ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ಗೆ ಕೆ.ಎಸ್. ಗೌಡ ಪಿ.ಯು ಕಾಲೇಜು ನಿಂತಿಕಲ್ಲು ಇದರ ಪ್ರಾಂಶುಪಾಲರಾದ ಸದಾನಂದ ರೈ ಇವರು ಆ.22ರಂದು ಭೇಟಿ ನೀಡಿದರು.
ಮಕ್ಕಳ ಜೊತೆಗೆ ಸಂವಾದ ನಡೆಸಿ ವಿದ್ಯಾರ್ಥಿಗಳಿಗೆ ಹಲವಾರು ಸಾಧಕರ ಉದಾಹರಣೆಯನ್ನು ನೀಡುವ ಮೂಲಕ ಜೀವನದಲ್ಲಿ ಸಾಧಕನಿಗೆ ಅಸಾಧ್ಯವಾದುದು ಯಾವುದು ಇಲ್ಲ ಎನ್ನುವ ಮೂಲಕ ಮುಂದಿನ ಶೈಕ್ಷಣಿಕ ಜೀವನಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಗೋಕುಲ್ನಾಥ್ ಪಿ.ವಿ. ಇವರು ವಿದ್ಯಾರ್ಥಿಗಳು ಜೀವನವನ್ನು ಹೇಗೆ ಎದುರಿಸಿ ಬದುಕಬೇಕು ಎಂದು ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರಮೀಳಾ ಎನ್. ಡಿ. ನಿರೂಪಿಸಿದರು.