ಪುತ್ತೂರು: ದೂರು ವಾಪಸ್ ಪಡೆದುಕೊಳ್ಳುವಂತೆ ಹೇಳಿ ವ್ಯಕ್ತಿಯೋರ್ವರಿಗೆ ಬೆದರಿಕೆಯೊಡ್ಡಿರುವ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಕಲ್ಲಾರೆ ರಾಘವೇಂದ್ರ ಮಠದ ಬಳಿಯ ನಿವಾಸಿ ಗುರುಪ್ರಸಾದ್ ನಾಯಕ್ ಎನ್.(45ವ)ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.ಆ.19ರಂದು ಸಂಜೆ ಆರೋಪಿತರಾದ ಶ್ರೀಮತಿ ರೇಷ್ಮಾ ಮೇರಿ ರೆಬೆಲ್ಲೊ ಮತ್ತು ಅವರ ಗಂಡ ಕ್ಲಮೆಂಟ್ ಪಿಂಟೋ ಎಂಬವರು ನಮ್ಮ ಮನೆಯ ಆವರಣದೊಳಗೆ ಅಕ್ರಮವಾಗಿ ಪ್ರವೇಶಿಸಿ,ಅವಾಚ್ಯ ಶಬ್ದಗಳಿಂದ ನಿಂದಿಸಿ, ನಿನ್ನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತೇವೆ, ನೀನು ದೂರನ್ನು ವಾಪಸ್ ಪಡೆಯಬೇಕು ಎಂದು ಹೇಳಿ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ಆರೋಪಿಸಿದ್ದಾರೆ.ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕಲಂ 329(3), 352,351(2) ಜೊತೆಗೆ 3(5) BNS 2023 ಯಂತೆ ಪ್ರಕರಣ(ಅ.ಕ್ರ.74/2025) ದಾಖಲಾಗಿರುತ್ತದೆ.