ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದ ಪ್ರಯೋಜಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ರೋಟರಾಕ್ಟ್ ಕ್ಲಬ್ ಅಕ್ಷಯ ಕಾಲೇಜಿನ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದ ಪ್ರದಾನ ಸಮಾರಂಭ ಇತ್ತೀಚಿಗೆ ನೆರವೇರಿತು.
ಸಮಾರಂಭವನ್ನು ಕ್ಲಬ್‌ನ ಪೂರ್ವಾಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಆಚಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ ನಡುಬೈಲು, ಸಭಾಪತಿ ಪುತ್ತೂರು ಉಮೇಶ್ ನಾಯಕ್, ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್ ರಾಜ್, ಕಾರ್ಯದರ್ಶಿ ರೋ ಅಭಿಷ್ ಕೆ ,ಯೂತ್ ಸೇವಾ ನಿರ್ದೇಶಕಿ ಪ್ರಜ್ಞಾ ಮುಳಿಯ, ಕೆನರಾ ವಲಯ ಪ್ರತಿನಿಧಿ ಸುಬ್ರಮಣಿ, ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ, ರೋಟರಾಕ್ಟ್ ಸಂಯೋಜಕಿ ಕುಮಾರಿ ಶ್ರುತ, ರೋಟರಾಕ್ಟ್ ಸದಸ್ಯರು ಹಾಗೂ ಕಾಲೇಜಿನ ಶಿಕ್ಷಕರು, ರೋಟರಾಕ್ಟ್ ಕೆನರಾ ವಲಯ ಪ್ರಾಯೋಜಕತ್ವದ ವಿಕಾಸ – ZOOTS ಇದರ ಟ್ರೈನರ್ ಆಗಿ ರೋಟರಿ ಯುವ ಸ್ಥಾಪಕ ಅಧ್ಯಕ್ಷ ರತ್ನಾಕರ ರೈ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿ ಡಾ. ಹರ್ಷ ಕುಮಾರ್ ರೈ ಭಾಗವಹಿಸಿದರು.
ರೋಟರ್ಯಾಕ್ಟ್ ಕ್ಲಬ್ ಅಕ್ಷಯ ಕಾಲೇಜು ಇದರ ನೂತನ ಅಧ್ಯಕ್ಷೆಯಾಗಿ ಅಪೇಕ್ಷಾ ಜೆ.ಕೆ ಶೆಟ್ಟಿ ಹಾಗೂ ಪದಾಧಿಕಾರಿಗಳಿಗೆ ಈ ಸಂದರ್ಭದಲ್ಲಿ ಶುಭ ಹಾರೈಸಲಾಯಿತು.