ಸುದ್ದಿ 40, ಸುಳ್ಯ 60 : ಗ್ರಾಮ ಗ್ರಾಮಗಳಲ್ಲಿಯ ವಿವಿಧ ಹಬ್ಬಕ್ಕೆ ಕಸುಬುಗಳ, ಉತ್ಪನ್ನಗಳ, ಸೇವೆಗಳ ಮಾಹಿತಿ

0


2003-2004ರಲ್ಲಿ ಸುಳ್ಯ ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿನ ವಿವಿಧ ಕಸುಬುದಾರರ, ಸೇವೆಗಳ, ಉತ್ಪನ್ನಗಳ ಮಾಹಿತಿಯನ್ನು ಫೋನ್ ನಂಬರ್ ಮತ್ತು ಗ್ರಾಮಗಳ ನಕ್ಷೆಯೊಂದಿಗೆ ‘ಸುದ್ದಿ ಮಾಹಿತಿ ಸುಳ್ಯ’ ಪುಸ್ತಕವನ್ನು ಹೊರತರಲಾಗಿತ್ತು. ಅದರಲ್ಲಿ ಕೃಷಿಗೆ ಸಂಬಂಧಿಸಿ ಅಡಿಕೆ ತೆಂಗು ಸುಲಿಯುವವರ, ಮದ್ದು ಬಿಡುವವರ, ಬಾವಿಗೆ ಇಳಿಯುವವರ, ಗೊಬ್ಬರ ಕೊಡುವವರ, ಕೃಷಿ ಉತ್ಪನ್ನ ಖರೀದಿದಾರರ, ಹಾವು ಹಿಡಿಯುವವರ, ಸಭೆ ಸಮಾರಂಭಗಳಿಗೆ ಬೇಕಾದ ಪುರೋಹಿತರ, ಜ್ಯೋತಿಷ್ಯರ, ಅಡುಗೆ ಮಾಡುವವರ,
ಫೋಟೋಗ್ರಾಫರ‍್ಸ್‌ಗಳ, ಕಲ್ಯಾಣ ಮಂಟಪಗಳ ಎಲ್ಲರ ಮಾಹಿತಿ ಇತ್ತು. ಮೇಸ್ತ್ರಿ, ಕಲ್ಲು ಹೊಗೆ ಸರಬರಾಜುದಾರರ ಮೇಸಿಗಳ, ಇಂಜಿನಿಯರ್‌ಗಳ, ಸೆಂಟ್ರಿಂಗ್‌ನವರ, ಜೆಸಿಬಿ, ಹಿಟಾಚಿ ಮೊದಲಾದ ಎಲ್ಲಾ ಕಟ್ಟಡ ಕನ್‌ಸ್ಟ್ರಕ್ಷನ್‌ಗೆ ಸಂಬಂಧಪಟ್ಟ, ಆರೋಗ್ಯಕ್ಕೆ ಸಂಬಂಧಿಸಿ ಎಲ್ಲಾ ವೈದ್ಯರುಗಳ, ಲ್ಯಾಬೋರೇಟರಿಗಳ, ಮೆಡಿಕಲ್ ಶಾಪ್‌ಗಳ, ಜನಪ್ರತಿನಿಧಿಗಳ, ಸಂಘ ಸಂಸ್ಥೆಗಳ, ಶಿಕ್ಷಣ ಸಂಸ್ಥೆಗಳ, ದೈವ ದೇವಸ್ಥಾನಗಳ ಹೀಗೆ ತಾಲೂಕಿನ ಸಮಗ್ರ ಮಾಹಿತಿಯನ್ನು ಫೋನ್ ನಂಬರ್‌ನೊಂದಿಗೆ ಹಾಗೂ ಗ್ರಾಮದ ನಕ್ಷೆಯೊಂದಿಗೆ ಅದರಲ್ಲಿ ನೀಡಲಾಗಿತ್ತು. ಮಾಹಿತಿ ಮತ್ತು ಸೇವೆಗಾಗಿ ಪ್ರತೀ ಗ್ರಾಮದಲ್ಲಿ ಸುದ್ದಿ ಸೆಂಟರ್ ಇತ್ತು. ಆ ಪುಸ್ತಕ ಅತ್ಯಂತ ಬೇಡಿಕೆಯದ್ದಾಗಿದ್ದು, ಸುಳ್ಯದ ವ್ಯವಹಾರಕ್ಕೆ, ಅಭಿವೃದ್ಧಿಗೆ ಕಾರಣವಾಗಿತ್ತು.


ಆ ಪುಸ್ತಕದಲ್ಲಿಯ ಮಾಹಿತಿಯನ್ನು ನೋಡಿ ಜಾರ್ಖಂಡ್ ಮತ್ತು ಬಿಹಾರದಲ್ಲಿ, ತಾಲೂಕು ತಾಲೂಕುಗಳಲ್ಲಿ ಆ ರೀತಿಯ ಪುಸ್ತಕವನ್ನು ಮಾಡಲು ಕರೆ ಬಂದಿತ್ತು. ಕಾರಣಾಂತರಗಳಿಂದ ಅದನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗದಿದ್ದರೂ, ಇಂದಿಗೂ ನಮ್ಮಲ್ಲಿರುವ ಮಾಹಿತಿ ಜಗತ್ತಿನಾದ್ಯಂತ ಇರುವ ಸುಳ್ಯದವರಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಆದರೆ ಆ ಮಾಹಿತಿ ಈಗಿನ ಕಾಲಕ್ಕೆ ಅನುಕೂಲವಾಗುವಂತೆ ‘ಲೋಕಲ್ ವೋಕಲ್’ ಆಗುವ ದೃಷ್ಠಿಯಿಂದ ಹೆಚ್ಚಿನ ಮಾಹಿತಿಯೊಂದಿಗೆ, ಗ್ರಾಹಕ ಸ್ನೇಹಿ ಬದಲಾವಣೆಗಳೊಂದಿಗೆ ಫೋಟೋ, ವೀಡಿಯೋಗಳೊಂದಿಗೆ ‘ಸುದ್ದಿ ಸೆಂಟರ್’ನಲ್ಲಿ ದಾಖಲಾಗಲಿದೆ. ಅದನ್ನು ಪುಸ್ತಕ ರೂಪದಲ್ಲಿ ಮಾತ್ರವಲ್ಲ ಡಿಜಿಟಲ್ ರೂಪದಲ್ಲಿ ಹೊರಗೆ ತರಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಸುದ್ದಿ 40, ಸುಳ್ಯ 60 ಹಬ್ಬಕ್ಕೆ ಮೊದಲು ಆ ಎಲ್ಲಾ ಮಾಹಿತಿಗಳನ್ನು ಗ್ರಾಮ ಗ್ರಾಮಗಳಲ್ಲಿ ಸಂಗ್ರಹಿಸಿ ಜಾಗತಿಕ ಮಾಹಿತಿಯಾಗಿ ಮಾಡಬೆಕೆಂಬ ಆಲೋಚನೆ ನಮ್ಮಲ್ಲಿದೆ. ಸುಳ್ಯದ ಜನತೆ ಆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಳ್ಯದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.
-ಡಾ. ಶಿವಾನಂದ ಯು.ಪಿ., 9448120911


ಪುತ್ತೂರು ಬೆಳ್ತಂಗಡಿಗಳಲ್ಲಿಯೂ ಆಯಾ ತಾಲೂಕಿನ ಮಾಹಿತಿ ಪುಸ್ತಕಗಳನ್ನು ಹೊರತರಲಾಗಿತ್ತು. ಆದರೆ ಅದು ಸುಳ್ಯದಷ್ಟು ಸಮಗ್ರವಾಗಿ ಇರಲಿಲ್ಲ. ಈ ಸಲ ಪುತ್ತೂರು, ಬೆಳ್ತಂಗಡಿ, ಕಡಬ ತಾಲೂಕುಗಳಲ್ಲಿಯೂ ಸುಳ್ಯದಂತೆ ಸಮಗ್ರ ಮಾಹಿತಿ ಪುಸ್ತಕವನ್ನು ತರಬೇಕೆಂಬ ಆಲೋಚನೆಯಲ್ಲಿದ್ದೇವೆ. ಇದಕ್ಕೆ ಪ್ರೋತ್ಸಾಹ ನೀಡುವವರು ಸಂಪರ್ಕಿಸಬೇಕಾಗಿ ಬಯಸುತ್ತೇನೆ.
-ಡಾ. ಶಿವಾನಂದ ಯು.ಪಿ., 9448120911

LEAVE A REPLY

Please enter your comment!
Please enter your name here