ಪಾಣಾಜೆ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಆರ್ಲಪದವು ನೇತೃತ್ವದಲ್ಲಿ ನಡೆಯುವ 36ನೇ ಸಾರ್ವಜನಿಕ ಶ್ರೀ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರಾವಣ ಮಾಸದ ಬಲಿವಾಡುಕೂಟದ 2ನೇ ಶನಿವಾರ (ಆ.30) ಮಧ್ಯಾಹ್ನ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಡಳಿತ ಮೊಕ್ತೇಸರರಾದ ಶ್ರೀಕೃಷ್ಣ ಬೊಳಿಲ್ಲಾಯರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಪಾಣಾಜೆ ಪಂಚಾಯತ್ ಉಪಾಧ್ಯಕ್ಷರಾದ ಜಯ ಶ್ರೀ ದೇವಸ್ಯ, ಸದ್ಯಸರಾದ ಸುಭಾಸ್ ರೈ ಚಂಬರಕಟ್ಟ, ಮೋಹನ್ ನಾಯ್ಕ ತೂಂಬಡ್ಕ, ಶಾರದೋತ್ಸವ ಸಮಿತಿ ಯ ಅಧ್ಯಕ್ಷರಾದ ಪುಷ್ಪರಾಜ ರೈ ಕೋಟೆ, ಪ್ರಧಾನ ಕಾರ್ಯದರ್ಶಿಯಾದ ಉಮೇಶ್ ಬಲ್ಯಾಯ ಕೊಂದಲಡ್ಕ, ಉಪಾಧ್ಯಕ್ಷರಾದ ರವಿಶಂಕರ ಶರ್ಮ ಬೊಳ್ಳುಕಲ್ಲು, ಜತೆಕಾರ್ಯದರ್ಶಿಯಾದ ಸಂತೋಷ್ ರೈ ಗಿಳಿಯಾಲು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಸಮಿತಿಯ ಸದಸ್ಯರು, ಸಮಾಜದ ವಿವಿಧ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಭಜನಾ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.
36ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವು ಅಕ್ಟೋಬರ್ 2 ಗುರವಾರದಂದು ಶ್ರೀ ಕಿನ್ನಿಮಾಣಿ – ಪೂಮಾಣಿ, ಪಿಲಿಭೂತ ದೈವಸ್ಥಾನ ವಠಾರದಲ್ಲಿ ಶ್ರೀ ಶಾರದಾಮಾತೆಯ ವಿಗ್ರಹ ಪ್ರತಿಷ್ಠೆಯಾಗಿ ಪೂಜಾ ವಿಧಿವಿಧಾನಗಳೊಂದಿಗೆ, ಭಜನಾ ಕಾರ್ಯಕ್ರಮ, ಆಯುಧ ಪೂಜೆ, ಅಕ್ಷರಾರಂಭ, ಧಾರ್ಮಿಕ ಸಭಾಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ, ಸಾಂಸ್ಕೃತಿಕ ಕಾರ್ಯಕ್ರಮಗಳಾದ ಯಕ್ಷಗಾನ ಗಾನವೈಭವ, ತುಳು ಹಾಸ್ಯಮಯ ನಾಟಕ ಹಾಗೂ ಸಂಜೆ ಸಿಂಗಾರಿ ಮೇಳ, ವಯಲಿನ್ ವಾದನದೊಂದಿಗೆ, ಅದ್ದೂರಿ ಸುಡುಮದ್ದು ಪ್ರದರ್ಶನಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ.