ಒಟ್ಟು ವ್ಯವಹಾರ: ರೂ.333 ಕೋಟಿ, ನಿವ್ವಳ ಲಾಭ ರೂ. 1 ಕೋಟಿ 4 ಲಕ್ಷ, ಶೇ.10 ಡಿವಿಡೆಂಡ್
ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸೆ.04 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಸಂಘವು ವರದಿ ವರ್ಷದಲ್ಲಿ 333 ಕೋಟಿ ರೂಪಾಯಿಗಳ ವ್ಯವಹಾರವನ್ನು ಮಾಡಿದ್ದು ರೂ.1ಕೋಟಿ 4 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ವರದಿ ವರ್ಷದಲ್ಲಿ ಸಂಘದ ಸದಸ್ಯರಿಗೆ ಶೇ.10 ಡಿವಿಡೆಂಡ್ ನೀಡುವುದಾಗಿ ಘೋಷಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್.ರವರು 2024-25 ನೇ ಸಾಲಿನ ವರದಿ ಮಂಡನೆ ಮಾಡುತ್ತಾ ಸಂಘವು 2024-25 ನೇ ಸಾಲಿನ ವರ್ಷದ ಆರಂಭದಲ್ಲಿ 4058 ಮಂದಿ ಸದಸ್ಯರಿದ್ದು ರೂ. 4,75,33,000/- ಪಾಲುಬಂಡವಾಳವಿತ್ತು ವರದಿ ವರ್ಷದಲ್ಲಿ 243 ಜನ ಸದಸ್ಯರು ಸೇರ್ಪಡೆಯಾಗಿ 51 ಜನ ಸದಸ್ಯತನವನ್ನು ಬಿಟ್ಟಿರುತ್ತಾರೆ. ಪಾಲುಬಂಡವಾಳ ರೂ. 46,91,500/- ಜಮೆಯಾಗಿರುತ್ತದೆ. ರೂ 8,39,880/- ಪಾಲುಬಂಡವಾಳ ಪಾವತಿಸಿದೆ. ವರ್ಷಾಂತ್ಯಕ್ಕೆ 4250 ಮಂದಿ ಸದಸ್ಯರಿದ್ದು ರೂ.5,13,84,620/- ಪಾಲುಬಂಡವಾಳವಿರುತ್ತದೆ. ಸರಕಾರದ ಪಾಲುಬಂಡವಾಳ ಇರುವುದಿಲ್ಲ ಎಂದು ತಿಳಿಸಿದರು.

ವರ್ಷದ ಆರಂಭದಲ್ಲಿ ವಿವಿಧ ಠೇವಣಿಗಳ ಬಾಬ್ತು ರೂ. 28,63,84,854.09/- ಇದ್ದು ರೂ. 1,02,47,11,421.00/- ಜಮೆಯಾಗಿ ರೂ. 1019327069.40/- ಪಾವತಿಸಿದೆ. ವರ್ಷಾಂತ್ಯಕ್ಕೆ ವಿವಿಧ ಠೇವಣಿಗಳಾಗಿ ರೂ. 29,17,69,205.69/-ಇರುತ್ತದೆ. ಪಡೆದ ಸಾಲಗಳಲ್ಲಿ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ಪಡೆದ ಸಾಲಗಳು ವರ್ಷಾರಂಭಕ್ಕೆ ರೂ.36,03,81,765.00/- ಇದ್ದು ವರದಿ ವರ್ಷದಲ್ಲಿ ರೂ. 31,12,42,900.00/- ಸಾಲವಾಗಿ ಪಡೆಯಲಾಗಿದೆ ಮತ್ತು ರೂ.28,40,79,150.00/- ಮರುಪಾವತಿಸಲಾಗಿದೆ. ವರ್ಷಾಂತ್ಯಕ್ಕೆ ಕೇಂದ್ರ ಬ್ಯಾಂಕ್ನಿಂದ ಪಡೆದ ಸಾಲವಾಗಿ ರೂ. 38,75,45,515.00/- ಇರುತ್ತದೆ. ಈ ಪೈಕಿ ವಾಯಿದೆ ದಾಟಿದ ಸಾಲಗಳಿರುವುದಿಲ್ಲ ಎಂದ ಅವರು ಸದಸ್ಯರ ಸಾಲಗಳಲ್ಲಿ ವರ್ಷಾರಂಭಕ್ಕೆ ರೂ. 42,39,37,146.00/- ಸದಸ್ಯರ ಹೊರಬಾಕಿ ಸಾಲವಾಗಿ ಇದ್ದು ವರದಿ ವರ್ಷದಲ್ಲಿ ರೂ. 59,09,94,465.00/- ಸಾಲ ವಿತರಿಸಿದೆ ಹಾಗೂ ರೂ. 55,95,86,269.00/- ವಸೂಲಾತಿಯಾಗಿದೆ. ವರ್ಷಾಂತ್ಯಕ್ಕೆ ರೂ. 45,53,45,342.00/- ಸದಸ್ಯರ ಸಾಲ ಹೊರಬಾಕಿ ಇರುತ್ತದೆ. ಈ ಪೈಕಿ ವಾಯಿದೆ ಮೀರಿದ ಸಾಲ ರೂ.46,98,756/-ಇದ್ದು ಸಾಲ ವಸೂಲಾತಿಯಲ್ಲಿ ಶೇಕಡಾ 99 ಪ್ರಗತಿ ಸಾಧಿಸಲಾಗಿದೆ.

ನಗದು ಶಿಲ್ಕು:
ವರ್ಷಾರಂಭದಲ್ಲಿ ನಗದು ಶಿಲ್ಕು ರೂ. 25,43,432.00/- ಇದ್ದು ರೂ. 118065931.00/-ಜಮೆಯಾಗಿ ರೂ. 11,82,44,112.00/- ಪಾವತಿಸಿದೆ. ವರ್ಷಾಂತ್ಯಕ್ಕೆ ನಗದು ಶಿಲ್ಕು ರೂ.27,21,613.00/- ಇರುತ್ತದೆ.

ಕೇಂದ್ರ ಬ್ಯಾಂಕ್ನಲ್ಲಿರುವ ನಗದು ಶಿಲ್ಕು:
ಆರಂಭಕ್ಕೆ ರೂ. 6,21,09,808.16/- ಬ್ಯಾಂಕ್ ವಿವಿಧ ಖಾತೆಗಳಲ್ಲಿ ನಗದು ಶಿಲ್ಕು ಇದ್ದು ವರದಿ ವರ್ಷದಲ್ಲಿ ರೂ. 938169073.14/- ಪಾವತಿಸಲಾಗಿದೆ. ರೂ. 947925102.46/- ನ್ನು ವಾಪಾಸು ಬ್ಯಾಂಕ್ನಿಂದ ಪಡೆದು ನಂತರ ವರ್ಷಾಂತ್ಯಕ್ಕೆ ರೂ. 5,23,53,778.84/- ಬ್ಯಾಂಕಿನಲ್ಲಿ ವಿವಿಧ ಖಾತೆಗಳಲ್ಲಿ ನಗದು ಶಿಲ್ಕು ಇರುತ್ತದೆ ಎಂದು ತಿಳಿಸಿದರು. ಧನ ವಿನಿಯೋಗಗಳಲ್ಲಿ ವರ್ಷಾರಂಭಕ್ಕೆ ರೂ. 21,75,95,329.00/- ಇದ್ದು ವರದಿ ವರ್ಷದಲ್ಲಿ ರೂ.21,62,53,533.00/-ಹೂಡಲಾಗಿದೆ ಹಾಗೂ ರೂ. 20,01,22,270.00/-ನ್ನು ವಾಪಾಸು ಬ್ಯಾಂಕ್ ನಿಂದ ಪಡೆಯಲಾಗಿದೆ. ವರ್ಷಾಂತ್ಯಕ್ಕೆ 23,37,26,592/- ಬ್ಯಾಂಕ್ನಲ್ಲಿ ವಿವಿಧ ಖಾತೆಗಳಲ್ಲಿ ಧನವಿನಿಯೋಗ ಮಾಡಲಾಗಿದೆ.

ಇತರ ಸಂಸ್ಥೆಗಳಲ್ಲಿ ಪಾಲುಗಳು:
ಹಿಂದಿನ ವರ್ಷದಲ್ಲಿ ರೂ. 1,80,85,100.00/- ವಿವಿಧ ಸಂಸ್ಥೆಗಳಲ್ಲಿ ಪಾಲುಬಂಡವಾಳ ಇತ್ತು. ವರದಿ ವರ್ಷದಲ್ಲಿ ರೂ. 15,10,000/- ಪಾಲು ಹೂಡಲಾಗಿದ್ದು, ಮತ್ತು ಯಾವುದೇ ಪಾಲು ಹಿಂಪಡೆದಿಲ್ಲ. ವರ್ಷಾಂತ್ಯಕ್ಕೆ ರೂ. 1,95,95,100.00/-ಪಾಲು ಬಂಡವಾಳವಾಗಿ ಇರುತ್ತದೆ.
ವ್ಯಾಪಾರ ವಹಿವಾಟು :
ವರ್ಷಾರಂಭಕ್ಕೆ ರೂ. 5,20,377.46/-ಮೌಲ್ಯದ ಸರಕು ವಾಸ್ತಾನು ಇತ್ತು. ವರದಿ ವರ್ಷದಲ್ಲಿ ರೂ.20,55,847.76/-ಮೌಲ್ಯದ ಸರಕು ಖರೀದಿಸಿ, ರೂ. 24,52,781.84/- ಮೌಲ್ಯದ ಸರಕು ಮಾರಾಟ ಮಾಡಲಾಗಿದೆ. ವ್ಯಾಪಾರ ಲಾಭವಾಗಿ ರೂ. 8,41,364.48/-ನ್ನು ಗಳಿಸಲಾಗಿದೆ.

ಸ್ಥಿರ – ಚರ ಸೊತ್ತುಗಳು:
ಪೀಠೋಪಕರಣಗಳು ಮತ್ತು ಜೋಡಣೆ ಮೌಲ್ಯ ರೂ. 41,07,787.37/- ಇರುತ್ತದೆ. ನಿವೇಶನಗಳ ಮೌಲ್ಯ ಮತ್ತು ಗೋದಾಮುಗಳ ಮೌಲ್ಯವಾಗಿ ರೂ. 34,78,306.04/- ಇರುತ್ತದೆ. ಲಾಭ ನಷ್ಟದ ಲೆಕ್ಕದಲ್ಲಿ ವರದಿ ವರ್ಷದಲ್ಲಿ ಸಂಘವು ರೂ 1,04,23,277.39/- ನಿವ್ವಳ ಲಾಭ ಗಳಿಸಿರುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್ರವರು ವರದಿ ಮಂಡನೆಯ ಮೂಲಕ ಸಭೆಗೆ ತಿಳಿಸಿದರು.
ಸಂಘದ ಲೆಕ್ಕಿಗರಾದ ವೀಣಾ ರೈಯವರು 2024-25 ನೇ ಸಾಲಿನ ಲೆಕ್ಕಪರಿಶೋಧನಾ ವರದಿಯ ಪರಿಶೀಲನೆ ಮಂಜೂರಾತಿ ಮಂಡನೆ ಮಾಡಿದರು.
2025-26 ನೇ ಸಾಲಿಗೆ ತಯಾರಿಸಿದ ಅಂದಾಜು ಬಜೆಟ್ ಮಂಜೂರಾತಿ, ಲಾಭಾಂಶ ಹಂಚಿಕೆ ಮಾಡುವ ವಿಚಾರ, ಲೆಕ್ಕಪರಿಶೋಧಕರ ನೇಮಕಾತಿ ವಿಚಾರ, ಬೈಲಾ ತಿದ್ದುಪಡಿ ಬಗ್ಗೆ ಸೇರಿದಂತೆ ಇತ್ಯಾದಿ ವಿಚಾರಗಳ ಬಗ್ಗೆ ಸಭೆಯ ಮುಂದೆ ಮಂಡಿಸಲಾಯಿತು. ವೇದಿಕೆಯಲ್ಲಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್, ನಿರ್ದೇಶಕರುಗಳಾದ ಉಮೇಶ್ ಗೌಡ ಕೆ ಕನ್ನಯ, ವಿನೋದ್ ಶೆಟ್ಟಿ ಅರಿಯಡ್ಕ,ರಾಜೀವಿ ಎಸ್.ರೈ ಕುಂಬ್ರ, ಮಲ್ಲಿಕಾ ಎ.ಜೆ ಆಲಂತ್ತಡ್ಕ, ಅಮರನಾಥ ರೈ ಐಂಬಾಗಿಲು, ಸತೀಶ್ ಕರ್ಕೇರ ಮಡ್ಯಂಗಳ, ಶಿವರಾಮ ಬಿ.ಬೊಳ್ಳಾಡಿ, ಸಂತೋಷ್ ಆಳ್ವ ಎ.ಸಿ, ಗಿರಿನಿಲಯ, ಶ್ರೀನಿವಾಸ ಪ್ರಸಾದ್ ಮುಡಾಲ, ವಸಂತ ಕುಮಾರ್ ಕೌಡಿಚ್ಚಾರ್, ಡಿಸಿಸಿ ಬ್ಯಾಂಕ್ ವಲಯ ಮೇಲ್ವಿಚಾರಕರಾದ ಶರತ್ ಡಿ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಉದಯಶಂಕರ ಕೆ.ಪಿ ಪ್ರಾರ್ಥಿಸಿದರು. ನಿರ್ದೇಶಕ ಅಮರನಾಥ ರೈ ಸ್ವಾಗತಿಸಿದರು. ನಿರ್ದೇಶಕಿ ರಾಜೀವಿ ಎಸ್.ರೈ ವಂದಿಸಿದರು. ಸಂತೋಷ್ ರೈ ಕೈಕಾರ, ಸುಭಾಶ್ಚಂದ್ರ ರೈ ಬೆಳ್ಳಿಪ್ಪಾಡಿ, ನಾರಾಯಣ ಕುಕ್ಕುಪುಣಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ಶಾಖಾ ವ್ಯವಸ್ಥಾಪಕ ರಾಜ್ಪ್ರಕಾಶ್ ರೈ ಕುಂಬ್ರ, ಗುಮಾಸ್ತರುಗಳಾದ ರಾಜ್ಕಿರಣ್ ರೈ, ಭರತ್ ಎಸ್.ಎನ್, ಶಾಂತ ಕುಮಾರ, ಜವಾನ ವೆಂಕಪ್ಪ ಡಿ ಸಹಕರಿಸಿದ್ದರು.

ಸಭೆಯಿಂದ ಬಂದ ಸಲಹೆ ಸೂಚನೆಗಳು
ಸಂಘದ ಅಭಿವೃದ್ದಿ ವಿಚಾರದಲ್ಲಿ ಸಂಘದ ಸದಸ್ಯರುಗಳು ವಿವಿಧ ರೀತಿಯ ಸಲಹೆ ಸೂಚನೆಗಳನ್ನು ನೀಡಿದರು. ವಿಶೇಷವಾಗಿ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಈಗಾಗಲೇ 49 ವರ್ಷಗಳು ಕಳೆದಿದ್ದು ಮುಂದಿನ 50 ನೇ ವರ್ಷದ ಸುವರ್ಣ ಮಹೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಕುರಿತು ಹಾಗೆ ಒಂದಷ್ಟು ಯೋಜನೆಗಳನ್ನು ಹಾಕಿಕೊಳ್ಳುವ ಮೂಲಕ ಗ್ರಾಮದ ಪ್ರತಿ ಮನೆಯ ಸದಸ್ಯರು ಸಹಕಾರಿಯ ಅಧೀನದಲ್ಲಿ ಬರುವಂತೆ ನೋಡಿಕೊಳ್ಳುವುದು, ಉದ್ಯೋಗ ಸೃಷ್ಟಿಸುವ ಕೆಲಸ ಆಗಬೇಕು ಎಂದು ಸುನೀಲ್ ಬೋರ್ಕರ್ ಪೆರಿಗೇರಿಯವರು ಸಲಹೆ ನೀಡಿದರು. ಸಂಘದ ವ್ಯಾಪ್ತಿಯ ಬಡಗನ್ನೂರು, ಪಡುವನ್ನೂರು ಭಾಗಗಳಲ್ಲಿ ವನ್ಯ ಜೀವಿಗಳಾದ ಕಾಡುಕೋಣ, ಕಾಡೆಮ್ಮೆ, ಮಂಗಗಳು, ನವಿಲು, ಕಾಡು ಹಂದಿ ಇತ್ಯಾದಿಗಳಿಂದ ರೈತರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಒಳಮೊಗ್ರು ಗ್ರಾಮದ ಒಂದು ಭಾಗದಲ್ಲಿ ಆನೆ ಹಾವಳಿ ಕೂಡ ಇದೆ. ಇದರಿಂದ ಕೃಷಿ ಹಾನಿಯಾಗುತ್ತಿದೆ ಆದ್ದರಿಂದ ಕಾಡು ಪ್ರಾಣಿಗಳಿಂದ ಹಾನಿಗೊಳಗಾದ ಕೃಷಿಗೆ ಸೂಕ್ತ ಪರಿಹಾರ ಸಿಗುವಂತೆ ಆಗಬೇಕು, ರೈತರಿಗೆ ಸುಲಭದಲ್ಲಿ ಗನ್ ಪರವಾನಗೆ ನೀಡುವ ಕೆಲಸ ಆಗಬೇಕು ಈ ಬಗ್ಗೆ ಸಹಕಾರಿ ಸಂಘದ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಸುನೀಲ್ ಬೋರ್ಕರ್ ಆಗ್ರಹಿಸಿದರು. ಕೌಡಿಚ್ಚಾರ್ನಲ್ಲಿ ಸಂಘದ ಹಳೆಯ ಕಟ್ಟಡವಿದ್ದು ಇದನ್ನು ಮುಂದಿನ ದಿನಗಳಲ್ಲಿ ತೆರವುಗೊಳಿಸಿ ಅಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಮಾಡುವ ಕೆಲಸ ಸಂಘದಿಂದ ಆಗಬೇಕು ಎಂದು ತಿಲಕ್ ರೈ ಕುತ್ಯಾಡಿ ತಿಳಿಸಿದರು.ಬಡಗನ್ನೂರಿನಲ್ಲಿ ನೂತನ ಕಟ್ಟಡ ಆಗಬೇಕು ಹಾಗೇ ಮೈಂದನಡ್ಕದಲ್ಲಿ ಪಡಿತರ ವಿತರಣಾ ಕೇಂದ್ರ ಆಗಬೇಕು ಎಂದು ಮಹಮ್ಮದ್ ಬಡಗನ್ನೂರು ತಿಳಿಸಿದರು.ವಿಪರೀತ ಮಳೆಯಿಂದಾಗಿ ರೈತರ ಬೆಳೆಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಸರಕಾರದ ಗಮನ ಸೆಳೆಯುವ ಕೆಲಸ ಆಗಬೇಕು ಎಂದರು. ಇದಕ್ಕೆ ಉತ್ತರಿಸಿದ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು ಈ ವರ್ಷ ಮಳೆಯಿಂದಾಗಿ ರೈತ ಬಹಳಷ್ಟು ನಷ್ಟ ಅನುಭವಿಸಿದ್ದಾನೆ ಅದಕ್ಕೆ ಸಾಲ ಮನ್ನಾ ಒಂದೇ ಪರಿಹಾರವಾಗಿದೆ ಈ ಬಗ್ಗೆ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ತಿಲಕ್ ರೈ ಕುತ್ಯಾಡಿ ಮಾತನಾಡಿ, ಈಗಾಗಲೇ 2019 ರಲ್ಲಿ ಸಾಲ ಮನ್ನಾ ಅಗಿದ್ದು ಇದರಲ್ಲಿ ನಮ್ಮ ಸಂಘದ 49 ಮಂದಿಯ ಸಾಲ ಇದುವರೆಗೂ ಮನ್ನಾ ಆಗಿಲ್ಲ ಈಗಲೂ ಹಸಿರು ಪಟ್ಟಿಯಲ್ಲಿದೆ ಈ ಬಗ್ಗೆ ಮತ್ತೊಮ್ಮೆ ಡಿಸಿಸಿ ಬ್ಯಾಂಕ್ ಅಧೀನದಲ್ಲಿ ಸರಕಾರಕ್ಕೆ ಬರೆದುಕೊಳ್ಳಬೇಕು ಎಂದು ತಿಳಿಸಿದರು. ಮುಂದಿನ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಸುಮಾರು 25 ಲಕ್ಷ ರೂಪಾಯಿಗಳನ್ನು ಕಾಯ್ದಿರಿಸಬೇಕು ಹಾಗೇ ಸಂಘದ ವ್ಯಾಪ್ತಿಯ ಎರಡು ಕಡೆಗಳಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ಮಾಡಬೇಕು ಎಂದು ತಿಲಕ್ ರೈ ಕುತ್ಯಾಡಿ ಸಲಹೆ ನೀಡಿದರು.
ಎಸ್ಎಸ್ಎಲ್ಸಿ, ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಾರಿಕಾ ರೈ ಸುಳ್ಯಪದವು, ಆಯಿಷತ್ ಅಝೀನಾ ಕುಂಬ್ರ, ನುಸ್ರತ್ ಸಮೀಮ, ಪ್ರಣ್ಯ, ರಶ್ಮಿತಾ, ಸನ್ಮಿಕಾ ರೈ, ಕೀರ್ತಿಕಾ, ಪೃಥ್ವಿ ರೈ ಕೆ, ನೇತ್ರಾ ಎಂ.ಪಿ, ಯಶಸ್ವಿತಾ ಎನ್, ವಿಖ್ಯಾತ್, ಫಾತಿಮಾ ಅಝಿನಾ, ರಕ್ಷಾ ಪಿ, ತನುಷಾ ಕೆ.ಎಸ್ರವರುಗಳಿಗೆ ಶಾಲು, ಸ್ಮರಣಿಕೆ, ಹಾರ ಹಾಗೂ ನಗದು ನೀಡಿ ಸನ್ಕಾನಿಸಿ ಗೌರವಿಸಲಾಯಿತು. ಪಿಯುಸಿ ವಿಜ್ಞಾನ ವಿಭಾಗದಲ್ಲಿ ಆಕಾಶ್ ಪಿ.ಜೆ, ಪಲ್ಲವಿ ಕೆ.ಬಿ, ಸಹನಾ ಕೆ.ಎಲ್, ಶ್ರಾವ್ಯ ಪಿ.ಡಿ ರೈ,ಪ್ರಶಸ್ತಿ ರೈ, ಸುಮಿತ್ ರಾಜ್, ಯಶ ರೈ, ಹಿತಾಶ್ರೀ, ಅಮೃತ ಎ.ಪಿ, ಮಂಜುಶ್ರೀ, ವಾಣಿಜ್ಯ ವಿಭಾಗದಲ್ಲಿ ಸಂಪನ್ನಲಕ್ಷ್ಮೀ, ತೃಷಿಕಾ, ಕೀರ್ತನ್ ರೈ ಕೆ, ಆಧಿಶ್ರೀ ಕೆ, ಪ್ರಜ್ಞಾ, ಕೀರ್ತಿಕಾ ರೈ ಬಿ, ಪ್ರತೀಕ್ಷಾ ಎಂ, ಸಂಪ್ರೀತ್ ಬಿ.ಎಸ್ರವರುಗಳಿಗೆ ಶಾಲು, ಹಾರ, ಸ್ಮರಣಿಕೆ, ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಇದಲ್ಲದೆ ಸುಳ್ಯಪದವು ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ವಿಶೇಷವಾಗಿ ಸಹಕರಿಸಿದವರನ್ನು ಗುರುತಿಸಿ ಗೌರವಿಸಲಾಯಿತು.

ಅಧ್ಯಕ್ಷರ ಮಾತು
ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಮಾತನಾಡಿ, ಸಂಘವು ವರದಿ ವರ್ಷದಲ್ಲಿ 333 ಕೋಟಿ ರೂಪಾಯಿ ವ್ಯವಹಾರದೊಂದಿಗೆ 1 ಕೋಟಿ 4 ಲಕ್ಷ ರೂಪಾಯಿ ಲಾಭ ಪಡೆದುಕೊಂಡಿದೆ. ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸಮಗ್ರ ಬೈಲಾ ತಿದ್ದುಪಡಿ ಅನುಷ್ಠಾನಗೊಳಿಸುವ ಮೂಲಕ ಕಾರ್ಯವ್ಯಾಪ್ತಿಯಲ್ಲಿ ಗ್ರಾಮಗಳ ರೈತರ ಕಲ್ಯಾಣಕ್ಕೆ ಬೇಕಾದಂತಹ ವಿಷಯಗಳನ್ನು ಸಮಗ್ರ ಬೈಲಾದೊಂದಿಗೆ ಅಳವಡಿಸಿಕೊಂಡು ಮುಂದಿನ ಗುರಿಯತ್ತ ಪ್ರಯತ್ನ ಪಡುವುದು. ಸಂಘಕ್ಕೆ ಮುಂದಿನ ವರ್ಷಕ್ಕೆ 50 ವರ್ಷ ತುಂಬುತ್ತಿದ್ದು ಸುವರ್ಣ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡುವುದು ಇದಕ್ಕಾಗಿ ಸುವರ್ಣ ಮಹೋತ್ಸವದ ಒಂದು ವರ್ಷದ ಅವಧಿಯಲ್ಲಿ ಕೃಷಿ ಮತ್ತು ರೈತರಿಗಾಗಿ ವಿಶೇಷ ತರಬೇತಿ ಮತ್ತು ಮಾಹಿತಿ ಕಾರ್ಯಗಾರಗಳನ್ನು ನಡೆಸುವುದು.ವೈಯುಕ್ತಿಕ ಅಪಘಾತ ವಿಮೆಯನ್ನು ಅಲ್ಪಾವಧಿ ಮತ್ತು ದೀರ್ಘವದಿ ಸಾಲಗಳಿಗೂ ವಿಸ್ತರಿಸುವುದು. ವರದಿ ವರ್ಷದಲ್ಲಿ 31 ಮಂದಿಗೆ ಮರಣ ಸಾಂತ್ವನ ನಿಧಿಯನ್ನು ನೀಡಿದ್ದೇವೆ. ಶವ ಪೆಟ್ಟಿಗೆಯನ್ನು ನಿರ್ವಹಿಸುವ ಕಾರ್ಯಕರ್ತರು ಸಿಕ್ಕರೆ ಇನ್ನೊಂದು ಜೊತೆ ಶವ ಸಂಸ್ಕಾರ ಪೆಟ್ಟಿಗೆ ಖರೀದಿಸುವುದು. ಈ ಮೂಲಕ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ ರೈತರ ಅಭ್ಯುದಯಕ್ಕೆ ಬೇಕಾದ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಕೃಷಿ ಮತ್ತು ರೈತರ ಕಲ್ಯಾಣ ಅಭಿವೃದ್ಧಿ ಕೆಲಸಗಳಿಗೆ ಸಂಘವು ಸದಾ ಸಿದ್ಧ. ಈ ಎಲ್ಲಾ ಅಭಿವೃದ್ಧಿ ಕೆಲಸಗಳು ಆಗಬೇಕಾದರೆ ಸಂಘದ ರೈತ ಸದಸ್ಯರ ಸಹಕಾರ ಅತೀ ಅಗತ್ಯವಾಗಿದೆ. ಆದ್ದರಿಂದ ಸರ್ವ ಸಹಕಾರಿ ಬಂಧುಗಳ ಸಹಕಾರ ಸಂಘದ ಮೇಲಿರಲಿ. ಸಹಕರಿಸಿದ ಸರ್ವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಪ್ರಕಾಶ್ಚಂದ್ರ ರೈ ಕೈಕಾರ, ಅಧ್ಯಕ್ಷರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಕುಂಬ್ರ