





ನೆಲ್ಯಾಡಿ: ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ನೇರ್ಲ-ಇಚ್ಲಂಪಾಡಿಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ವಸಂತ ಬಿಜೇರು ಧ್ವಜಾರೋಹಣ ನೆರವೇರಿಸಿದರು. ನಂತರ ಶಾಲಾ ಮಕ್ಕಳಿಂದ ನೇರ್ಲ ಪೇಟೆಯವರೆಗೆ ಸ್ವಾತಂತ್ರೋತ್ಸವದ ಪಥಸಂಚಲನ ನಡೆಯಿತು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ನೇರ್ಲ ಪೇಟೆಯ ಅಂಗಡಿ ಮಾಲೀಕರು ಸಿಹಿ ವಿತರಿಸಿದರು. ಇಚ್ಲಂಪಾಡಿ ಹಾಲು ಉತ್ಪಾದಕರ ಸಂಘದ ವತಿಯಿಂದ ಪಾನೀಯ ನೀಡಿ ಸಹಕರಿಸಿದರು. ಬಳಿಕ ಎಸ್.ಡಿ.ಎಂ.ಸಿ ಅಧ್ಯಕ್ಷ ವಸಂತ ಬಿಜೇರು ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.


ವೇದಿಕೆಯಲ್ಲಿ ಕೌಕ್ರಾಡಿ ಗ್ರಾ.ಪಂ.ಸದಸ್ಯೆ ಡೈಸಿ ವರ್ಗೀಸ್, ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಂದಾ, ಕೆ.ಡಿ.ಪಿ ಸದಸ್ಯ ಗಿರೀಶ್ ಸಾಲ್ಯಾನ್, ಲೋಕೇಶ್ ನೇರ್ಲ, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಸತೀಶ್ ಪಳಿಕೆ, ನೇರ್ಲ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಅಧ್ಯಕ್ಷ ಅಕ್ಷತ್ ನೇರ್ಲ ಉಪಸ್ಥಿತರಿದ್ದರು. ಎನ್ಎಂಎಂಎಸ್ ಪರೀಕ್ಷೆಯಲ್ಲಿ ಸಾಧನೆಗೈದ ಸಿಂಚನಾ ಹಾಗೂ ಎಂಟನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಪೂರ್ವಿಯವರನ್ನು ಅಭಿನಂದಿಸಲಾಯಿತು.






ಶಾಲಾ ಮುಖ್ಯಶಿಕ್ಷಕ ಡಾ.ಗಿರೀಶ್ ಹೆಚ್.ಎಂ. ಸ್ವಾಗತಿಸಿದರು. ಶಾಲಾ ಶಿಕ್ಷಕಿ ಆಥಿರಾ ನಿರೂಪಿಸಿದರು. ಶಿಕ್ಷಕಿ ಸೌಮ್ಯ ವಂದಿಸಿದರು. ಬಳಿಕ ಶಾಲಾ ಮಕ್ಕಳಿಂದ ಮತ್ತು ಹಳೆವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಥಿತಿ ಶಿಕ್ಷಕಿಯರಾದ ಚೈತ್ರ, ಆಥಿರಾ, ಸೌಮ್ಯ ಮತ್ತು ಅನುಷಾ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ತರಬೇತುಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಊರ ವಿದ್ಯಾಭಿಮಾನಿಗಳು ಭಾಗವಹಿಸಿದ್ದರು. ನೇರ್ಲ ಕ್ರಿಕೆಟರ್ಸ್ ಅಕಾಡೆಮಿ ಸದಸ್ಯರು ಹಳೆ ವಿದ್ಯಾರ್ಥಿ ದಿ.ಚೇತನ್ ಶೆಟ್ಟಿರವರ ಸ್ಮರಣಾರ್ಥ ಭೋಜನದ ವ್ಯವಸ್ಥೆ ಮಾಡಿದ್ದರು.










