ಪುತ್ತೂರು : ಸೆ.4 ರಂದು ನಡೆಯುವ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ಮಹಾಸಭೆಯಲ್ಲಿ ಸಂಘದ ಕಾರ್ಯವ್ಯಾಪ್ತಿಯ ನಾಲ್ಕು ವಾರ್ಷಿಕ ಗ್ರಾಮಗಳಲ್ಲಿ (ಒಳಮೊಗ್ರು, ಅರಿಯಡ್ಕ, ಬಡಗನ್ನೂರು, ಪಡುವನ್ನೂರು)ರುವ ಶಿಕ್ಷಣ ಕ್ಷೇತ್ರ ಮತ್ತು ಕೃಷಿ ಕ್ಷೇತ್ರದ ಸಾಧಕರಿಗೆ ಸನ್ಮಾನ ಮಾಡುವುದೆಂದು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ರೈತ ಸದಸ್ಯರ ಮಕ್ಕಳಿಂದ ಅರ್ಜಿ ಅಹ್ವಾನಿಸಲಾಗಿದೆ. ಪಿಯುಸಿಯಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪ್ರತ್ಯೇಕ ವಿಭಾಗಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುವುದು ಇದಕ್ಕೆ ವಿದ್ಯಾರ್ಥಿಗಳು ತಮ್ಮ ಅಂಕ ಗಳಿಕೆಯ ಸಂಪೂರ್ಣ ವಿವರಗಳನ್ನು ಸಂಘಕ್ಕೆ ಸಲ್ಲಿಸುವುದು ಇದಲ್ಲದೆ ಸಂಘದ ಕಾರ್ಯವ್ಯಾಪ್ತಿಯ ಒಳಮೊಗ್ರು, ಅರಿಯಡ್ಕ, ಬಡಗನ್ನೂರು, ಪಡುವನ್ನೂರು ಗ್ರಾಮದ ಸಂಘದ ರೈತ ಸದಸ್ಯರು ಕೃಷಿ ಕ್ಷೇತ್ರದಲ್ಲಿ ಮಿಶ್ರ ಕೃಷಿ, ಸಾವಯುವ ಕೃಷಿ, ಸಮಗ್ರ ಮಾದರಿ ಕೃಷಿಯಲ್ಲಿ ಗಣನೀಯ ಸಾಧನೆ ಮಾಡಿರುವವರು ತಮ್ಮ ವಿವರವಾದ ಮಾಹಿತಿಗಳನ್ನೊಳಗೊಂಡ ಕೋರಿಕೆಯನ್ನು ಸೆ.1 ರೊಳಗೆ ಸಂಘದ ಪ್ರಧಾನ ಕಛೇರಿಗೆ ಸಲ್ಲಿಸಬೇಕಾಗಿ ಸಂಘದ ಪ್ರಕಟಣೆ ತಿಳಿಸಿದೆ.