ಪುತ್ತೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವ ವಿದ್ಯಾನಿಲಯ ನಡೆಸಿದ 2024-25 ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅನನ್ಯ ಲಕ್ಷ್ಮಿ ಇವರು ಶೇಕಡಾ 85.5% ಫಲಿತಾಂಶದೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಬದನಾಜೆ ಹರಿಮೂಲೆ ಶ್ರೀ ಮಹಾಬಲೇಶ್ವರ ಪ್ರಸನ್ನ ಭಟ್ . ಶ್ರೀಮತಿ ನೇತ್ರಾವತಿ ದಂಪತಿಗಳ ಪುತ್ರಿಯಾಗಿದ್ದು ಪಿಎಂ ಶ್ರೀ ಸರಕಾರಿ ಪ್ರೌಡಶಾಲೆ (ಆರ್.ಎಂ.ಎಸ್.ಎ) ವಿಟ್ಲ ಮಾದರಿ ಶಾಲೆಯಲ್ಲಿ ಆಂಗ್ಲ ಮಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ.ಇವರು ನೃತ್ಯೋಪಾಸನ ಕಲಾ ಅಕಾಡೆಮಿ(ರಿ) ಪುತ್ತೂರು ಇದರ ವಿಟ್ಲ ಶಾಖೆಯ ವಿದ್ಯಾರ್ಥಿನಿಯಗಿದ್ದು ವಿದುಷಿ ಶ್ರೀಮತಿ ಶಾಲಿನಿ ಆತ್ಮ ಭೂಷಣ್ ಅವರ ಶಿಷ್ಯೆ.