ಕಾವು: ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘ ನಿ. ಕಾವು ಇದರ ಸರ್ವಾಂಗೀಣ ಪ್ರಗತಿ, ಅಭಿವೃದ್ಧಿ, ಸಾಧನೆಯನ್ನು ಪರಿಗಣಿಸಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ವಿಶೇಷ ಪ್ರೋತ್ಸಾಹಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ.30ರಂದು ಮಂಗಳೂರಿನಲ್ಲಿ ನಡೆಯಲಿರುವ ಎಸ್ಸಿಡಿಸಿಸಿ ಬ್ಯಾಂಕ್ನ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸತತ 20 ಬಾರಿ ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿ:
40 ವರ್ಷಗಳ ಇತಿಹಾಸ ಹೊಂದಿರುವ ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರಸ್ತುತ 343 ಜನ ಸದಸ್ಯರಿದ್ದು, ರೂ.71,790/- ಪಾಲುಹಣ ಸಂಗ್ರಹಿಸಲಾಗಿದೆ. ಸಂಘದಲ್ಲಿ ಬಿ.ಎಂ.ಸಿ ಘಟಕವಿದ್ದು, 3000 ಲೀಟರ್ ಸಾಂದ್ರತೆಯುಳ್ಳದ್ದಾಗಿದೆ ಮತ್ತು 7 ಕ್ಲಸ್ಟರ್ ಸಂಘಗಳಿಂದ ಹಾಲು ಪೂರೈಕೆಯಾಗುತ್ತಿದೆ. ಸಂಘವು ಲಾಭದಲ್ಲಿ ಮುನ್ನಡೆಯುತ್ತಿದ್ದು, ಸತತ 40 ವರ್ಷದಿಂದಲೂ ಆಡಿಟ್ನಲ್ಲಿ ಎ ತರಗತಿಯನ್ನು ಹೊಂದಿದೆ. ಸಂಘದ ನೇತೃತ್ವದಲ್ಲಿ ತಾಲೂಕು ಮಟ್ಟದ ಜಾನುವಾರು ಪ್ರದರ್ಶನದ ಯಶಸ್ವಿ ಸಂಯೋಜನೆ ಸೇರಿದಂತೆ ಹೈನುಗಾರರಿಗೆ ಅನೂಕೂಲವಾಗುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಂಘದ ಸಾಧನೆಯ ಪಥದಲ್ಲಿ ಸತತವಾಗಿ ಕಳೆದ 20 ವರ್ಷದಿಂದ ದ.ಕ ಹಾಲು ಒಕ್ಕೂಟದಿಂದ ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿ, ತಾಲೂಕು ಉತ್ತಮ ಸಂಘ ಪ್ರಶಸ್ತಿ, ಉತ್ತಮ ಹೈನುಗಾರ ಪ್ರಶಸ್ತಿ, ಉತ್ತಮ ಗುಣಮಟ್ಟ ಸಂಘದ ಕಾರ್ಯದರ್ಶಿ ಪ್ರಶಸ್ತಿ ಸಹಕಾರ ಸಂಘಕ್ಕೆ ಲಭಿಸಿದೆ.
ಆಡಳಿತ ಮಂಡಳಿ:
ಸಂಘದಲ್ಲಿ ನನ್ಯ ಅಚ್ಚುತ ಮೂಡೆತ್ತಾಯರವರು ಸ್ಥಾಪಕಾಧ್ಯಕ್ಷರಾಗಿದ್ದು, ಪ್ರಸ್ತುತ ಚಂದ್ರಶೇಖರ ರಾವ್ ನಿಧಿಮುಂಡ ಅಧ್ಯಕ್ಷರಾಗಿ, ಪ್ರೇಮಲತಾ ಚಾಕೋಟೆ ಉಪಾಧ್ಯಕ್ಷರಾಗಿ, ನಿರ್ದೇಶಕರುಗಳಾಗಿ ಸುರೇಂದ್ರ ಬೋರ್ಕರ್ ನನ್ಯ, ದಿವಾಕರ ಪ್ರಭು ಮುಂಡಕೊಚ್ಚಿ, ನಾರಾಯಣ ರೈ ಮದ್ಲ, ದಿವ್ಯನಾಥ ಶೆಟ್ಟಿ ಕಾವು, ಸುಧೀಶ್ ನನ್ಯ, ನಾರಾಯಣ ಶರ್ಮ ಬರೆಕರೆ, ಜಗನ್ನೀವಾಸ ಗೌಡ ನಿಧಿಮುಂಡ, ಚಂದ್ರಶೇಖರ ಭಟ್ ಪಳನೀರು, ರಾಮಣ್ಣ ನಾಯ್ಕ ಆಚಾರಿಮೂಲೆ, ಚಂದ್ರಾವತಿ, ನಿರ್ಮಲಾ ಪೂವಂದೂರು, ಪ್ರಭಾರ ಕಾರ್ಯದರ್ಶಿಯಾಗಿ ಸುಪ್ರಿತ್ ಕುಮಾರ್ ಕೆ.ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘವು ಈ ಬಾರಿ ಎಸ್ಸಿಡಿಸಿಸಿ ಬ್ಯಾಂಕ್ನ ಪ್ರಶಸ್ತಿಗೆ ಆಯ್ಕೆಯಾಗಿರುವುದು ತುಂಬಾ ಸಂತಸವಾಗಿದೆ, ನಮ್ಮ ಸಂಘವು ಕಳೆದ 40 ವರ್ಷದಲ್ಲಿ ಉತ್ತಮ ಕಾರ್ಯನಿರ್ವಹಣೆಯೊಂದಿಗೆ ಲಾಭದಲ್ಲಿ ಮುನ್ನಡೆಯುತ್ತಿದೆ, ದ.ಕ ಹಾಲು ಒಕ್ಕೂಟದಿಂದ ಸತತವಾಗಿ 20 ವರ್ಷದಿಂದ ಅತ್ಯುತ್ತಮ ಗುಣಮಟ್ಟ ಸಂಘ ಪ್ರಶಸ್ತಿ, ತಾಲೂಕುವಾರು ಉತ್ತಮ ಸಹಕಾರ ಸಂಘ ಪ್ರಶಸ್ತಿ, ಉತ್ತಮ ಹೈನುಗಾರ ಪ್ರಶಸ್ತಿ, ಉತ್ತಮ ಗುಣಮಟ್ಟ ಸಂಘದ ಕಾರ್ಯದರ್ಶಿ ಪ್ರಶಸ್ತಿಯು ಸಂಘಕ್ಕೆ ಲಭಿಸಿದೆ, 2024-25ನೇ ಸಾಲಿನಲ್ಲಿ ತಾಲೂಕು ಮಟ್ಟದ ಜಾನುವಾರು ಪ್ರದರ್ಶನದ ಯಶಸ್ವಿ ಸಂಯೋಜನೆಯ ಜತೆಗೆ ಈ ಬಾರಿ ಸದಸ್ಯರಿಗೆ ಪ್ರತಿ ಲೀಟರ್ಗೆ ರೂ.1.43 ಬೋನಸ್ ನೀಡಲಾಗಿದೆ. ಸಂಘದ ಪ್ರಗತಿ, ಅಭಿವೃದ್ಧ, ಸಾಧನೆ, ಕಾರ್ಯನಿರ್ವಹಣೆಯನ್ನು ಪರಿಗಣಿಸಿ ಈ ಬಾರಿ ಜಿಲ್ಲಾ ಬ್ಯಾಂಕಿನ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ನಾವು ಅಭಾರಿಯಾಗಿದ್ದೇವೆ.
-ಚಂದ್ರಶೇಖರ ರಾವ್ ನಿಧಿಮುಂಡ
ಅಧ್ಯಕ್ಷರು ಮಾಡ್ನೂರು MPCS ನಿರ್ದೇಶಕರು ದ.ಕ ಹಾಲು ಒಕ್ಕೂಟ