ರಭಾರ ಮುಖ್ಯ ಗುರುಗಳಾದ ಜುಸ್ತಿನಾ ಲಿಡ್ವಿನ್ ಸ್ವಾಗತಿಸಿದರು. ಸಹ ಶಿಕ್ಷಕರುಗಳಾದ ಜಾನಕಿ ಕಾರ್ಯಕ್ರಮ ನಿರೂಪಿಸಿ, ಕು ದಯಾಮಣಿ. ಕೆ ವಂದಿಸಿದರು. ಗುಲ್ಸನ್ ಕೌಸರ್, ಸವಿತಾ, ಗಾಯತ್ರಿ ಸಹಕರಿಸಿದರು.