ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ, ಅಪಪ್ರಚಾರ ದೂರವಾಗಿ, ಭಕ್ತರಲ್ಲಿ ಕ್ಷೇತ್ರದ ಮೇಲೆ ಶ್ರದ್ಧೆ, ಭಕ್ತಿ ವೃದ್ಧಿಯಾಗುವಂತೆ ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲೆ, ನಗರ ಪ್ರಖಂಡ ಹಾಗೂ ಪರಿವಾರ ಸಂಘಟನೆಗಳಿಂದ ಆ.18ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಹಾಗೂ ಶಿವ ಪಂಚಾಕ್ಷರಿ ಪಠಣ ಮಾಡಿದರು. ಮಹಾಲಿಂಗೇಶ್ವರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ 108 ಸಾಮೂಹಿಕ ಶಿವ ಪಂಚಾಕ್ಷರಿ ಪಠಣ ಮಾಡಿದರು.

ಬಳಿಕ ಮಾತನಾಡಿದ ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನರವರು, ರಾಜ್ಯದಾದ್ಯಂತ ಇರುವ ಸನಾತನ ಹಿಂದು ಧಾರ್ಮಿಕ ಶ್ರದ್ಧಾ ಕೇಂದ್ರಗಳ ರಕ್ಷಣೆಗಾಗಿ ವಿಶ್ವಹಿಂದು ಪರಿಷತ್ ಸಂಕಲ್ಪ ಮಾಡಿದೆ. ಧರ್ಮಸ್ಥಳ ಕ್ಷೇತ್ರದ ಮೇಲೆ ಆಗುತ್ತಿರುವ ಅವಹೇಳನ ಮಾಡುತ್ತಿರುವ ವಿರುದ್ಧ ಮತ್ತು ಧರ್ಮಸ್ಥಳವನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕದ ಸಮಸ್ತ ಹಿಂದು ಧಾರ್ಮಿಕ ಕ್ಷೇತ್ರಗಳಿಗೆ ರಕ್ಷಣೆ ನೀಡಬೇಕು ಹಾಗೂ ಹಿಂದು ಧರ್ಮದ ಮೇಲಾಗುತ್ತಿರುವ ಅವಹೇಳನ, ಅಪಹಾಸ್ಯಗಳನ್ನು ನಿಲ್ಲಿಸಬೇಕು. ಸತ್ಯ, ಧರ್ಮಗಳಿಗೆ ಜಯವಾಗಬೇಕು. ನಮ್ಮ ಶ್ರದ್ಧಾ ಕೇಂದ್ರಗಳ ರಕ್ಷಣೆ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಉದ್ದೇಶದಿಂದ ವಿಶ್ವಹಿಂದು ಪರಿಷತ್ ಎಲ್ಲಾ ಕಡೆ ಪ್ರಾರ್ಥನೆ ಹಾಗೂ ಶಿವಪಂಚಾಕ್ಷರಿ ಜಪ ಮಾಡಲಾಗಿದೆ ಎಂದರು.

ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಮಾಜಿ ಶಾಸಕ ಸಂಜೀವ ಮಠಂದೂರು, ವಿಶ್ವಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಉಪಾಧ್ಯಕ್ಷ ವಿದ್ಯಾಧರ ಜೈನ್, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಉಪಾಧ್ಯಕ್ಷ ಸಂತೋಷ್ ರೈ ಕೈಕಾರ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರಳಿಕೃಷ್ಣ ಹಸಂತಡ್ಕ, ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಸದಸ್ಯರಾದ ಜೀವಂಧರ್ ಜೈನ್, ದೀಕ್ಷಾ ಪೈ, ವಿಶ್ವಹಿಂದು ಪರಿಷತ್ ನಗರ ಪ್ರಖಂಡದ ಅಧ್ಯಕ್ಷ ದಾಮೋದರ ಪಾಟಾಳಿ, ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಯೋಜಕ ದಿನೇಶ್ ಪಂಜಿಗ, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ, ಪ್ರಮುಖರಾದ ಸೀತಾರಾಮ ರೈ ಕೆದಂಬಾಡಿ, ಸತೀಶ್ ನಾೖಕ್, ಪರ್ಲಡ್ಕ, ಯು.ಲೋಕೇಶ್ ಹೆಗ್ಡೆ, ಶಿವಶಂಕರ ಭಟ್, ರತ್ನಾಕರ ನಾೖಕ್, ನಿವೃತ್ತ ಎಸ್.ಐ ರಾಮ ನಾಯ್ಕ, ಪಿಎಲ್ಡಿ ಬ್ಯಾಂಕ್ ಕೋಶಾಧಿಕಾರಿ ಯುವರಾಜ ಪೆರಿಯತ್ತೋಡಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.