ಪುತ್ತೂರು: ಇರ್ದೆ ಹಾಲು ಉತ್ಪಾದಕರ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 89,842.89 ಲಾಭಗಳಿಸಿ, ಸದಸ್ಯರಿಗೆ ಪ್ರತಿ ಲೀಟರ್ ಹಾಲಿಗೆ 43 ಪೈಸೆ ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಶುಭಕರ ರೈ ಬಿ. ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಣೆ ಮಾಡಿದರು.
ಸಭೆಯು ಆ.20ರಂದು ಸಂಘದ ವಠಾರದಲ್ಲಿ ನಡೆಯಿತು. ಸಂಘವು ವರದಿ ವರ್ಷಾಂತ್ಯಕ್ಕೆ ಸದಸ್ಯರಿಂದ ರೂ.48,620 ಪಾಲು ಬಂಡವಾಳ ಹೊಂದಿದೆ. ರೂ.19,800 ಪಾಲು ಬಂಡವಾಳವನ್ನು ಒಕ್ಕೂಟದಲ್ಲಿ ತೊಡಗಿಸಿಕೊಳ್ಳಲಾಗಿದೆ. ರೈತರಿಂದ 81,378.6 ಲೀಟರ್ ಹಾಲು ಖರೀದಿಸಿ, 8,359.8 ಲೀಟರ್ ಹಾಲು ಸ್ಥಳೀಯವಾಗಿ ಹಾಗೂ 396.1ಲೀ. ಸಮೃದ್ಧಿ ಹಾಲು ಮಾರಾಟ ಮಾಡಲಾಗಿದೆ. 577 ಬ್ಯಾಗ್ ಪಶು ಆಹಾರ, 875 ಕೆ.ಜಿ ಲವಣ ಮಿಶ್ರಣ, 284 ಕೆಜಿ ಸಮೃದ್ಧಿ ಮಾರಾಟ ಮಾಡಲಾಗಿದೆ. ಸಂಘ ಗಳಿಸಿದ ಲಾಭವನ್ನು ಉಪ ನಿಬಂಧನೆಯಂತೆ ವಿಂಗಡಿಸಲಾಗಿದೆ ಎಂದರು.
ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಾಲತಿ ಪಿ. ಮಾತನಾಡಿ, ಹೈನುಗಾರಿಕೆಗೆ ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಮಾಹಿತಿ ನೀಡಿದರು.
ಬಹುಮಾನ ವಿತರಣೆ
ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಹರಿಪ್ರಕಾಶ್ ಬೈಲಾಡಿ(ಪ್ರ), ಸರೋಜ ಎಂ.(ದ್ವಿ), ದಿನೇಶ್ ರೈ ಬಿ(ತೃ) ಬಹುಮಾನ ಹಾಗೂ ಎಲ್ಲಾ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಬಹುಮಾನ ಹಾಗೂ ಲವಣ ಮಿಶ್ರಣ ವಿತರಿಸಲಾಯಿತು. ನಿರ್ದೇಶಕರಾದ ಪುಷ್ಪರಾಜ ಶೆಟ್ಟಿ ಎಸ್., ಚಂದ್ರಶೇಖರ ರೈ, ರವೀಂದ್ರ ಶೆಟ್ಟಿ ಕೆ., ಆನಂದ ಗೌಡ ಎ., ವೆಂಕಪ್ಪ ನಾಯ್ಕ ಯಂ., ಸದಾನಂದ ರೈ ಸಿ, ಸುಧಾಕರ ರೈ ಬಿ., ಅಜಿತಾ ಶಂಕರಿ ಯಸ್, ಸರೋಜ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಕ್ಷ ಶುಭಕರ ರೈ ಸ್ವಾಗತಿಸಿದರು. ಕಾರ್ಯದರ್ಶಿ ಜೆ.ರಾಜರಾಮ ಭಟ್ ವಾರ್ಷಿಕ ವರದಿ ಹಾಗೂ ಆಯ-ವ್ಯಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ದಿನೇಶ್ ರೈ ವಂದಿಸಿದರು. ಸಹಾಯಕ ಹಮೀದ್ ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಹೈನುಗಾರಿಕೆಯನ್ನು ಕೇವಲ ಆರ್ಥಿಕ ವ್ಯವಹಾರದ ದೃಷ್ಠಿಯಿಂದ ನೋಡದೆ ಕೃಷಿಯ ಒಂದು ಭಾಗವಾಗಿ ಮಾಡಿದಾಗ ಲಾಭದಾಯಕವಾಗಲಿದೆ. ಪ್ರಸ್ತುತ ದಿನಗಳಲ್ಲಿ ಸಂಘದಲ್ಲಿ ಹಾಲು ಸಂಗ್ರಹಣೆ ಕಡಿಮೆಯಾಗುತ್ತಿದೆ. ಒಕ್ಕೂಟ ಹಾಗೂ ಸರಕಾರದಿಂದ ದೊರೆಯುವ ವಿವಿಧ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಹೈನುಗಾರಿಕೆ ಮಾಡುವ ಮೂಲಕ ಹಿರಿಯರು ಕಟ್ಟಿ ಬೆಳೆಸಿ ಸಹಕಾರ ಸಂಘವನ್ನು ಉಳಿಸಬೇಕು.
-ಶುಭಕರ ರೈ, ಅಧ್ಯಕ್ಷರು