ವಲಯ ಕಾಂಗ್ರೆಸ್ ಕೆಯ್ಯೂರು ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಮತ್ತು ವೀರಯೋಧರಿಗೆ ಸನ್ಮಾನ ಕಾರ್ಯಕ್ರಮ 

0

ಕೆಯ್ಯೂರು ವಲಯ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವೀರಯೋಧರಿಗೆ ಸನ್ಮಾನ ಕಾರ್ಯಕ್ರಮವು ಬ್ರಹ್ಮಶ್ರೀ ಕಾಂಪ್ಲೆಕ್ಸ್ ದೇವಿನಗರ ಕೆಯ್ಯೂರಿನಲ್ಲಿ ನಡೆಯಿತು. 

ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣವನ್ನು ವಲಯ ಕಾಂಗ್ರೆಸ್ ಕೆಯ್ಯೂರು ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು ನೇರವೇರಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಐದು ಮಂದಿ  ವೀರಯೋಧರಾದ ದಿವಾಕರ ರೈ ಬೊಳಿಕಲ, ಮಾಧವ ಪೂಜಾರಿ ಕೆಂಗುಡೇಲು,ಧರ್ಣಪ್ಪ ಪೂಜಾರಿ ಕೆಯ್ಯೂರು, ರಮೇಶ್ ರೈ ಅಬ್ಬೆ ಜಾಲು, ಮನು ಕುಮಾರ್ ಕಣಿಯಾರು ಇವರಿಗೆ ಶಾಲು, ಪೇಟ, ಸ್ಮರಣಿಕೆ ಹಾಗೂ ಹಣ್ಣು ಹಂಪಲುಗಳನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರುಗಳು, ಬೂತು ಅಧ್ಯಕ್ಷರು, ಮಹಿಳಾ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಘಟಕದ ಎಲ್ಲಾ ಸದಸ್ಯರು,ಪದಾಧಿಕಾರಿಗಳು ಭಾಗವಹಿಸಿದರು. ವಲಯ ಕಾಂಗ್ರೆಸ್  ಕೆಯ್ಯೂರು ಪ್ರಧಾನ ಕಾರ್ಯದರ್ಶಿ  ಹನೀಫ್ ಕೆ.ಎಂ ಸ್ವಾಗತಿಸಿ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನ ಸಮಿತಿ ಸದಸ್ಯ ದಾಮೋದರ ಪೂಜಾರಿ ಕೆಂಗುಡೇಲು ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ನಂತರ ಸಿಹಿ ತಿಂಡಿ ವಿತರಣೆ ನಡೆಯಿತು.

LEAVE A REPLY

Please enter your comment!
Please enter your name here