ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ

0

412.92 ಕೋಟಿ ರೂ. ವ್ಯವಹಾರ, 1.67 ಕೋಟಿ ರೂ ಲಾಭ: ಶೇ. 14 ಡಿವಿಡೆಂಡ್: ತಾರಾನಾಥ ಕಾಯರ್ಗ

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2024-25ನೇ ಸಾಲಿನಲ್ಲಿ 412.92 ಕೋಟಿ ರೂ. ವ್ಯವಹಾರ ಮಾಡಿ 1.67 ಕೋಟಿ ರೂ. ಲಾಭಗಳಿಸಿದ್ದು, ಸದಸ್ಯರಿಗೆ ಶೇ. 14 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು. ಆ.24 ರಂದು ಸಂಘದ ಸಭಾಂಗಣದಲ್ಲಿ ಜರಗಿದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿತ್ರ- ಸಿಂಧೂರ್ ಸವಣೂರು


ಸದಸ್ಯರ ಸಹಕಾರದಿಂದಾಗಿ ಸಂಘವು ಸತತವಾಗಿ 23ನೇ ಬಾರಿಗೆ ಎ ತರಗತಿ ಆಡಿಟ್ ವರ್ಗೀಕರಣದೊಂದಿಗೆ ಶೇ. 99.25 ಸಾಲ ವಸೂಲಾತಿ ಸಾಧನೆ ಮಾಡಲಾಗಿದೆ. ವರದಿ ವರ್ಷದಲ್ಲಿ 3,525 ಸದಸ್ಯರಿದ್ದು, ರೂ 5.72 ಕೋಟಿ ಪಾಲು ಬಂಡವಾಳ ಮತ್ತು ರೂ. 40.34 ಕೋಟಿ ಠೇವಣಿ ಸಂಗ್ರಹಿಸಲಾಗಿದೆ. ವರದಿ ವರ್ಷದಲ್ಲಿ ಸದಸ್ಯರಿಗೆ ರೂ 66.10. ಕೋಟಿ ಸಾಲ ವಿತರಿಸಿ, ವರ್ಷಾಂತ್ಯಕ್ಕೆ ರೂ 58.07 ಕೋಟಿ ಹೊರಬಾಕಿ ಸಾಲ ಇರುತ್ತದೆ ಎಂದು ಹೇಳಿದರು.


ಮಾಸ್ ಸಂಸ್ಥೆಯ ಸಹಕಾರದಲ್ಲಿ ಪ್ರತಿ ದಿನ ಅಡಿಕೆ ಖರೀದಿ :
ಪ್ರತಿ ದಿನ ಮಾಸ್ ಸಂಸ್ಥೆಯ ಮೂಲಕ ಸಂಘದಲ್ಲಿ ಅಡಿಕೆ ಖರೀದಿ ವ್ಯವಹಾರ ಮಾಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ರೈತರ ಸಹಕಾರದೊಂದಿಗೆ 4.86 ಕೋಟಿ ರೂ ವ್ಯವಹಾರ ಮಾಡಲಾಗಿದೆ ಎಂದು ಅಧ್ಯಕ್ಷ ತಾರಾನಾಥ ಕಾಯರ್ಗ ತಿಳಿಸಿದರು.


ಸಂತೋಷ ತಂದಿದೆ- ಸೀತಾರಾಮ ರೈ :
ಸಂಘದ ಮಾಜಿ ಅಧ್ಯಕ್ಷ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈರವರು ಮಾತನಾಡಿ, ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಮತ್ತು ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಹಾಗೂ ನಿರ್ದೇಶಕರುಗಳು, ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕ ಕೆಲಸದಿಂದ ಸಂಘ ಒಳ್ಳೆಯ ವ್ಯವಹಾರವನ್ನು ಮಾಡಿ, 1.67 ಕೋಟಿ ರೂ ಲಾಭವನ್ನು ತಂದಿರುವುದು ತುಂಬಾ ಸಂತೋಷ ತಂದಿದೆ, ಜೊತೆಗೆ ಸಮಾಜ ಸೇವೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗುರುತಿಸುವ ಕಾರ‍್ಯವನ್ನು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಮೊನ್ನೆ ಅಚಾನಕ್ ಆಗಿ ಸವಣೂರು ಪರಿಸರದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಹಲವು ಮಂದಿ ರೈತರು ಅಡಿಕೆ, ತೆಂಗು, ರಬ್ಬರ್ ಮರಗಳನ್ನು ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಘದ ಸದಸ್ಯರಾಗಿರುವ ರೈತರಿಗೆ ತುರ್ತುಪರಿಹಾರವನ್ನು ನೀಡುವ ಬಗ್ಗೆ ಸಂಘದ ಆಡಳಿತ ಮಂಡಳಿ ಅಲೋಚಿಸಿ, ಫಂಡ್‌ವೊಂದನ್ನು ಸ್ಥಾಪಿಸುವುದು ಒಳ್ಳೆಯದು. ಈ ಹಣದಿಂದ ತುರ್ತುಪರಿಹಾರವನ್ನು ನೀಡಬಹುದು ಎಂದು ಸಲಹೆಯನ್ನು ನೀಡಿದರು.


ಪರ್ಯಾಯ ಬೆಳೆ ಅಗತ್ಯ -ರಾಕೇಶ್ ರೈ:
ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿರವರು ಮಾತನಾಡಿ ಉತ್ತಮವಾದ ಆತಿಥ್ಯವನ್ನು ಒಳಗೊಂಡ ಸಂಘದ ಮಹಾಸಭೆಯು ಹಬ್ಬದ ಸಂಭ್ರಮದಂತೆ ಕಂಡು ಬಂದಿದೆ. ರಾಜ್ಯ ಸರಕಾರ ಒಂದು ಅಡಿಕೆ ಮರ ನಾಶವಾದರೆ 16 ರೂಪಾಯಿ ಬೆಲೆ ನಿಗದಿಪಡಿಸಿದೆ, ಇದು ತೀರಾ ಕಡಿಮೆ ಆಗಿದ್ದು, ಇದನ್ನು ಹೆಚ್ಚು ಮಾಡಬೇಕು. ಅಡಿಕೆ ತೋಟದಲ್ಲಿ ಶೇಕಡಾ ೩೩ ರಷ್ಟು ಹಾನಿ ಆದರೆ ಮಾತ್ರ ಪರಿಹಾರ ಎಂಬ ಸರಕಾರದ ನಿಯಮವನ್ನು ತಿದ್ದುಪಡಿ ಮಾಡಿ, ಕಡಿಮೆ ಹಾನಿಯಾದಾಗಲ್ಲೂ ಪರಿಹಾರವನ್ನು ನೀಡುವಂತೆ ಈ ಮಹಾಸಭೆಯ ಮೂಲಕ ನಿರ್ಣಯ ಮಾಡಬೇಕು ಎಂದು ಹೇಳಿದರು. ಅಡಿಕೆಗೆ ಪರ್ಯಾಯವಾಗಿ ಕೊಕ್ಕೋ, ಕಾಫಿ, ಕಾಳು ಮೆಣಸು ಸೇರಿದಂತೆ ಇತರ ಬೆಳೆಯನ್ನು ಬೆಳೆಸುವ ಬಗ್ಗೆ ಕೃಷಿಕರಲ್ಲಿ ಆಸಕ್ತಿ ಬೆಳೆಸಲು ಸಂಘವು ಕೈಜೋಡಿಸಬೇಕು, ಇದಕ್ಕೆ ಕೃಷಿಕ ಸಮಾಜ ಸಹಕಾರ ನೀಡುತ್ತದೆ ಎಂದು ಹೇಳಿ, ಮುಂದಿನ ದಿನಗಳಲ್ಲಿ ಈ ಬಗ್ಗೆ ಕಾರ‍್ಯಾಗಾರವನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.


ಯಶಸ್ವಿನಿ ನೆಟ್‌ವರ್ಕ್ ಪುತ್ತೂರಿನಲ್ಲಿ ಆಗಬೇಕು:
ಯಶಸ್ವಿನಿ ವಿಮಾ ಯೋಜನೆಯ ಬಗ್ಗೆ ಅರಿಯಡ್ಕ ಕೃಷ್ಣ ರೈ ತಳಮನೆ ಪುಣ್ಚಪ್ಪಾಡಿರವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಘದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್‌ರವರು ಈಗ ಮಂಗಳೂರಿನ ಆಸ್ಪತ್ರೆಗಳಲ್ಲಿ ಮಾತ್ರ ಯಶಸ್ವಿನಿ ಯೋಜನೆಯ ಸೌಲಭ್ಯ ಸಿಗುತ್ತದೆ. ಈ ಸೌಲಭ್ಯ ಪುತ್ತೂರಿನಲ್ಲೂ ಸಿಗುವಂತೆ ಆಗಬೇಕು. ಈ ಬಗ್ಗೆ ಹಲವು ಸಲ ಮನವಿಯನ್ನು ಮಾಡಲಾಗಿದೆ. ಈ ಮಹಾಸಭೆಯಲ್ಲಿ ಮತ್ತೊಮ್ಮೆ ನಿರ್ಣಯವನ್ನು ಮಾಡಿ ಪುತ್ತೂರಿನಲ್ಲಿ ಯಶಸ್ವಿನಿ ಯೋಜನೆಗೆ ಆಸ್ಪತ್ರೆಯ ಸೌಲಭ್ಯ ಸಿಗುವಂತೆ ಒತ್ತಾಯಿಸಲಾಗುವುದು ಎಂದರು. ಮಂಗಳೂರಿನ ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯಿಂದ ಸಂಘದ ತುಂಬಾ ಮಂದಿ ಸದಸ್ಯರು ಪ್ರಯೋಜನ ಪಡೆದಿದ್ದಾರೆ ಎಂದು ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಹಾಗೂ ಸದಸ್ಯ ಗಿರಿಶಂಕರ್ ಸುಲಾಯ ಹೇಳಿದರು.


ಸಹಕಾರ ಸಂಘದಲ್ಲಿ ಠೇವಣಿಯನ್ನು ಇಡಿ- ಗಿರಿಶಂಕರ್ ಸುಲಾಯ:
ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ್ ಸುಲಾಯ ದೇವಸ್ಯರವರು ಮಾತನಾಡಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿದ್ದು ಸಂತೋಷದ ವಿಷಯ, ವಿದ್ಯಾರ್ಥಿಗಳೇ ನಿಮಗೆ ಮುಂದೆ ಉದ್ಯೋಗ ಸಿಕ್ಕಿದ ನಂತರ ಪ್ರಥಮ ತಿಂಗಳ ಸಂಬಳವನ್ನು ಇದೇ ಸಹಕಾರ ಸಂಘದಲ್ಲಿ ಠೇವಣಿಯನ್ನು ಇಡಿ ಎಂದು ಸಲಹೆಯನ್ನು ನೀಡಿದರು.


ಬೆಳಂದೂರು ಶಾಖಾ ಕಚೇರಿಯ ಗೋದಾಮು ಕಟ್ಟಡವನ್ನು ಉತ್ತಮಗೊಳಿಸುವಂತೆ ನ್ಯಾಯವಾದಿ ಬೈತಡ್ಕ ಶೀನಪ್ಪ ಗೌಡರವರು ಸೂಚಿಸಿದಾಗ ಈ ಬಗ್ಗೆ ಮುಂದೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧ್ಯಕ್ಷ ತಾರಾನಾಥ ಕಾಯರ್ಗ ಹೇಳಿದರು. ಕೃಷ್ಣಕುಮಾರ್ ರೈ ದೇವಸ್ಯ, ಪದ್ಮಯ್ಯ ಗೌಡ ಕರಂದ್ಲಾಜೆ, ಸಂಕಪ್ಪ ರೈ ಕಲಾಯಿರವರು ವಿವಿಧ ಸಲಹೆ-ಸೂಚನೆಯನ್ನು ನೀಡಿದರು.
ಸಂಘದ ನಿರ್ದೇಶಕರಾದ ಗಣೇಶ್ ನಿಡ್ವಣ್ಣಾಯ ಯನ್ ಕುಮಾರಮಂಗಲ, ಉದಯ ರೈ ಮಾದೋಡಿ, ಚೆನ್ನಪ್ಪ ಗೌಡ ನೂಜಿ, ಅಶ್ವಿನ್ ಎಲ್.ಶೆಟ್ಟಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್ ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮಿ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ ಸ್ವಾಗತಿಸಿ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಽಕಾರಿ ಚಂದ್ರಶೇಖರ್ ಪಿ ಕಾರ್ಯಕ್ರಮ ನಿರೂಪಿಸಿದರು, ಉಪ ಕಾರ‍್ಯನಿರ್ವಾಹಣಾಽಕಾರಿ ಜಲಜಾ ಎಚ್ ರೈರವರು ವರದಿ ವಾಚಿಸಿದರು.ಪ್ರಕಾಶ್ ಕೆಡೆಂಜಿ ಪ್ರಾರ್ಥನೆಗೈದರು.


ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಎ, ಸಿಬ್ಬಂದಿಗಳಾದ ಲೇಖಲತಾ, ಮನೋಜ್ ಎ, ಪವಿತ್ರಾ ಕೆ, ಪ್ರಕಾಶ್ ಕೆ, ಪ್ರಕಾಶ್ ಎಂ, ಪೂವಪ್ಪ ಎ, ಗಣೇಶ್ ಎ.ಎನ್, ಪ್ರಕಾಶ್ ಮೊಯ್ಲಿ, ಜಗದೀಶ್ ಕೆ, ಕಾರ್ತಿಕ್, ದಯಾನಂದ ಎಂ, ಮಾಸ್ ಸಂಸ್ಥೆಯ ಮೇನೇಜರ್ ಯತೀಶ್, ಪಿಗ್ಮಿ ಸಂಗ್ರಾಹಕರಾದ ಸದಾನಂದ ಆಳ್ವ ಕಲಾಯಿ, ವಿಶ್ವನಾಥ ಗೌಡ, ನವೋದಯ ಪ್ರೇರಕಿ ಪ್ರೇಮಾ ಅರೆಲ್ತಡಿ ಸಹಕರಿಸಿದರು.


ಸಭೆಯಲ್ಲಿ ಪಿ.ಡಿ.ಗಂಗಾಧರ್ ರೈ ದೇವಸ್ಯ, ನಿರ್ಮಲ್ ಕುಮಾರ್ ಜೈನ್, ಎನ್.ಸುಂದರ ರೈ ಸವಣೂರು, ಸುಬ್ಬಣ್ಣ ರೈ ಖಂಡಿಗ, ಶ್ರೀಧರ್ ರೈ ಮಾದೋಡಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಮಾಜಿ ನಿರ್ದೇಶಕರಾದ ತನಿಯಪ್ಪ ನಾಯ್ಕ್ ಕಾರ್ಲಾಡಿ, ಸೋಮನಾಥ ಕನ್ಯಾಮಂಗಲ, ಸವಣೂರು ಬೆನಸ ರಬ್ಬರ್ ಸೊಸೈಟಿ ಅಧ್ಯಕ್ಷ ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಕಾರ‍್ಯದರ್ಶಿ ಅಚ್ಚುತ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಮಾಜಿ ಅಧ್ಯಕ್ಷೆ ಮಮತಾ ರೈ ದೇವಸ್ಯ, ನಿರ್ದೇಶಕರಾದ ಪ್ರೇಮಚಂದ್ರ ಮೆದು, ಗಂಗಾಧರ ಸುಣ್ಣಾಜೆ, ಜಿ.ಪಂ, ಮಾಜಿ ಸದಸ್ಯರಾದ ಶಿವಣ್ಣ ಗೌಡ ಇಡ್ಯಾಡಿ, ಪ್ರಮೀಳಾ ಜನಾದನ್, ಸಂಘದ ಕಾನೂನು ಸಲಹೆಗಾರರಾದ ಮಹೇಶ್ ಕೆ.ಸವಣೂರು, ಸೂರ‍್ಯನಾರಾಯಣ ಭಟ್, ನ್ಯಾಯವಾದಿಗಳಾದ ಮಹಾಬಲ ಶೆಟ್ಟಿ ಕೊಮ್ಮಂಡ, ಅವಿನಾಶ್ ಬೈತಡ್ಕ, ಮಾಸ್ ಸಂಸ್ಥೆಯ ನಿರ್ದೇಶಕಿ ಸುಧಾ ಎಸ್ ರೈ ಪುಣ್ಚಪ್ಪಾಡಿ, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ತೀರ್ಥರಾಮ್ ಕೆಡೆಂಜಿ, ಶೀನಪ್ಪ ಶೆಟ್ಟಿ ನೆಕ್ರಾಜೆ, ರಫೀಕ್ ಮಾಂತೂರು, ಸತೀಶ್ ಅಂಗಡಿಮೂಲೆ, ರಾಜೀವಿ ವಿ. ಶೆಟ್ಟಿ ಕೆಡೆಂಜಿ, ತೀರ್ಥರಾಮ್ ಕೆಡೆಂಜಿ, ಬಾಬು ಎನ್, ಚೆನ್ನು ಮುಂಡೋತಡ್ಕ, ಚಂದ್ರಾವತಿ ಸುಣ್ಣಾಜೆ, ಮಾಜಿ ಸದಸ್ಯ ಸತೀಶ್ ಬಲ್ಯಾಯ, ಡಿ.ಎಲ್.ಗಾಂಭೀರ ದೇವಸ್ಯ, ನಾಗರಾಜ್ ನಿಡ್ವಣ್ಣಾಯ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ‍್ಯ ರೈ ಮಾದೋಡಿ, ಆಡಳಿತಾಽಕಾರಿ ವಸಂತ್ ರೈ ಕಾರ್ಕಳ, ಬೆಳಂದೂರು ಗ್ರಾ.ಪಂ ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯ ಮೋಹನ್ ಅಗಳಿ, ಮಾಜಿ ಸದಸ್ಯ ಸಂಪತ್ ಕುಮಾರ್ ರೈ ಪಾತಾಜೆ, ಭಾಸ್ಕರ್ ಗೌಡ ಕಳುವಾಜೆ, ಸೀತಾರಾಮ ಗೌಡ ಮುಂಡಾಳ, ಸಂತೋಷ್ ಕುಮಾರ್ ಮರಕಡ, ಯಶವಂತ ಕಳುವಾಜೆ, ಚಂದ್ರಯ್ಯ ಆಚಾರ್, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜತ್ತಪ್ಪ ರೈ ಬರೆಪ್ಪಾಡಿ, ಮಾಜಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಸವಣೂರು ಯುವಕ ಮಂಡಲದ ನಿಕಟಪೂರ್ವ ಅಧ್ಯಕ್ಷ ಜಿತಾಕ್ಷ ಜಿ, ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಮಾಜಿ ಅಧ್ಯಕ್ಷ ಶಿವರಾಮ ಗೌಡ ಮೆದು, ಶ್ರೀಧರ್ ಸುಣ್ಣಾಜೆ, ಜನಾದನ್ ಆಚಾರ್ ಕಾಣಿಯೂರು, ಸವಣೂರು ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಆಶ್ರಫ್ ಜನತಾ, ಮಾಜಿ ಅಧ್ಯಕ್ಷ ಚಂದ್ರಶೇಖರ್ ಗೌಡ ಮೆದು, ಅನ್ನಪೂರ್ಣ ಪ್ರಸಾದ್ ರೈ ಬೈಲಾಡಿ, ವಿಠಲ ಶೆಟ್ಟಿ ಬಂಬಿಲ, ತಾ.ಪಂ, ಮಾಜಿ ಸದಸ್ಯರಾದ ವಿಜಯ ಈಶ್ವರ ಗೌಡ ಕಾಯರ್ಗ, ಲಲಿತಾ ಈಶ್ವರ್, ನಾಗೇಶ್ ಕೆಡೆಂಜಿ, ಸವಣೂರು ಜಿನ ಬಸದಿಯ ಅರ್ಚಕ ಶ್ರೇಯಾಂಸ್ ಕುಮಾರ್ ಇಂದ್ರ, ಚಂದಪ್ಪ ಪೂಜಾರಿ ಊರುಸಾಗು, ಸಂಜೀವ ಪೂಜಾರಿ ಅಗರಿ, ಬೆಳಿಯಪ್ಪ ಗೌಡ ಚೌಕಿಮಠ, ಸಂಘದ ಮಾಜಿ ಉಪಾಧ್ಯಕ್ಷ ವಾಸುದೇವ ಇಡ್ಯಾಡಿ, ಮಾಜಿ ಉಪಕಾರ‍್ಯನಿರ್ವಾಹಣಾಧಿಕಾರಿ ಕುಸುಮ ಪಿ.ಶೆಟ್ಟಿ ಕೆರೆಕೋಡಿ, ಬೆಳಂದೂರು ಶಾಖೆಯ ಮಾಜಿ ವ್ಯವಸ್ಥಾಪಕರಾದ ಬೇಬಿ ಜೆ.ರೈ, ನಿವೃತ್ತ ಸಿಬ್ಬಂದಿ ಈಶ್ವರ ಗೌಡ ಕಾಯರ್ಗಸಹಿತ ಸಾವಿರಾರು ಮಂದಿ ಸದಸ್ಯರು ಉಪಸ್ಥಿತರಿದ್ದರು.


ಸನ್ಮಾನ:
ರಾಜ್ಯ ಜಾನಪದ ಪ್ರಚಂಡ ಪ್ರಶಸ್ತಿ ಪುರಸ್ಕೃತ, ಭೂತರಾಧನೆಯನ್ನು ಮಾಡಿಕೊಂಡುಬರುತ್ತಿರುವ ಡೊಂಬಯ್ಯ ಕಾಪೆಜಾಲು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಯೋಗದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಮಾಸ್ ಸಂಸ್ಥೆಗೆ ಅತೀ ಹೆಚ್ಚು ಅಡಿಕೆಯನ್ನು ಮಾರಾಟ ಮಾಡಿದ ಜಯರಾಮ ರೈ ಪರನೀರು, ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ ಹಾಗೂ ತಿಮ್ಮಪ್ಪ ಗೌಡ ಮುಂಡಾಳ ಮತ್ತು ಅಂತರ್‌ರಾಷ್ಟ್ರೀಯ ಯೋಗಪಟು ಪ್ರಣಮ್ಯರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


48 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ:
ಸಂಘದ ವತಿಯಿಂದ 48 ಮಂದಿ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ವಿದ್ಯಾರ್ಥಿಗಳಿಗೆ ನಗದು ನೀಡಿ ಗೌರವಿಸಲಾಯಿತು.


ಅಚ್ಚುಕಟ್ಟಾದ ವ್ಯವಸ್ಥೆ:
ಬೆಳಿಗ್ಗೆ 9.45 ಕ್ಕೆ ಆರಂಭಗೊಂಡ ಮಹಾಸಭೆಯು ಮಧ್ಯಾಹ್ನ 12.25 ಕ್ಕೆ ಮುಕ್ತಾಯಗೊಂಡಿತು. ಬೆಳಿಗ್ಗೆ ಉಪಾಹಾರದಲ್ಲಿ ಸೆಟ್ ದೋಸೆ, ಕ್ಷೀರ, ಚಾ ಮತ್ತು ಕಾಫಿ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮತ್ತು ಸದಸ್ಯರುಗಳಿಗೆ ಸ್ಥಳದಲ್ಲಿ ಡಿವಿಡೆಂಡ್ ಹಣವನ್ನು ನೀಡುವ ವ್ಯವಸ್ಥೆ ಮಾಡಿದ್ದು ಸದಸ್ಯರ ಮೆಚ್ಚುಗೆಗೆ ಪಾತ್ರವಾಯಿತು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯರು ಮಹಾಸಭೆಯಲ್ಲಿ ಭಾಗವಹಿಸಿದರು.


ಸಂತಾಪ:
ನಿಧನ ಹೊಂದಿದ ಸಂಘದ ಸದಸ್ಯರಿಗೆ ಸಭೆಯಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಸಂತಾಪ ಸೂಚಿಸಲಾಯಿತು.


ಸಂಸದರು / ಶಾಸಕರಿಗೆ ಅಭಿನಂದನೆ
ಸದಸ್ಯರುಗಳ ಸಹಕಾರ, ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಪ್ರೋತ್ಸಾಹದಿಂದ ಸಂಘ ಒಳ್ಳೆಯ ಸಾಧನೆ ಮಾಡಿದೆ ಎಂಬ ಸಂತೃಪ್ತಿ ನಮ್ಮಲ್ಲಿ ಇದೆ. ಕೃಷಿಕರಿಗೆ ಬಹಳ ಹಾನಿ ಮಾಡಿದ ಅಡಿಕೆ ಕೊಳೆರೋಗ ಮತ್ತು ಹಳದಿ ರೋಗದ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಚೌವಣ್‌ರವರಿಗೆ ಮನವರಿಕೆ ಮಾಡಿರುವ ದ.ಕ. ಸಂಸದ ಕ್ಯಾ| ಬ್ರಿಜೇಶ್ ಚೌಟ ಮತ್ತು ರಾಜ್ಯ ಸರಕಾರಕ್ಕೆ ಮನವರಿಕೆ ಮಾಡಿರುವ ಶಾಸಕಿ ಭಾಗೀರಥಿ ಮುರುಳ್ಯರವರನ್ನು ಸಂಘದ ಪರವಾಗಿ ಅಭಿನಂದಿಸುತ್ತೇವೆ.
ತಾರಾನಾಥ ಕಾಯರ್ಗ, ಅಧ್ಯಕ್ಷರು

ಆಭಾರಿಯಾಗಿದ್ದೇವೆ
ಸಂಘದ ಅಭಿವೃದ್ಧಿಯ ದೃಷ್ಟಿಯಲ್ಲಿ ಸಹಕಾರವನ್ನು ನೀಡುತ್ತಿರುವ ಸಂಘದ ವ್ಯಾಪ್ತಿಯ ಎಲ್ಲಾ ಸದಸ್ಯರುಗಳಿಗೆ ಸಂಘವು ಆಭಾರಿಯಾಗಿದೆ. ಸಂಘದ ಹಿತದೃಷ್ಟಿಯಿಂದ ಎಲ್ಲರ ಸಹಕಾರ ಪ್ರೋತ್ಸಾಹ ಸದಾ ಅಗತ್ಯ.
ಚೇತನ್ ಕುಮಾರ್ ಕೋಡಿಬೈಲು, ಉಪಾಧ್ಯಕ್ಷರು


ಬೆಳೆವಿಮೆಗೆ ಭಾರೀ ಬೆಂಬಲ:
ಸಂಘದಲ್ಲಿ ಹವಾಮಾನ ಆಧಾರಿತ ಬೆಳೆವಿಮೆಗೆ ಭಾರೀ ಬೆಂಬಲ ವ್ಯಕ್ತವಾಗಿದೆ. 2025-26 ನೇ ಸಾಲಿನಲ್ಲಿ 2152 ಮಂದಿ ರೈತ ಸದಸ್ಯರು 67.50 ಲಕ್ಷ ರೂಪಾಯಿ ಪ್ರೀಮಿಯಂ ಪಾವತಿಸಿದ್ದಾರೆ. ಸಂಘದ ಅಭಿವೃದ್ಧಿಯಲ್ಲಿ ಸದಾ ಸಹಕಾರವನ್ನು ನೀಡುತ್ತಿರುವ ಆಡಳಿತ ಮಂಡಳಿ, ಸದಸ್ಯರುಗಳು, ಸಿಬ್ಬಂದಿ ವೃಂದದವರ ಸಹಕಾರಕ್ಕೆ ಅಭಾರಿಯಾಗಿದ್ದೇನೆ. ಸಂಘದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30ರತನಕ ಗ್ರಾಹಕರಿಗೆ ಸೇವೆಯನ್ನು ನೀಡುತ್ತೇವೆ.
ಚಂದ್ರಶೇಖರ್ ಪಿ, ಮುಖ್ಯ ಕಾರ‍್ಯನಿರ್ವಹಣಾಧಿಕಾರಿ


LEAVE A REPLY

Please enter your comment!
Please enter your name here