ಪುತ್ತೂರು: ಪುತ್ತೂರಿನ ಹೆಸರಾಂತ ಸ್ತ್ರೀ ರೋಗ ತಜ್ಞೆ, ಸಮಾಜ ಸೇವಕಿ ಡಾ. ಗೌರಿ ಪೈ 88ನೇ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಅವರ ಮನೆಗೆ ಭೇಟಿ ನೀಡಿದ ಶ್ರೀ ಕ್ಷೇತ್ರ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಡಾ. ಗೌರಿ ಪೈ ಅವರಿಗೆ ಶಾಲು ಹೊದಿಸಿ ಫಲ ಪುಷ್ಪ ನೀಡಿ ಗೌರವಿಸಿ ಶುಭ ಕೋರಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಟ್ರಸ್ಟಿ ಗಣಪತಿ ಪೈ, ದಿನೇಶ್ ಕಾಮತ್, ಪ್ರಶಾಂತ್ ಪೈ, ಪ್ರಶಾಂತ್ ಹೆಗಡೆ, ಸದಾಶಿವ ಪೈ, ಕೆ ಸಿ ಪ್ರಭು ಸೇರಿದಂತೆ ಶಾಂತೇರಿ ಪ್ರಭು, ಉಪಸ್ಥಿತರಿದ್ದರು. ಟ್ರಸ್ಟ್ ವತಿಯಿಂದ ಮಂಜೇಶ್ವರದಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಬಿಎಸ್ ಸಿ ಶಾಲೆ ಒಂದು ಕೊಠಡಿಯ ನಿರ್ಮಾಣದ ವೆಚ್ಚವನ್ನು ಡಾ. ಗೌರಿ ಪೈ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
Home ಇತ್ತೀಚಿನ ಸುದ್ದಿಗಳು ಡಾ. ಗೌರಿ ಪೈ 88ನೇ ಹುಟ್ಟುಹಬ್ಬ- ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಾಲಯದ ಆಡಳಿತ ಮಂಡಳಿಯಿಂದ ಗೌರವಾರ್ಪಣೆ