ಸಿ.ಎಸ್.ಡಬ್ಯು.ಸಿ.ಫಾಳಿಲಾ-ಫಳೀಲಾ ಕರ್ನಾಟಕ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು : ‘ಸಮಸ್ತ’ ದ ಅಧೀನದ ಫಾಳಿಲಾ-ಫಳೀಲಾ ವುಮೆನ್ಸ್ ಕಾಲೇಜ್ ಗಳ ಒಕ್ಕೂಟ ಸಿ.ಎಸ್.ಡಬ್ಯು.ಸಿ. ಇದರ ಕರ್ನಾಟಕ ಝೋನಲ್ ಸಮಿತಿಯ ವಾರ್ಷಿಕ ಮಹಾ ಸಂಗಮವು ನೇರಳಕಟ್ಟೆ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು.


‘ಸಮಸ್ತ’ ಕೇಂದ್ರ ಮುಶಾವರ ಸದಸ್ಯರಾದ ಬಿ.ಕೆ. ಅಬ್ದುಲ್‌ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.ಸಿ.ಎಸ್.ಡಬ್ಯು.ಸಿ.ಕೇಂದ್ರೀಯ ನಾಯಕರಾದ ಚುಂಗತ್ತರ ಫೈಝಿ, ಸಅದ್ ಫೈಝಿ ಮಲಪ್ಪುರಂ, ಅಬ್ದುಲ್‌ ರಶೀದ್ ಹಾಜಿ ಪರ್ಲಡ್ಕ ಅವರು ಸಮಾರಂಭದಲ್ಲಿ ಮಾತನಾಡಿದರು. ಕೇಂದ್ರೀಯ ಘಟಕದ ಚುನಾವಣಾ ವೀಕ್ಷಕರಾಗಿ ಜುನೈದ್ ಪಾರಪಳ್ಳಿ ಅವರು ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿ ಕೊಟ್ಟರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ ಅವರು ಗತ ವರ್ಷದ ವರದಿ ಮಂಡಿದಿದರು. ಸಮಿತಿಯ ನೂತನ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ಆರಿಸಲಾಯಿತು.

ಸಲಹೆಗಾರರು : ಬಂಬ್ರಾಣ ಉಸ್ತಾದ್ ಮತ್ತು ಅಬ್ದುರ್ರಶೀದ್ ಹಾಜಿ ಪರ್ಲಡ್ಕ. ಅಧ್ಯಕ್ಷರು : ಅಶ್ರಫ್ ಹಾಜಿ ಸಿಟಿ ಉಪ್ಪಿನಂಗಡಿ. ಪ್ರಧಾನ ಕಾರ್ಯದರ್ಶಿ : ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ . ಕೋಶಾಧಿಕಾರಿ : ದಾವುದುಲ್ ಹಕೀಂ ಹನೀಫಿ ಮಿತ್ತಬೈಲು. ಉಪಾಧ್ಯಕ್ಷರು : ಸಯ್ಯಿದ್ ತ್ವಾಹ ಜಿಫ್ರಿ ತಂಙಳ್ ಬೆಳ್ತಂಗಡಿ ಮತ್ತು ಅಬ್ದುಲ್‌ ಅಝೀಝ್ ಆತೂರು . ಜೊತೆ ಕಾರ್ಯದರ್ಶಿಗಳು : ತಮ್ಲಿಖ್ ದಾರಿಮಿ ಕೊಡಗು ಮತ್ತು ಅಬ್ದುರ್ರಶೀದ್ ಹನೀಫಿ ಸಜಿಪ. ಪರೀಕ್ಷಾ ಬೋರ್ಡ್ ಮತ್ತು ಐ.ಟಿ. ಚೆಯರ್ ಮ್ಯಾನ್ : ಇಬ್ರಾಹಿಂ ಬಾತಿಷಾ ಅಝ್ಹರಿ ಉಪ್ಪಿನಂಗಡಿ. ಪರೀಕ್ಷಾ ಬೋರ್ಡ್ ಮತ್ತು ಐ.ಟಿ. ಕನ್ವಿನರ್ : ತಾಜುದ್ದೀನ್ ರಹ್ಮಾನಿ ದೇರಳಕಟ್ಟೆ. ಹಾಗೂ ವಿವಿಧ ಕಾಲೇಜ್ ಗಳಿಂದ ಆರು ಮಂದಿ ಕೌನ್ಸಿಲ್ ಸದಸ್ಯರನ್ನು ಆಯ್ಕೆ ಮಾಡಲಾಯಿತು

LEAVE A REPLY

Please enter your comment!
Please enter your name here