ನೆಲ್ಯಾಡಿ: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ 2023–25ನೇ ಸಾಲಿನ ವೃತ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ (Convocation) ನೆರವೇರಿತು.
ಸತತ ಪ್ರಯತ್ನ, ಗುರಿಯ ಕಡೆಗೆ ಕೇಂದ್ರೀಕೃತ ಧ್ಯೇಯ ಮತ್ತು ಸಮರ್ಪಿತ ಶ್ರಮವು ಪ್ರತಿಯೊಬ್ಬರ ಬದುಕಿನಲ್ಲಿ ಸಾಧನೆಗೆ ದಾರಿ ತೋರುತ್ತದೆ. ಎರಡು ವರ್ಷದ ಶಿಕ್ಷಣ ಪಯಣವನ್ನು ಪೂರೈಸಿದ ವಿದ್ಯಾರ್ಥಿಗಳ ಭವಿಷ್ಯ ಯಶಸ್ವಿಯಾಗಲಿ ಎಂದು ಮುಖ್ಯ ಅತಿಥಿ ರೆ.ಫಾ. ಡಾ. ವರ್ಗೀಸ್ ಕೈಪಿನಡ್ಕ (OIC) ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರು, 2023–25ನೇ ಸಾಲಿನ ಎಲ್ಲ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಾವಕಾಶ ಪಡೆದಿದ್ದಾರೆ ಎಂದು ಘೋಷಿಸಿದರು.
ಆಯ್ಕೆಯಾದ ಕಂಪನಿಗಳ ಪಟ್ಟಿ:
ಟೊಯೋಟಾ ಕಿರ್ಲೊಸ್ಕರ್ ಮೋಟಾರ್ ಲಿಮಿಟೆಡ್ ಬಿಡದಿ – ಬೆಂಗಳೂರು, ಟೊಯೋಟಾ ಕಿರ್ಲೊಸ್ಕರ್ ಆಟೋ ಪಾರ್ಟ್ಸ್ Pvt. Ltd., ಇಂಡೋ MIM Pvt. Ltd., ಡೈನೋಟೆಡ್ ಪ್ರಾಡಕ್ಟ್ಸ್ Pvt. Ltd., ಬೋಸ್ ಆಟೋಮ್ಯಾಟಿವ್ Ltd., ಟ್ರೈಡೆಂಟ್ ಮೋಟಾರ್ಸ್ Pvt. Ltd., ಹುಂಡೈ ಮೋಟಾರ್ಸ್ ಬೆಂಗಳೂರು, ಭಾರತ್ ಬೆನ್ಸ್ ಟ್ರಕ್ಸ್, ಸ್ಕೂಫ್ ಮೂಡಬಿದ್ರೆ ಮತ್ತು ಶಾಹಿ ಎಕ್ಸ್ಪೋರ್ಟ್ಸ್ ಮೈಸೂರು. ಒಟ್ಟು 160 ವಿದ್ಯಾರ್ಥಿಗಳು ಎಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಫಿಟ್ಟರ್, ಮೋಟಾರ್ ಮೆಕ್ಯಾನಿಕಲ್, ವೆಲ್ಡರ್ ಹಾಗೂ ಕೋಪ ವಿಭಾಗಗಳಿಂದ ಉದ್ಯೋಗಾವಕಾಶ ಪಡೆದಿದ್ದಾರೆ. ಇವರಲ್ಲಿ ಹೆಚ್ಚಿನವರು ಪ್ರಮುಖ ಐದು ಕಂಪನಿಗಳಲ್ಲಿಯೂ ಆಯ್ಕೆಯಾಗಿರುವುದಾಗಿ ತಿಳಿಸಿದರು.