ನರಿಮೊಗರು ಸೇರಾಜೆಯಲ್ಲಿ 38ನೇ ವರ್ಷದ ಗಣೇಶೋತ್ಸವ

0

ಪುತ್ತೂರು: ನರಿಮೊಗರು ಸೇರಾಜೆ ಶ್ರೀಶಾರದಾಂಬ ಸೇವಾ ಟ್ರಸ್ಟ್ ಮತ್ತು ಸೇರಾಜೆ ಶ್ರೀ ಶಾರದಾಂಬ ಭಜನಾ ಮಂಡಳಿಯವರಿಂದ ನಡೆಯುವ 38ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಸೇರಾಜೆ ಶ್ರೀ ಶಾರದಾಂಬ ಭಜನಾ ಮಂದಿರಲ್ಲಿ ನೆರವೇರಿತು.

ನಾರಾಯಣ ಐತಾಳರವರ ಪೌರೋಹಿತ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಗಣೇಶನ ವಿಗ್ರಹ ಆಗಮನದ ಬಳಿಕ ವಿಗ್ರಹ ಪ್ರತಿಷ್ಠೆ, ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದು ರಾತ್ರಿ ರಂಗಪೂಜೆ, ಪ್ರಸಾದ ವಿತರಣೆಯ ಬಳಿಕ ಗಣೇಶನ ವೈಭವದ ಶೋಭಾಯಾತ್ರೆ ನಡೆಯಿತು. ಭಜನಾ ಮಂದಿರದ ಬಳಿಯಿಂದ ಹೊರಟ ಶೋಭಾಯಾತ್ರೆಯ ಪುರುಷರಕಟ್ಟೆ ಇಂದಿರಾನಗರ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಮತ್ತೆ ಭಜನಾ ಮಂದಿರದ ಬಳಿಯಿಂದಾಗಿ ಮೈರನಕೆರೆಯಲ್ಲಿ ಶ್ರೀ ಗಣೇಶನ ವಿಗ್ರಹ ಜಲಸ್ಥಂಭನಗೊಂಡಿತು.

ಕಬಡ್ಡಿ, ವಿವಿಧ ಅಟೋಟ ಸ್ಪರ್ಧೆಗಳು:
ಗಣೇಶೋತ್ಸವದಲ್ಲಿ ಮಹಿಳೆಯರು, ಪುರುಷರು, ಶಾಲಾ ಮಕ್ಕಳು, ಅಂಗನವಾಡಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ಮತ್ತು ಪುರುಷರ 60 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾಟ ನಡೆಯಿತು. ಕಾರ್ಯಕ್ರಮದಲ್ಲಿ ಕಬಡ್ಡಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ತಂಡದ ನಾಯಕನಾಗಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕಿರಣ್ ಆರಂಪಾಡಿಯವರನ್ನು ಕಬಡ್ಡಿ ಪಂದ್ಯಾಟದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.


ಭಜನಾ ಮಂದಿರದ ಪದಾಧಿಕಾರಿಗಳಾದ ವಸಂತ ಗೌಡ ಸೇರಾಜೆ, ಪ್ರವೀನ್ ನಾೖಕ್ ಸೇರಾಜೆ, ಜಯರಾಮ ಪೂಜಾರಿ ಒತ್ತೆಮುಂಡೂರು, ಜಯರಾಮ ಗೌಡ, ಹರೀಶ್ ನಾೖಕ್ ಸೇರಾಜೆ, ಕಬಡ್ಡಿ ತರಬೇತುದಾರ ಲಕ್ಷ್ಮಣ ಪಡ್ನೂರು, ಸುರೇಶ್ ಮಾಸ್ಟರ್, ಯತೀಶ್ ಕೋಡಿಂಬಾಡಿ, ಆನಂದ, ಮನೋಹರ್ ಮೆದು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here