ಪುತ್ತೂರು: ದ.ಕ ಜಿಲ್ಲಾ ಗ್ರಾಮಾಂತರ ಭಾಗಗಳಲ್ಲಿ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ವತಿಯಿಂದ ಪುತ್ತೂರು ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಹಲವು ಗ್ರಾಮಗಳಿಗೆ ಯಾವುದೇ ಸರಕಾರಿ ಬಸ್ಸಿನ ಸೌಕರ್ಯವಿಲ್ಲದೆ ವಿದ್ಯಾಥಿಗಳು, ಉದ್ಯೋಗಿಗಳು ಹಾಗೂ ನಾಗರೀಕರು, ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಿಗೆ ಸಂಪರ್ಕಿಸುವುದರ ಜೊತೆಗೆ ದೇರಳಕಟ್ಟೆ, ಬಂಟ್ವಾಳ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ, ವೈದ್ಯಕೀಯ/ಇಂಜಿನಿಯರಿಂಗ್ ಪದವಿ ಹಾಗೂ ಇತರ ಕಾಲೇಜುಗಳಿಗೆ ಮನೆಯಿಂದ ಹೋಗಿ ಬರಲು ಅನಾನುಕೂಲವಾಗಿರುತ್ತದೆ ಈ ಹಿನ್ನಲೆ ಕೆಎಸ್‌ಆರ್‌ಟಿಸಿಯ ಬಸ್ಸುಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯ ಮೂಲಕ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೇಡಿಕೆಗಳು
ಕರೋಪಾಡಿ ಗ್ರಾಮದ ಮಿತ್ತನಡ್ಕದಿಂದ ಕನ್ಯಾನ-ಕುಳಾಲು-ಸಾಲೆತ್ತೂರು-ಮಂಚಿ-ಬಿ.ಸಿ.ರೋಡ್ ಮಾರ್ಗ
ಕರೋಪಾಡಿ ಗ್ರಾಮದ ಬಿಸಿರೋಡು ಮಾರ್ಗ ಮಿತ್ತನಡ್ಕದಿಂದ ಕನ್ಯಾನ-ಕುಡ್ತಮುಗೇರು-ಸೇರ್ಕಳ-ಬೋಳಂತೂರು-ಕಲ್ಲಡ್ಕ-ವಿಟ್ಲ-ಸಾಲೆತ್ತೂರು-ಮಂಚಿ-ಇರಾ-ಮುಡಿಪು- ಮಂಗಳೂರು ಮಾರ್ಗ
ಈ ಮೇಲಿನ ಮಾರ್ಗಗಳಿಗೆ ಕೆಎಸ್‌ಆರ್‌ಟಿಸಿಯ ಬಸ್ಸುಗಳ ವ್ಯವಸ್ಥೆಯನ್ನು ಸಾರಿಗೆ ಇಲಾಖೆಯ ಮೂಲಕ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂಎಸ್ ಮಹಮ್ಮದ್, ಕೊಳ್ನಾಡು ಗ್ರಾಪಂ ಉಪಾಧ್ಯಕ್ಷೆ ಅಸ್ಮಾ, ಸದಸ್ಯರಾದ ಸುಭಾಶ್ಚಂದ್ರ, ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ, ಪುತ್ತೂರು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ ಉಪಸ್ಥಿತರಿದ್ದರು.