ಕರಾಟೆ : ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಸ್ವತಿ ಸಮೂಹ ಸಂಸ್ಥೆಗಳು ಕಡಬ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಪುತ್ತೂರು ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯು ಆಗಸ್ಟ್ 23 ರಂದು ಕಡಬದಲ್ಲಿ ನಡೆಯಿತು.

14ರ ವಯೋಮಾನದ ಬಾಲಕರ ವಿಭಾಗದಲ್ಲಿ ಚಿನ್ಮಯ್ ಎಂ ಗೌಡ (ಕಂಬಳ ಬೆಟ್ಟು ಶ್ರೀಮತಿ ಮತ್ತು ಶ್ರೀ ಯೋಗೇಶ್ ಎಂ ಗೌಡ ದಂಪತಿಗಳ ಪುತ್ರ ) 20 ರಿಂದ 25 ಕೆ.ಜಿ ದೇಹ ತೂಕದ ವರ್ಗದಲ್ಲಿ ಪ್ರಥಮ ಸ್ಥಾನ. ಅವಿ ವಿ ರೈ (ಶ್ರೀಮತಿ ಮತ್ತು ಶ್ರೀ ವಿನೋದ್ ಕುಮಾರ್ ರೈ ದಂಪತಿಗಳ ಪುತ್ರ) 50 ರಿಂದ 55 ಕೆ.ಜಿ ದೇಹ ತೂಕ ವರ್ಗದಲ್ಲಿ ಪ್ರಥಮ ಸ್ಥಾನ. 14 ವಯೋಮಾನದ ಬಾಲಕಿಯರ ವಿಭಾಗದಲ್ಲಿ ಕೆ.ಪಿ ಲಹರಿ ರೈ (ಶ್ರೀಮತಿ ಮತ್ತು ಶ್ರೀ ಜಯಪ್ರಸಾದ್ ರೈ ಕುತ್ಯಾಳ ದಂಪತಿಗಳ ಪುತ್ರಿ) 25 ರಿಂದ 30 ಕೆ.ಜಿ ದೇಹ ತೂಕದ ವರ್ಗದಲ್ಲಿ ಪ್ರಥಮ ಸ್ಥಾನ. ಹಾಗೂ 17ರ ವಯೋಮಾನದ ಬಾಲಕರ ವಿಭಾಗದಲ್ಲಿ ದೈವಿಕ್ ಜೆ ಶೆಟ್ಟಿ ( ಶ್ರೀಮತಿ ಮತ್ತು ಶ್ರೀ ಜಗದೀಶ್ ವೈ ಶೆಟ್ಟಿ ದಂಪತಿಗಳ ಪುತ್ರ ) 35 ರಿಂದ 40 ಕೆ.ಜಿ ದೇಹ ತೂಕದ ವರ್ಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಆಗಸ್ಟ್ 26ರಂದು ಮಂಗಳೂರಿನಲ್ಲಿ ನಡೆಯುವ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.

ಹಾಗೂ ಚಿಂತನ ಪಿ,  50 ರಿಂದ 54 ಕೆ.ಜಿ  ದೇಹ ತೂಕದ ವರ್ಗದಲ್ಲಿ ದ್ವಿತೀಯ ದ್ವಿತೀಯ ಸ್ಥಾನ.  ಸರ್ವಿನ್ ಸಿ,  55 ರಿಂದ 60 ಕೆ.ಜಿ ದೇಹ ತೂಕದ ವರ್ಗದಲ್ಲಿ ದ್ವಿತೀಯ ಸ್ಥಾನ. ಅದ್ವಿಕ್ ಎಚ್ ಕೆ,  25 ರಿಂದ 30 ಕೆ.ಜಿ ದೇಹ ತೂಕದ ವರ್ಗದಲ್ಲಿ ದ್ವಿತೀಯ ಸ್ಥಾನ ವನ್ನು ಪಡೆದಿರುತ್ತಾರೆಂದು ಶಾಲಾ ಮುಖ್ಯೋಪಾಧ್ಯಾಯ ಸತೀಶ್ ಕುಮಾರ್ ರೈ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here