ಸವಣೂರು: ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಸವಣೂರು ಗ್ರಾಮದ ಕೆಡೆಂಜಿಯ ಮಾನ್ವಿ. ಕೆ. ಟಿ. ಅವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ವಿಧ್ವಾನ್ ಗೋಪಾಲಕೃಷ್ಣ ಕೆ. ವೀರಮಂಗಲ ಇವರ ಶಿಷ್ಯೆಯಾಗಿದ್ದು, ಸವಣೂರು ಗ್ರಾಮದ ಕೆಡೆಂಜಿ ನಿವಾಸಿ ಸವಣೂರು ಗ್ರಾ.ಪಂ. ಸದಸ್ಯ ತೀರ್ಥರಾಮ ಕೆಡೆಂಜಿ ಮತ್ತು ಭಾರತೀಯ ಅಂಚೆ ಇಲಾಖೆಯ ಉದ್ಯೋಗಿ ವಿಜಯ ದಂಪತಿಗಳ ಪುತ್ರಿ.