ಕೆಯ್ಯೂರು: ಅಭಿನವ ಕೇಸರಿ ಮಾಡಾವು ಇದರ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ ಅಂಗವಾಗಿ ವಿವಿಧ ಕ್ರೀಡಾಕೂಟ ಮಾಡಾವು ಕಟ್ಟೆಯ ಅಯ್ಯಪ್ಪ ಭಜನಾ ಮಂದಿರದ ಬಳಿ ಆ.24ರಂದು ನಡೆಯಿತು.

ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಶಶಿಧರ ರಾವ್ ಬೊಳಿಕ್ಕಳ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸಭಾಧ್ಯಕ್ಷತೆಯನ್ನು ಅಯ್ಯಪ್ಪ ಭಜನಾ ಮಂದಿರ ಮಾಡಾವು ಅಧ್ಯಕ್ಷ ರವೀಂದ್ರ ರೈ ನೆಲ್ಯಾಜೆ ವಹಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಜ್ಯೋತಿ ಚಿಕಿತ್ಸಾಲಯ ಮಾಡಾವು ಡಾ. ರಾಮಚಂದ್ರ ಭಟ್, ಕ್ಲಬ್ ಜೋನ್ ಫಿಟ್ನೆಸ್ ಸೆಂಟರ್ ಮತ್ತು ಮಲ್ಟಿ ಜಿಮ್ ಸವಣೂರು ಮಾಲಕ ಶಶಿಧರನ್ ಕೆ, ನಿವೃತ್ತ ಕಾರ್ಯದರ್ಶಿ ಹಾಲು ಉತ್ಪಾದಕರ ಸಂಘ ಕೆಯ್ಯೂರು ಚಂದ್ರಹಾಸ ರೈ ಬೊಳಿಕಲ ಮಠ, ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಮಂಗಳೂರು ಸಹಾಯಕ ನಿರ್ದೇಶಕ ಪ್ರಸನ್ನ ಎಂ.ಪಿ, ನ್ಯಾಷನಲ್ ಪ್ರೊಕ್ಯೂರ್ ಮೆಂಟ್ ಮ್ಯಾನೇಜರ್ ಬಿಂದು ಮುರಳೀಧರ ಕೆಂಗುಡೇಲು, ಪ್ರಗತಿಪರ ಕೃಷಿಕ ಗೋಪಾಲ್ ದಾಸ್ ಚೆನ್ನಾವರ, ಅಭಿನವ ಕೇಸರಿ ಮಾಡಾವು ಅಧ್ಯಕ್ಷ ಶಶಿಧರ ಆಚಾರ್ಯ ಮಾಡಾವು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಸನ್ಮಾನ ಕಾರ್ಯಕ್ರಮದಲ್ಲಿ ಚೇತನ್ ಆಚಾರ್ಯ ಪೆರಿಂಜೆ ಆರ್ಟಿಸ್ಟ್, ತೇಜಸ್ ಆಚಾರ್ಯ ಆರ್ಟಿಸ್ಟ್, ಪ್ರಶ್ವಿ ಶೆಟ್ಟಿ ಬಾಲ ಪ್ರತಿಭೆ, ಬಹುಮುಖ ಪ್ರತಿಭೆ ಸೌಜನ್ಯ ಎಂ, ಯಕ್ಷಗಾನ ಕಲಾವಿದ ಧ್ಯಾನ್ ರೈ, ಇವರಿಗೆ ಸ್ಮರಣಿಕೆ ಶಾಲು ಹಾಕಿ ಸನ್ಮಾನಿಸಲಾಯಿತು. ಸಾಂದೀಪನಿ ವಿದ್ಯಾ ಸಂಸ್ಥೆ ನರಿಮೊಗರು ವಿದ್ಯಾರ್ಥಿ ಮಾನ್ವಿ ಭಗವದ್ಗೀತೆಯ 15ನೇ ಅಧ್ಯಾಯ ಕಂಠಪಾಠ ವಾಚಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಭಾರತ ಮಾತಾ ಫೋಟೋಕ್ಕೆ ಹೂವು ಅರ್ಪಿಸುವುದರ ಮೂಲಕ, ವಸಂತ ರೈ ಮಾಡಾವು ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ನಂತರ ಕಬಡ್ಡಿ ಕ್ರೀಡಾಂಗಣದ ಉದ್ಘಾಟನೆಯನ್ನು ಸುಬ್ರಾಯ ಗೌಡ ಮಾಡಾವು, ತೆಂಗಿನಕಾಯಿ ಒಡೆಯುವುದರ ಮೂಲಕ ಚಾಲನೆ ನೀಡಿದರು. ವಾಲಿಬಾಲ್ ಕ್ರೀಡಾಂಗಣವನ್ನು ಬಾಲಕೃಷ್ಣ ಶೆಟ್ಟಿ ಮಾಡಾವು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆಯನ್ನು ನೀಡಿದರು. ಜಯಂತ್ ಎಸ್ ಆರ್, ಭವಿತ್, ಅಶೋಕ್, ಮನೋಜ್ ಪ್ರಮೋದ್, ಕಿಶನ್, ಜಯದೀಪ್, ಮಂಜುಳಾ, ಭವಾನಿ ಶಂಕರ ಸಹಕರಿಸಿ ಪುಟಾಣಿಗಳ ಪ್ರಾರ್ಥನೆಯೊಂದಿಗೆ ನವ್ಯತಾ ರೈ ಮಾಡಾವು ಸ್ವಾಗತಿಸಿ, ಅರ್ಚನಾ ರೈ ವಂದಿಸಿ, ಭಾಸ್ಕರ ರೈ ಮಠ ಕಾರ್ಯಕ್ರಮ ನಿರ್ವಹಿಸಿದರು.