ಅಡ್ಯಾಲು ವಿನಲ್ಲಿ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆ

0

*ಯುವ ಜನತೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ: ಶ್ರೀಕಾಂತ್ ಬೀರಾವು
*ಈ ಒಂದು ಕಾರ್ಯಕ್ರಮ ಸಮಾಜಕ್ಕೆ ಮಾದರಿ: ಮೋಹನ್‌ ಗುರ್ಜಿನಡ್ಕ

ವಿಟ್ಲ: ಯುವ ಜನತೆ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಶ್ರೀಕಾಂತ್ ಬೀರಾವುರವರು ಹೇಳಿದರು. ಅವರು ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಅಡ್ಯಾಲು ವಿನಲ್ಲಿ ಮೊಸರು ಕುಡಿಕೆ ಉತ್ಸವ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಮಕ್ಕಳಿಗೆ ಶ್ರೀಕೃಷ್ಣ ವೇಷ ಸ್ಪರ್ಧೆಯ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ನಡೆದಾಗ ಸಹಬಾಳ್ವೆ ಸಂಘಟನೆ ಸಾಮರಸ್ಯದ ಜೀವನವನ್ನು ನಾವು ನೋಡಬಹುದು ಎಂದರು.

ಪ್ರಮುಖರಾದ ಮೋಹನ್ ಗುರ್ಜಿನಡ್ಕರವರು ಮಾತನಾಡಿ ಯುವ ಜನತೆಯನ್ನು ಒಂದೇ ಮಗ್ಗುಲಲ್ಲಿ ಕರಕೊಂಡು ಹೋದಾಗ ಸಮಾಜದಲ್ಲಿ ಒಗ್ಗಟ್ಟನ್ನು ನಾವು ಕಾಣಬಹುದು. ಅದಕ್ಕೆ ಅಡ್ಯಾಲುವಿನಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವವೇ ಮಾದರಿ ಎಂದರು.

ದಿನೇಶ್ ಸಾಲ್ಯಾನ್ ಬನ್ನೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಶಿ ಸಂಪ್ಯ, ಜಗದೀಶ ಬಾಕಿಮಾರು , ದಾಮೋದರ ಪೂಜಾರಿ ಕಲ್ಲಂದಡ್ಕ.ಹರೀಶ್ ಬಾಕಿಮಾರು.ಗುಡ್ಡಪ್ಪ ಪೂಜಾರಿ ಮಂಗಳೂರು. ಜಾನಕಿ ಸೆಲ್ವರಾಜ್ ಅಡ್ಯಾಲು. ಉಮಾವತಿ ಅಡ್ಯಾಲು. ಶಾರದಾ ಅಡ್ಯಾಲು ಮೊದಲಾದವರು ಉಪಸ್ಥಿತರದ್ದರು. ಬೆಳ್ಳಿಗೆ ಜಯಾ ಪೂಜಾರಿ ಅಡ್ಯಾಲುರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಮುಖ್ಯ ಅತಿಥಿಗಳಾಗಿ ಆನಂದ ಪೂಜಾರಿ ಅಡ್ಯಾಲು, ರವಿ ಮಂದಾರ ಕರ್ಗಲ್ಲು, ಲಕ್ಷ್ಮೀಶ ಓಜಾಲ, ಚೇತನ್ಅಡ್ಯಾಲು, ನಿಖಿಲ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ಯುವ ಪ್ರತಿಭೆಗಳಾದ ಸಂಜನಾ ಕರ್ಗಲ್ಲು ಹಾಗೂ ಶ್ರುತಿಕಾ ಬಾಕಿಮಾರುರವರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು. ಮೊಸರು ಕುಡಿಕೆ ಉತ್ಸವಕ್ಕೆ ಪ್ರತಿ ವರ್ಷ ಸಹಕಾರ ನೀಡುತ್ತಿರುವ ದಿನೇಶ್ ಸಾಲ್ಯಾನ್, ಶ್ರೀ ಕಾಂತ್ ಬೀರಾವುರವರನ್ನು ಗೌರವಿಸಲಾಯಿತು.


ಯುವ ಪ್ರೆಂಡ್ಸ್ ಕಬಕ ಹಾಗೂ ಶ್ರೀ ಮಹಾಲಿಂಗೇಶ್ವರ ಕನ್ಸ್ಟ್ರಕ್ಷನ್ ಮಿತ್ತೂರು ಇವರ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪೂವಪ್ಪ ಅಡ್ಯಾಲು.ಲ, ದೀಪಾ ಅಡ್ಯಾಲು, ಆಶೀತ್ ಅಡ್ಯಾಲು, ಪುರುಷೋತ್ತಮ ಬೈರಿಕಟ್ಟೆ ಮೊದಲಾದವರು ಸಹಕರಿಸಿದರು. ಪ್ರಶಾಂತ್ ಕರ್ಗಲ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here