ಕಾಣಿಯೂರು: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪಳ್ಳತ್ತಾರು ತಕ್ವಿಯತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳ ಮೀಲಾದ್ ಸಾಹಿತ್ಯೋತ್ಸವಕ್ಕೆ ಹೆಸರು ಅನಾವರಣ ಕಾರ್ಯಕ್ರಮ ಆ.24 ರಂದು ನಡೆಯಿತು.

ಪ್ರವಾದಿ ಪೈಗಂಬರ್ ಸ ಅ ರವರ 1500ನೇ ಜನ್ಮದಿನಾಚರಣೆ ಅಂಗವಾಗಿ ರಬೀವುಲ್ ಅವ್ವಲ್ 12 ರಂದು ನಡೆಯುವ ಪಳ್ಳತ್ತಾರು ಮದ್ರಸ ವಿದ್ಯಾರ್ಥಿಗಳ ಮೀಲಾದ್ ಫೆಸ್ಟಿಗೆ ‘ನೂರೇ ಮುಜಸ್ಸಮ್’ ಎಂದೂ ವಿದ್ಯಾರ್ಥಿಗಳ ಎರಡು ತಂಡಕ್ಕೆ ಟೀಂ ಬುಖಾರಾ ಹಾಗೂ ಟೀಂ ಸಮರ್ಕಂದ್ ಎಂದು ಜಮಾಅತ್ ಅಧ್ಯಕ್ಷರಾದ ಉಪ್ಪಂಞಿ ಹಾಜಿ ಬನಾರಿ ನಾಮಕರಣ ಅನಾವರಣ ಮಾಡಿದರು.
ಪಳ್ಳತ್ತಾರು ಖತೀಬ್ ಹಾಗೂ ಸದರ್ ಉಸ್ತಾದ್ ಶೆರೀಫ್ ಸಖಾಫಿ ಸತ್ತಿಕ್ಕಲ್ಲು ಪ್ರಾಸ್ತಾವಿಕ ಮಾತನಾಡಿ ದುಆ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮಾಅತ್ ಉಪಾಧ್ಯಕ್ಷ ಯೂಸುಫ್ ಗುಂಡಿನಾರು, ಕಾರ್ಯದರ್ಶಿ ಶಂಸುದ್ದೀನ್,ಜಮಾಅತಿಗರಾದ ನವಾಝ್ ಸಖಾಫಿ , ಅಬ್ಬಾಸ್ ಏರಿಮಾರ್,ಅಬೂಬಕರ್ ಫಾಳಿಲಿ,ರಝಾಕ್ ಪಳ್ಳತ್ತಾರು,ಯಾಕೂಬ್ ತಬೂಕ್, ಇಬ್ರಾಹಿಂ ದಫ್,ಹಮೀದ್ ಕೊಡೆಂಕಿರಿ,ಶೆಬೀರ್ ಪಳ್ಳತ್ತಾರು,ಮದ್ರಸ ಅಧ್ಯಾಪಕ ಬಶೀರ್ ಸಅದಿ ಎಣ್ಮೂರು,ನಾಸಿರ್ ಫಾಳಿಲಿ ಕೂರತ್ ಹಾಗೂ ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಅಧ್ಯಾಪಕ ನಾಸಿರ್ ಸಅದಿ ಪನ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.