ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಸೆ.22ರಿಂದ ಆ.2ರವರೆಗೆ ನಡೆಯುವ 91ನೇ ವರ್ಷದ ನವರಾತ್ರಿ ಉತ್ಸವ, ಶಾರದೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಆ.31ರಂದು ಮಂದಿರದ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮದಲ್ಲಿ ಮಂದಿರದಲ್ಲಿ ನಡೆಯಿತು.

ಮೊದಲಿಗೆ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಉಪಸ್ಥಿತರಿದ್ದರು. ಬಳಿಕ ಮಂದಿರದಲ್ಲಿ ಕೆಮ್ಮಿಂಜೆ ಬ್ರಹ್ಮಶ್ರೀ ನಾಗೇಶ ತಂತ್ರಿಯವರು ಪ್ರಾರ್ಥಿಸಿ ಆಮಂತ್ರಣ ಪತ್ರವನ್ನು ಮಂದಿರದ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು. ಉಷಾ ಮೆಡಿಕಲ್‌ನ ಗಣೇಶ್ ಭಟ್ ದಂಪತಿಗಳು ಆಮಂತ್ರಣಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ನಗರಸಭೆ ಸದಸ್ಯ ಕೆ ಜೀವಂಧರ್ ಜೈನ್, ವಿಶ್ವಹಿಂದು ಪರಿಷದ್ ಜಿಲ್ಲಾಧ್ಯಕ್ಷ ಡಾ. ಕೃಷ್ಣ ಪ್ರಸನ್ನ, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ, ಮಾಜಿ ಸದಸ್ಯರಾದ ರಾಮಚಂದ್ರ ಕಾಮತ್, ರಾಮದಾಸ್ ಗೌಡ, ದಯಾನಂದ, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಯುವರಾಜ್ ಪೆರ್ಯತ್ತೋಡಿ, ರತ್ನಾಕರ ರೈ ಕೆದಂಬಾಡಿಗುತ್ತು,ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ, ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ, ಪ್ರ. ಕಾರ್ಯದರ್ಶಿ ಜಯಂತ ಉರ್ಲಾಂಡಿ, ಜತೆ ಕಾರ್ಯದರ್ಶಿಗಳಾದ ಸುಧೀರ್ ಕಲ್ಲಾರೆ, ಜಲಜಾಕ್ಷಿ ಹೆಗ್ಡೆ, ಕೋಶಾಧಿಕಾರಿ ನವೀನ್‌ಕುಲಾಲ್, ತಿಲಕ್, ನೀಲಂತ್‌ಕುಮಾರ್, ಹರಿಣಿ ಪುತ್ತೂರಾಯ, ನಿರಂಜನ್, ದೀಕ್ಷಾ ಪೈ, ತಾರನಾಥ್ ಹೆಚ್., ಅಜಿತ್ ರೈ ಹೊಸಮನೆ, ಅಶೋಕ್ ಕುಂಬ್ಲೆ, ನವನೀತ್ ಬಜಾಜ್, ರಾಜೇಶ್ ರೈ, ರಾಕೇಶ್ ರೈ, ರಮಾನಂದ ರಾವ್, ಜಯಕಿರಣ್ ಉರ್ಲಾಂಡಿ, ಶ್ರೀಧರ ಆಚಾರ್ಯ, ಗೋಪಾಲ ಆಚಾರ್ಯ, ವಸಂತ, ಕೃಷ್ಣ ಮಚ್ಚಿಮಲೆ, ಫಕೀರ ಗೌಡ, ರಘುರಾಮ ಹೆಗ್ಡೆ, ಗುಲಾಬಿ ಗೌಡ, ಮಾದವ ಪೂಜಾರಿ, ನಾಗೇಂದ್ರ ಬಾಳಿಗ, ಶಶಿಧರ್ ನಾಯಕ್, ಆದರ್ಶ್ ಉಪ್ಪಿನಂಗಡಿ, ರಾಮಚಂದ್ರ ಘಾಟೆ, ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ತಂಡದ ಸದಸ್ಯರು, ಮಂದಿರದ ಸದಸ್ಯರು ಉಪಸ್ಥಿತರಿದ್ದರು.