ಇಂದಿನ ಕಾರ್ಯಕ್ರಮ (23-08-2025)

0

ಕೆಮ್ಮಾಯಿ ಭರತಪುರದಲ್ಲಿ ಒಳಿತು ಮಾಡು ಮನುಷ ಸಾಂತ್ವನ ಸೇವಾಶ್ರಮದಿಂದ ಬೆಳಿಗ್ಗೆ ೧೧.೩೦ರಿಂದ ಕಿಡ್ನಿ ಡಯಾಲಿಸೀಸ್ ರೋಗಿಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ
ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ, ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಸೋಣ ಶನಿವಾರ ಆಚರಣೆ, ಬೆಳಿಗ್ಗೆ ೮.೩೦ಕ್ಕೆ ಅಶ್ವತ್ಥ ಪೂಜೆ, ೯.೩೦ಕ್ಕೆ ನಾಗತಂಬಿಲ, ೧೦ರಿಂದ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ
ಪೆರ್ನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಬೆಳಿಗ್ಗೆ ೧೦ಕ್ಕೆ ವಾರ್ಷಿಕ ಸಾಮಾನ್ಯ ಸಭೆ
ನೆಹರು ನಗರ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಶಿವಾಜಿ ಯುವಕ ಮಂಡಲದಿಂದ ಕಲ್ಲೇಗ ಮೊಸರು ಕುಡಿಕೆ, ಬೆಳಿಗ್ಗೆ ೧೦ಕ್ಕೆ ಮ್ಯಾಟ್ ಅಂಕಣದ ಪುರುಷರ ಕಬಡ್ಡಿ ಪಂದ್ಯಾಟ, ಸಂಜೆ ೫ರಿಂದ ವಿವೇಕಾನಂದ ಕಾಲೇಜಿನ ಮುಂಭಾಗದಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಸ್ಪರ್ಧೆ, ರಾತ್ರಿ ೭ರಿಂದ ಸನಾತನ ರಾಷ್ಟ್ರಾಂಜಲಿ
ಕೊಡಿಪಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಬೆಳಿಗ್ಗೆ ತೀರ್ಥ ಸ್ನಾನ (ಕೊಡಿಪ್ಪಾಡಿ ತೀರ್ಥ), ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ
ಇರ್ದೆ ಬೆಂದ್ರ್ ತೀರ್ಥ ಕ್ಷೇತ್ರದಲ್ಲಿ ತೀರ್ಥ ಅಮಾವಾಸ್ಯೆ ಪ್ರಯುಕ್ತ ತೀರ್ಥ ಸ್ನಾನ
ಪುತ್ತೂರು ತಂಕಿಲ ದರ್ಶನ್ ಕಲಾ ಮಂದಿರದಲ್ಲಿ ದ.ಕ. ಜಿಲ್ಲಾ ಪರವಾನಿಗೆ ಭೂಮಾಪಕರ ಸಂಘದ ಪದಗ್ರಹಣ
ತೆಂಕಿಲ ಟ್ರೂ ವ್ಯಾಲ್ಯೂನಲ್ಲಿ ಉಪಯೋಗಿಸಿದ ಕಾರುಗಳ ವಿನಿಮಯ, ಮಾರಾಟ ಮೇಳ
ಹಾರಾಡಿ ಭಾರತ್ ಆಟೋ ಕಾರ್‍ಸ್‌ನಿಂದ ಆಲಂಕಾರು ಪೇಟೆಯಲ್ಲಿ ಮಾರುತಿ ಗ್ರಾಮೀಣೋತ್ಸವ
ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಿಎಸ್‌ಎನ್‌ಎಲ್ ವತಿಯಿಂದ ಸಿಮ್ ಮೇಳ
ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಶ್ರಾವಣ ಮಾಸ ಸೋಣ ಶನಿವಾರ ಪ್ರಯುಕ್ತ ಬಲಿವಾಡು ಕೂಟ, ಮಹಾಪೂಜೆ
ಪೋಳ್ಯದಲ್ಲಿ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್, ವರ್ಲ್ಡ್ ವೈಡ್ ವೆಟರ್ನರಿ ಸರ್ವಿಸ್ ವತಿಯಿಂದ ದೇಸಿ ಮನೆ ನಾಯಿಗಳಿಗೆ ಉಚಿತ ಸಂತಾನಹರಣ ಚಿಕಿತ್ಸೆ
ಪಂಜ ಕಿಸಾನ್ ಆಗ್ರೋ ಸರ್ವೀಸ್‌ನಲ್ಲಿ ಕುಕ್ಕಿಲ ಎಂಟರ್‌ಪ್ರೈಸಸ್‌ನಿಂದ ಪೋರ್ಟೇಬಲ್ ಜನರೇಟರ್ ಉಚಿತ ಸರ್ವೀಸ್ ಕ್ಯಾಂಪ್
ಅಳಿಕೆ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನದ ವಠಾರದಲ್ಲಿ ಮಧ್ಯಾಹ್ನ ೨.೩೦ರಿಂದ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ, ಚಿಗುರೆಲೆ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ವತಿಯಿಂದ ಸ್ವಾತಂತ್ರ್ಯೋತ್ಸವ ಕವಿಗೋಷ್ಠಿ

LEAVE A REPLY

Please enter your comment!
Please enter your name here