ಪುತ್ತೂರು : ಕರ್ನಾಟಕ ರಾಜ್ಯ ಡಾ /ಗಂಗೂಬಾಯಿ ಹಾನಗಲ್ ಯೂನಿವರ್ಸಿಟಿ ಪರೀಕ್ಷೆಯಲ್ಲಿ ಬೆಟ್ಟಂಪಾಡಿ ಗ್ರಾಮದ ಪುತ್ತೂರು ತಾಲೂಕಿನ ವರ್ಷ. ಬಿ ಯವರು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.
ಪುತ್ತೂರಿನ ಶ್ರೀ ಶಾರದಾ ಕಲಾ ಕೇಂದ್ರದ ಗುರುಗಳಾದ ವಿದ್ವಾನ್ ಸುದರ್ಶನ್ ಭಟ್ ರವರ ಶಿಷ್ಯೆಯಾಗಿರುವ ಇವರು ಪುತ್ತೂರು ಸೈಂಟ್ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಏಳನೆಯ ತರಗತಿ ವಿದ್ಯಾರ್ಥಿನಿ. ಬೆಟ್ಟಂಪಾಡಿ ಗ್ರಾಮದ ಬಾಕಿತ್ತಿಮರು ರವಿಕುಮಾರ್. ಬಿ ಮತ್ತು ಸುಚಿತ್ರ ದಂಪತಿಯ ಪುತ್ರಿ.