ಪುತ್ತೂರು : ಸವಣೂರು ಉನ್ನತ ಹಿರಿಯ ಪ್ರಾಥಮಿಕ ಶಾಲೆಗೆ ಹಿರಿಯ ವಿದ್ಯಾರ್ಥಿಗಳಾದ ಇಸುಬು ಹಾಜಿ ರವರು ಶಾಲೆಯ ಸ್ಟೇಜ್ ಬ್ಯಾಕ್ ಸ್ಕ್ರೀನ್ ಮತ್ತು ಅಬ್ದುಲ್ ಖಾದರ್ ಹಾಜಿ ಸಹಲ್ ಅವರು ಸ್ಟ್ಯಾಂಡಿಂಗ್ ಫ್ಯಾನ್ ಕೊಡುಗೆಯನ್ನು ನೀಡಿದ್ದಾರೆ.

ಸವಣೂರು ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಕೆನರಾ ಎಸ್ ಡಿ ಎಂಸಿ ಅಧ್ಯಕ್ಷ ಅಶ್ರಫ್ ಜನತಾ, ವೆಂಕಪ್ಪ ಗೌಡ ಅಡೀಲು, ಉಮರ್ ಅಬಾಬಿಲ್ ಹೇಮಲತಾ, ನವ್ಯಶ್ರೀ ಉಪಸ್ಥಿತರಿದ್ದರು . ಮುಖ್ಯ ಶಿಕ್ಷಕ ನಿಂಗರಾಜು ಸ್ವಾಗತಿಸಿ, ಶಿಕ್ಷಕ ಓಬಳೇಶ್ ಕಾರ್ಯಕ್ರಮ ನಿರೂಪಿಸಿ, ಶಶಿಕಲಾ ವಂದಿಸಿದರು.