ಪುತ್ತೂರು: ಜವಾಹರ್ ಲಾಲ್ ಮಂಚ್ ದ.ಕ ಮಂಗಳೂರು ಮತ್ತು ವಾತ್ಸಲ್ಯಮಯಿ ಮಹಿಳಾ ಅಭಿವೃದ್ದಿ ಹಾಗು ಸಂಶೋಧನ ಸಂಸ್ಥೆ ಬಾಳ್ತಿಲ ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ ಸಹಿತಿ ಹಲವು ಸ್ಪರ್ಧೆಗಳು ಆ.24ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಜವಾಹರ್ ಲಾಲ್ ಮಂಚ್ ಇದರ ಜಿಲ್ಲಾಧ್ಯಕ್ಷೆಯಾಗಿರುವ ನ್ಯಾಯವಾದಿ ಶೈಲಜಾ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಇದೊಂದು ಮಕ್ಕಳ ಪ್ರತಿಭೆಗಳನ್ನು ವಿಕಸನ ಮಾಡುವ ಕಾರ್ಯಕ್ರಮವಾಗಿದ್ದು, ಬೆಳಗ್ಗೆ ವಿವಿಧ ಸ್ಪರ್ಧೆಗಳು ನಡೆಯಲಿದೆ. ಮಕ್ಕಳಿಗೆ ಮುದ್ದು ಕೃಷ್ಣ ವೇಷ, ಯಶೋಧ ಕೃಷ್ಣ ವೇಷ, ಮೆಹಂದಿ, ಚಿತ್ರಕಲಾ, ಬೆಂಕಿ ಬಳಸೆ ಅಡುಗೆ ಸ್ಪರ್ಧೆ ನಡೆಯಲಿದೆ. ಬಳಿಕ ಶ್ರೀಶೈಲ ಕಲಾ ನೃತ್ಯ ತಂಡದಿಂದ ನವಶಕ್ತಿ ನೃತ್ಯ ರೂಪಕ ನಡೆಯಲಿದೆ ಎಂದು ಹೇಳಿದ ಅವರು ಸಭಾ ಕಾರ್ಯಕ್ರಮವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರಕಾರದ ಸಭಾಧ್ಯಕ್ಷ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ ಸಹಿತ ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ನಡೆಯುವ ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಎಮ್.ಎಲ್.ಸಿ ಹರೀಶ್ ಕುಮಾರ್, ಜಿ.ಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಸಹಿತ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜವಾಹರ್ ಲಾಲ್ ಮಂಚ್ ಇದರ ತಾಲೂಕು ಸಂಯೋಜಕರಾದ ನ್ಯಾಯವಾದಿ ರಮ್ಲತ್ ಎಮ್ ಸಾಮೆತ್ತಡ್ಕ, ಪ್ರವೀಣ್ ಆಚಾರ್ಯ, ಸದಸ್ಯೆ ಜಯಶೀಲ, ವಿದ್ಯಾರ್ಥಿ ಒಕ್ಕೂಟದ ರಾಜ್ಯ ಅಧ್ಯಕ್ಷ ಶೌರ್ಯ ಉಪಸ್ಥಿತರಿದ್ದರು.