ಪುರುಷರಕಟ್ಟೆ ಗಣೇಶೋತ್ಸವದ ಬೆಳ್ಳಿಹಬ್ಬದ ಸಂಭ್ರಮ

0

ಮಹಾಗಣಪತಿಗೆ 108 ಕಾಯಿ ಹೋಮ, ಮೂಡಪ್ಪ ಸೇವೆ

ಪುತ್ತೂರು:ಪುರುಷರಕಟ್ಟೆ ಮಹಾಲಿಂಗೇಶ್ವರ ದೇವರ ಕಟ್ಟೆಯ ಎದುರಿನ ಸಾರ್ವಜನಿಕ ಗಣೇಶೋತ್ಸವದ ಬೆಳ್ಳಿ ಹಬ್ಬ ಸಂಭ್ರಮದ ಎರಡನೇ ದಿನವಾದ ಆ.28ರಂದು ವಿಶೇಷವಾಗಿ 108 ಕಾಯಿ ಗಣಪತಿ ಹವನ, ಮೂಡಪ್ಪ ಸೇವೆ ನೆರವೇರಿತು.


ಬ್ರಹ್ಮಶ್ರೀ ವೇ.ಮೂ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಮಹಾಗಣಪತಿಗೆ 108 ತೆಂಗಿನ ಕಾಯಿ ಗಣಹೋಮ, ಸಂಜೆ ಮೂಡಪ್ಪ ಸೇವೆ ನೆರವೇರಿತು. ರಾತ್ರಿ ದೇವರಿಗೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿತು.


ಬೆಳ್ಳಿ ಸರ ಸಮರ್ಪಣೆ:
ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಗಣೇಶೋತ್ಸವದಲ್ಲಿ ಕಿಶೋರ್ ನಾಯ್ಕ್ ಮತ್ತು ಮನೆಯವರು ಬೆಳ್ಳಿಯ ಸರ ಸಮರ್ಪಣೆ ಮಾಡಿದರು.


ಸಂಜೆ ಕಣಿಯೂರು ಗಾನಮಾಧುರ್ಯ ಕಲಾಕೇಂದ್ರದವರಿಂದ ಭಕ್ತಿಗಾನಾಮೃತ, ಉಪ್ಪಿನಂಗಡಿ ಗಯಾಪದ ಕಲಾವಿದರಿಂದ ನಾಗ ಮಾಣಿಕ್ಯ ಎಂಬ ನಾಟಕ ಪ್ರದರ್ಶನಗೊಂಡಿತು.
ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ಧಾರ್ಮಿಕ ಚಿಂತಕ ಬಾಲಕೃಷ್ಣ ಕಾರಂತ ಎರುಂಬು ಮಾತನಾಡಿ, ಮನೆ ಮನೆಗಳಲ್ಲಿ ನಡೆಯುತ್ತಿದ್ದ ಗಣೇಶನ ಉತ್ಸವವನ್ನು ಸ್ವಾತಂತ್ರ್ಯದ ಸಂಗ್ರಾಮಕ್ಕಾಗಿ ದೇಶದ ಜನತೆಯನ್ನು ಒಟ್ಟು ಸೇರಿಸಿಲು ಸಾರ್ವಜನಿಕವಾಗಿ ಆಚರಿಸಲು ಪ್ರಾರಂಭವಾಗಿದೆ. ಇದರಿಂದ ದೇಶದ ಜನತೆ ಸಂಘಟಿತರಾಗಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಾಗಿದ್ದು ಸ್ವಾತಂತ್ರ್ಯ ಪಡೆಯುವಲ್ಲಿ ಗಣೇಶೋತ್ಸವವೂ ಒಂದು ಕಾರಣವಾಗಿದೆ ಎಂದರು. ಎಲ್ಲರೂ ಒಟ್ಟು ಸೇರಿ ಸಂಘಟಿತರಾಗಿ ಆಯೋಜಿಸುವ ಪುರುಷರಕಟ್ಟೆಯ ಗಣೇಶೋತ್ಸವವು ವಿಶೇಷ ಸ್ಥಾನವಿದೆ. ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಗಣೇಶೋತ್ಸವವು ಮಾದರಿ ಕಾರ್ಯಕ್ರಮವಾಗಿ ನಿರಂತರವಾಗಿ ನಡೆಯಲಿ ಎಂದರು.
ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ಉಮೇಶ್ ಇಂದಿರಾ ನಗರ ಅಧ್ಯಕ್ಷತೆ ವಹಿಸಿದ್ದರು. ಉಪವಲಯ ಅರಣ್ಯಾಧಿಕಾರಿ ರಾಜೇಂದ್ರ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ದೀಪ್ತಿ ರಘುನಾಥ್, ಬೆಳ್ಳಿಹಬ್ಬ ಸಮಿತಿ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಬೈಪಾಡಿತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿಶ್ವನಾಥ ಬಲ್ಯಾಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಸಂತೋಷ್ ಮುಕ್ವೆ, ಬೆಳ್ಳಿಹಬ್ಬ ಸಮಿತಿ ಗೌರವಾಧ್ಯಕ್ಷ ರವೀಂದ್ರ ನೆಕ್ಕಿಲು, ಸತೀಶ್, ಅನಿಲ್ ಕುಮಾರ್ ಮುಂಡೋಡಿ, ಲಕ್ಷ್ಮೀಶ ಇಂದಿರಾನಗರ, ಜಯಪ್ರಕಾಶ್ ಅತಿಥಿಗಳನ್ನು ಶಾಲು ಹಾಕಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಜೆ ನಂತರ ಉಪ್ಪಿನಂಗಡಿ ಗಯಾಪದ ಕಲಾವಿದರಿಂದ ನಾಗ ಮಾಣಿಕ್ಯ ಎಂಬ ನಾಟಕ ಹಾಗೂ ಪುತ್ತೂರು ಶ್ರೀದೇವಿ ನೃತ್ಯ ಆರಾಧನಾ ಕಲಾ ಕೇಂದ್ರದವರಿಗೆ ನೃತ್ಯರಂಜಿನಿ ನೆರವೇರಿತು.

LEAVE A REPLY

Please enter your comment!
Please enter your name here