ಇ ಎಸ್ ಆರ್ ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಮರೀಲಿನಲ್ಲಿರುವ ಈ ಎಸ್ ಎಸ್ ಆರ್ ಪ್ರೆಸಿಡೆನ್ಸಿ ಶಾಲೆಯಲ್ಲಿ ಆ. 15ರಂದು 79ನೇ ವರ್ಷದ ಸ್ವಾತಂತ್ರೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಹಿರಿಯ ಕ್ಷಯರೋಗ ತಜ್ಞ ಡಾ. ಬದ್ರುದ್ದೀನ್ ರವರು ಧ್ವಜಾರೋಹಣವನ್ನು ನೆರವೇರಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕೆಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿ, ಇ ಎಸ್ ಆರ್ ಎಂಬ ಹೆಸರು ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಒಂದಕ್ಕೊಂದು ಸಂಬಂಧವಿದೆ ಎಂದರು. ನಂತರ ಶಾಲಾ ಆಡಳಿತ ಮಂಡಳಿಯ ಸದಸ್ಯ ವಿ ಕೆ ಶರೀಫ್ ರವರು ಮಾತಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ನಂತರ ಸಾಮಾಜಿಕ ಕಾರ್ಯಕರ್ತರಾದ ಹನೀಫ್ ಕಬಕರವರು ಮಾತನಾಡಿ, ಶಾಲೆಯು ದಶಮಾನೋತ್ಸವವನ್ನು ಆಚರಿಸುವುದರಲ್ಲಿ ಶಾಲಾ ಸಂಚಾಲಕರು ಮತ್ತು ಅವರ ಕುಟುಂಬದ ಪಾತ್ರವನ್ನು ನೆನಪಿಸಿ ಶ್ಲಾಘಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ಜಾಕೀರ್ ಹುಸೇನ್ ರವರು ಸ್ವಾತಂತ್ರ್ಯೋತ್ಸವದ ಬಗ್ಗೆ ಕಿರು ಭಾಷಣ ಮಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ, ಶಾಲಾ ಆಡಳಿತ ಮಂಡಳಿ ಸದಸ್ಯರಾದ ವಿ. ಕೆ ‌ಸಲೀಂ, ಸಮಾಜಸೇವಕರಾದ ಹನೀಫ್ ಕಬಕ, ಸಿದ್ದೀಕ್ ಸೂರ್ಯ ರವರು, ಮುಖ್ಯೋಪಾಧ್ಯಾಯಿನಿ ವಿಸ್ಮಿತ ಬಂಗೇರ ಉಪಸ್ಥಿತರಿದ್ದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಯಿತು. ಶಾಲಾ ಮುಖ್ಯ ಶಿಕ್ಷಕಿ ವಿಸ್ಮಿತ ಬಂಗೇರರವರು ಸ್ವಾಗತಿಸಿದರು. ಸಹ ಶಿಕ್ಷಕಿ ಫಾತಿಮಾತ್ ಝಿಯಾನ‌ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ರಾಹಿಲರವರು ವಂದಿಸಿ ಕಾರ್ಯಕ್ರಮ ಸಂಯೋಜಿಸಿದರು.

LEAVE A REPLY

Please enter your comment!
Please enter your name here