




ಪುತ್ತೂರು: ನೆಟ್ಟಣಿಗೆ ಮುಡ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕ ಕ್ರೀಡಾಕೂಟ ʼಕ್ರೀಡಾ ಸ್ಪಂದನʼ ಡಿ.10ರಂದು ಜರುಗಿತು.



ಸಮಾರಂಭದ ಅಧ್ಯಕ್ಷತೆಯನ್ನು ಎಸ್ .ಡಿ .ಎಂ. ಸಿ ಅಧ್ಯಕ್ಷ ಬಿಎಚ್ ಸೂಫಿ ಇವರು ವಹಿಸಿಕೊಂಡಿದ್ದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಶಿಪಟ್ನ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕಿ ಪದ್ಮಶ್ರೀ ಜೈನ್ ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.





ಪಂಚಾಯತ್ ಸದಸ್ಯರಾದ ಶ್ರೀರಾಮ ಪಕ್ಕಳ ಧ್ವಜಾರೋಹಣವನ್ನು ನೆರವೇರಿಸಿದರು. ಸುಬೋಧ ಪ್ರೌಢಶಾಲೆ ಪಾಣಾಜೆ ಇಲ್ಲಿಯ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ ಧ್ವಜವಂದನೆಯನ್ನು ಸ್ವೀಕರಿಸಿದರು.
ಮುಖ್ಯ ಅತಿಥಿಗಳಾಗಿ ಮೂಸಾನ್ ಮೈರೋಳು , ಹೇಮಂತ್ ಕರ್ನೂರು ಮಠ ,ಅಖಿಲೇಶ್ ಬೆದ್ರಾಡಿ,ಅಬ್ದುಲ್ ಖಾದರ್ ಇಶಾಕ್ ಕರ್ನೂರು ಭಾಗವಹಿಸಿದರು. ಶ್ರವಣ್ 7ನೇ ತರಗತಿ ಕ್ರೀಡಾ ಪ್ರತಿಜ್ಞೆ ವಾಚಿಸಿದರು. ಐದನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಾಲೆಯ ಮುಖ್ಯ ಗುರು ರಮೇಶ್ ಶಿರ್ಲಾಲ್ ಸ್ವಾಗತಿಸಿದರು. ಸಾವಿತ್ರಿ ವಂದಿಸಿದರು.
ಪ್ರವೀಣ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು.
ಶಿಕ್ಷಕಿಯರಾದ ಹಲೀಮಾ ನಜಿಮುನ್ನಿಸಾ, ಬಿಂದು ಕೆ ಎಸ್ , ಸುಪ್ರೀತ, ಭವ್ಯ, ಅಸ್ಮಾ, ಶಾರದಾ ಸಹಕರಿಸಿದರು. ಎಸ್. ಡಿ .ಎಮ್. ಸಿ ಯ ಉಪಾಧ್ಯಕ್ಷರು, ಸದಸ್ಯರು ಪೋಷಕರು ,ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಇವತ್ತಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.









