ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ ತಾಲೂಕು ಮಟ್ಟದ ಖೋ-ಖೋ ಪಂದ್ಯಾಟವು ಸರಕಾರಿ ಪ.ಪೂ. ಕಾಲೇಜು ಕೊಂಬೆಟ್ಟು ಇಲ್ಲಿ ನಡೆಯಿತು.ಈ ಸ್ಪರ್ಧೆಯಲ್ಲಿ ನರೇಂದ್ರ ಪ.ಪೂ.ಕಾಲೇಜಿನ ವಿದ್ಯಾರ್ಥಿಗಳ ತರುಣವರ್ಗದ ಬಾಲಕ ಮತ್ತು ಬಾಲಕಿಯರ ಎರಡು ತಂಡಗಳು ಭಾಗವಹಿಸಿ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ಕೃತಿ ಎಚ್., ಸಿಂಚನಾ ಎಸ್. ಎಮ್.,ಶೀಲಾ ಎಸ್. ,ಶಷ್ಟಿಕಾ, ದ್ವಿತೀಯ ವಿಜ್ಞಾನ ವಿಭಾಗದ ಶ್ರಾವ್ಯಶ್ರೀ ಕೆ.,ಪ್ರತೀಕ್ಷಾ, ಪ್ರಥಮ ವಾಣಿಜ್ಯ ವಿಭಾಗದ ಸಿಂಚನಾ, ಧನ್ಯಾ, ಯಜ್ಞಶ್ರೀ, ಪ್ರಥಮ ವಿಜ್ಞಾನ ವಿಭಾಗದ ಪೂರ್ವಿ ಕೆ.ಜೆ.,ಯಶಸ್ವಿ ನಾಯಕ್,ಪಿ.ಮಾನಸ ಭಾಗವಹಿಸಿದರು. ಪ್ರಥಮ ವಾಣಿಜ್ಯ ವಿಭಾಗದ ಧನ್ಯಾ ಕೆ.ಉತ್ತಮ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು.
ಈ ತಂಡವು ಪವನ್ ಕುಮಾರ್ ಮತ್ತು ದಿವ್ಯಾ ಎಮ್. ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತದೆ.ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲರು,ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.