ಪುತ್ತೂರು: ಆ.25 ರಂದು ನಿಧನರಾದ ಕೆಮ್ಮಾಯಿ ಯಮುನಾ ನಾೖಕ್ ರವರ ಉತ್ತರಕ್ರಿಯಾದಿ ಸದ್ಗತಿ ಕಾರ್ಯಗಳು ಮತ್ತು ಶ್ರದ್ದಾಂಜಲಿ ಸಭೆ ಸೆ.4 ರಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ನಡೆಯಿತು.

ನುಡಿನಮನ ಸಲ್ಲಿಸಿದ ಪ್ರಕಾಶ್ ನಾೖಕ್ ರವರು ತುಂಬಿದ ಕೂಡು ಕುಟುಂಬದ ಸಂಸಾರವನ್ನು ಮುನ್ನಡೆಸಿ ಮಕ್ಕಳಿಗೆ, ಮೊಮ್ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ ಬೆಳಿಸಿ ನಮ್ಮನ್ನಗಲಿದ ಹಿರಿಯರ ದಿವ್ಯಾತ್ಮಕ್ಕೆ ಭಗವಂತನ ಸಾನಿಧ್ಯದಲ್ಲಿ ಚಿರಶಾಂತಿ ಲಭಿಸಲಿ ಎಂದರು. ನಿವೃತ್ತ ಉಪ ತಹಶೀಲ್ದಾರ್ ಪಾದೆ ಚಂದ್ರಶೇಖರ ನಾೖಕ್ ಕಂರ್ಬಡ್ಕ ಮಾತನಾಡಿ, ಸಂಸಾರದಲ್ಲಿ ಎಲ್ಲರೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿ, ಎಲ್ಲರಿಗೂ ಒಳಿತನ್ನೇ ಬಯಸಿ 93 ವರ್ಷದ ತುಂಬು ಜೀವನ ನಡೆಸಿ ನಮ್ಮನ್ನಗಲಿದ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಕರುಣಿಸಲಿ ಎಂದರು. ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಿ ಯಮುನಾ ನಾೖಕ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಪುತ್ರರಾದ ಚಿದಂಬರ ನಾೖಕ್,ಸುಧಾಕರ ನಾೖಕ್,ಸೊಸೆಯಂದಿರಾದ ಮಾಲಾ ಚಿದಂಬರ ನಾೖಕ್, ಸುಪ್ರೀತ ಸುಧಾಕರ ನಾೖಕ್, ಪುತ್ರಿಯರಾದ ಸುನಂದ, ಶಶಿಕಲಾ ಮೊಮ್ಮಕ್ಕಳಾದ ಗಗನ್ ದೀಪ್, ಶ್ರೀಪುಣ್ಯ ಗಗನ್ ದೀಪ್ , ರವಿಪ್ರಸಾದ್, ನಾಗರಾಣಿ ರವಿಪ್ರಸಾದ್, ಸ್ವಾತಿ, ಶ್ರೇಯಾ,ನಮೀತ್, ಅಖಿಲೇಶ್, ನಿತಿನ್,ಅಕ್ಷತಾ ನಿತಿನ್,ಅಶ್ವಿನಿ ಮಿಥುನ್, ಮಿಥುನ್‌ಗಣೇಶ್, ನಮೃತಾ ಗಣೇಶ್, ಮರಿಮೊಮ್ಮಕ್ಕಳಾದ ಸ್ನೇಹಿನ್, ಭವಿಷ್, ಹೃದನ್, ಆರ್ಯನ್, ಶಿಖರ್, ಸಹೋದರ ಸಹೋದರಿಯರು, ಬಂಧುಗಳು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದು, ಶ್ರದ್ದಾಂಜಲಿ ಸಲ್ಲಿಸಿದರು.