ಪುತ್ತೂರು: ಪವಿತ್ರ ಕುರ್ಆನ್ನ್ನು ಕೈಬರಹದ ಮೂಲಕ ಬರೆದಿರುವ ಬೈತಡ್ಕದ ಫಾತಿಮಾ ಸಜ್ಲಾ ಅವರನ್ನು ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಎಜುಕೇಶನಲ್ ಎಕ್ಸಲೆನ್ಸ್ ಫೌಂಡೇಶನ್ನ ಅಧ್ಯಕ್ಷ ಅಮ್ಜದ್ ಖಾನ್ ಪೋಳ್ಯ, ಖ್ಯಾತ ತರಬೇತುದಾರ ರಫೀಕ್ ಮಾಸ್ಟರ್, ಸಾಲ್ಮರ ದಾರುಲ್ ಹಸನಿಯಾ ಸಂಸ್ಥೆಯ ಪ್ರ.ಕಾರ್ಯದರ್ಶಿ ಹಸನ್ ಹಾಜಿ, ಕುಂಬ್ರ ಮರ್ಕಝುಲ್ ಹುದಾದ ಕಾರ್ಯದರ್ಶಿ ಅಬ್ದುಲ್ ರಶೀದ್ ಸಂಪ್ಯ ಮೊದಲಾದವರು ಫಾತಿಮಾ ಸಜ್ಲಾ ಅವರನ್ನು ಸನ್ಮಾನಿಸಿದರು. ಫಾತಿಮಾ ಸಜ್ಲಾ ಅವರ ತಂದೆ ಬಿ.ಪಿ ಇಸ್ಮಾಯಿಲ್ ಹಾಜಿ ಬೈತಡ್ಕ ಉಪಸ್ಥಿತರಿದ್ದರು.