ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಡುಮಲೆ ಇದರ ವತಿಯಿಂದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಜೃಂಭಣೆಯಿಂದ ನಡೆಯಲಿರುವುದು ಎಂದು ಸಮಿತಿ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾರ್ಯಕ್ರಮಗಳು
ಆ. 27 ರಂದು ಪೂರ್ವಾಹ್ನ ಗಂ 8 ಕ್ಕೆ ಕದಿರು ಪೂಜೆ,9 ಕ್ಕೆ ಶ್ರೀ ಗಣಪತಿ ವಿಗ್ರಹ ಪ್ರತಿಷ್ಠೆ, ಪೂರ್ವಾಹ್ನ ಗಂಟೆ 9 ರಿಂದ ಭಜನಾ ಕಾರ್ಯಕ್ರಮ,10 ರಿಂದ ಕಲಾರತ್ನ ಶಂ. ನಾ. ಅಡಿಗ ಕುಂಬ್ಲೆ ಇವರಿಂದ ಹರಿಕಥಾ ಸತ್ಸಂಗ “ಭೂಕೈಲಾಸ”,ಪೂರ್ವಾಹ್ನ ಗಂ 11 ಕ್ಕೆ ಮಕ್ಕಳಿಗೆ ಗಣೇಶನ ಚಿತ್ರಬಿಡಿಸುವುದು ಮತ್ತು ಭಕ್ತಿಗೀತೆ, ಸಾರ್ವಜನಿಕರಿಗೆ ಭಕ್ತಿಗೀತೆ ಸ್ಪರ್ಧೆ,ಮಧ್ಯಾಹ್ನ 12.30ಕ್ಕೆ ಶ್ರೀ ದೇವರಿಗೆ ಮಹಾಪೂಜೆ ಶ್ರೀ ಮಹಾಗಣಪತಿ ದೇವರಿಗೆ ಮಹಾಪೂಜೆ ಮಹಾಮಂಗಳಾರತಿ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.
ಆಕರ್ಷಣಿಯ ವೈಭವದ ಶೋಭಾಯಾತ್ರೆ
ಸಂಜೆ ಗಂಟೆ 4 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ,4.30ಕ್ಕೆ ಶ್ರೀ ಗಣಪತಿ ದೇವರ ಶೋಭಾಯಾತ್ರೆ ,ಪುತ್ತೂರು ದ್ವಾರಕಾ ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ ರವರು ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.
ಶ್ರೀ ಗಣೇಶನ ಆಕರ್ಷಣಿಯ ವೈಭವದ ಶೋಭಾಯಾತ್ರೆ ಶೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರ ಸನ್ನಿದಿಯಿಂದ ಗೊಂಬೆ ಕುಣಿತ ಭಜನ, ಸಿಂಗಾರಿ ಮೇಳ, ವಾಯಲಿನ್, ಇತ್ಯಾದಿ ವೈವಿಧ್ಯಮಯ ಆಕರ್ಷಣೆಗಳೊಂದಿಗೆ ಮೈಂದನಡ್ಡ-ಕ್ಯೂಲ-ಮುಡಿಪಿನಡ್ಡ ಮಾರ್ಗವಾಗಿ ಪಟ್ಟೆಗೆ ಸಾಗಿಬರಲಿದೆ. ಬಳಿಕ ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲ ಇವರ ಸಹಕಾರದೊಂದಿಗೆ ಪಟ್ಟೆ ಅರೆಪ್ಪಾಡಿ ಕ್ಷೀರಹೊಳೆಯ ದಂಡದಲ್ಲಿ ಶ್ರೀ ಗಣೇಶನಿಗೆ ವಿಶೇಷ ಪೂಜೆ ಪ್ರಸಾದ ವಿತರಣೆ ನಡೆದು ಬಳಿಕ ಶ್ರೀ ಗಣಪತಿ ವಿಗ್ರಹ ವಿಸರ್ಜನೆ ನಡೆಯಲಿದೆ. ಬಳಿಕ ಸಾರ್ವಜನಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ.