ಪುತ್ತೂರು: ಬಂಟ್ವಾಳ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೃಷ್ಣಪ್ಪ ಪೂಜಾರಿ ಡೆoಬಳೆ ಬಜತ್ತೂರು ಇವರು ದಿನಾಂಕ ಆ.18ರಂದು ನಿಧನರಾಗಿದ್ದು ಅವರ ಉತ್ತರಕ್ರಿಯಾದಿ ಕಾರ್ಯಗಳು ಆ. 30ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆಯಿತು.

ಮೃತರ ಕುರಿತು ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕರುಣಾಕರ ಸುವರ್ಣ ಕಾರುಣ್ಯ, ಸುಂದರ ಗೌಡ ಸಚಿನ್, ಡಾ.ರಾಜರಾಮ್ ಕೆ. ಬಿ, ಮಹೇಂದ್ರ ವರ್ಮ ಮೇಲೂರು, ಸೋಮಸುಂದರ ಕೊಡಿಪಾನ, ಗಂಗಾಧರ ಮೇಲೂರು, ಬಾಬು ಪೂಜಾರಿ ಕಿನ್ಯಡ್ಕ, ನೇಮಣ್ಣ ಪೂಜಾರಿ ಪಾಲೇರಿ, ನಾರಾಯಣ ಪೂಜಾರಿ ಡೆoಬಳೆ, ಸಹೋದರರಾದ ಸಂಜೀವ ಪೂಜಾರಿ, ಗಣೇಶ ಪೂಜಾರಿ ಬೆದ್ರಾಡಿ, ರತನ್, ಅಭಿನಂದನ್, ಮಕ್ಕಳಾದ ಚಂದ್ರಶೇಖರ, ಡಾ. ರಶ್ಮಿ ಕೃಷ್ಣಪ್ಪ, ಅಳಿಯ ಡಾ. ಸಚಿನ್ ಮೂಲ್ಕಿ, ಸೊಸೆ ವಿಜೇತ ರಾಣಿ ಹಾಗೂ ಬಂಧು ಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.