ಆಲಂಕಾರು : ಜೇಸಿಐ ಆಲಂಕಾರಿನ ಪೂರ್ವಾಧ್ಯಕ್ಷ, ವಲಯದ ಪೂರ್ವ ಉಪಾಧ್ಯಕ್ಷ,ಉತ್ತಮ ತರಬೇತುದಾರ, ಕಾರ್ಯಕ್ರಮ ನಿರೂಪಕರಾಗಿದ್ದುಕೊಂಡು ಅಕಾಲಿಕವಾಗಿ ಅಗಲಿದ ಜೇಸಿ ಪ್ರದೀಪ್ ಬಾಕಿಲರ ಸ್ಮರಣಾರ್ಥ ಆಲಂಕಾರು ಜೇಸಿಐ ವತಿಯಿಂದ ದೀಪೋತ್ಥಾನ ಎಂಬ ಶೀರ್ಷಿಕೆಯಡಿ ತರಬೇತಿ ಸಪ್ತಾಹ ನಡೆಯಿತು.
ಆಲಂಕಾರು ಆಸುಪಾಸಿನ ಏಳು ವಿದ್ಯಾಸಂಸ್ಥೆಗಳಲ್ಲಿ ನಡೆದ ಈ ತರಬೇತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತರಬೇತುದಾರ ಡಾ.ರಾಘವೇಂದ್ರ ಹೊಳ್ಳ,ಸತೀಶ್ ಭಟ್ ಬಿಳಿನೆಲೆ,ಸೌಜನ್ಯ ಹೆಗ್ಡೆ,ವಲಯ ತರಬೇತುದಾರರಾದ ದಾಮೋದರ ಪಾಟಾಳಿ,ಸವಿತಾರ ಮೂಡೂರು ಹಾಗೂ ಆಲಂಕಾರಿನ ಶತಾಕ್ಷಿ ಕ್ಲಿನಿಕ್ ನ ವೈದ್ಯೆ ಡಾ.ಕೃತಿ ಶೆಟ್ಟಿ ತರಬೇತುದಾರರಾಗಿ ಕಾರ್ಯಕ್ರಮ ನಡೆಸಿಕೊಟ್ಟರು.
ತರಬೇತಿ ಸಪ್ತಾಹದ ಸಮಾರೋಪ ಸಮಾರಂಭವು ಆಲಂಕಾರಿನ ಸಿ.ಎ ಬ್ಯಾಂಕಿನ ಸಭಾಂಗಣದಲ್ಲಿ ಘಟಕದ ಅಧ್ಯಕ್ಷ ಜೇಸಿ ಗುರುರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜೇಸಿಐ ಭಾರತದ ವಲಯ 15ರ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ.ಎ ಮಾತನಾಡಿ, ಜೇಸಿಯೊಂದಿಗೆ ಪ್ರದೀಪರಿಗಿದ್ದ ಒಡನಾಟವನ್ನು ಸ್ಮರಿಸಿ,ಈ ಕಾರ್ಯಕ್ರಮ ನಿಜವಾಗಿಯೂ ಓರ್ವ ಅದ್ಭುತ ನಾಯಕನಿಗೆ ಕೊಡುವ ಗೌರವ,ಆ ಮೂಲಕ ಅವರ ಹೆಸರನ್ನು ಜೀವಂತವಿರಿಸುವ ಪ್ರಯತ್ನವನ್ನು ಮಾಡಿದ ಜೇಸಿಐ ಆಲಂಕಾರು ಘಟಕದ ಕಾರ್ಯಕ್ಕೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.
ಇನ್ನೋರ್ವ ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಡಬ ಘಟಕದ ಅಧ್ಯಕ್ಷ ವಿಮಲ್ ಕುಮಾರ್ ಮಾತನಾಡಿ ,ಶಿಕ್ಷಕರಾಗಿದ್ದ ಪ್ರದೀಪ್ ಬಾಕಿಲ ಓರ್ವ ಅದ್ಭುತ ತರಬೇತುದಾರ, ಕಾರ್ಯಕ್ರಮ ಸಂಯೋಜಕರಾಗಿದ್ದರು. ಈ ಸಮಾಜಕ್ಕೆ ಅವರ ಕೊಡುಗೆ ಅಪಾರವಾಗಿದೆ.ಅವರ ನೆಚ್ಚಿನ ಕ್ಷೇತ್ರವಾದ ತರಬೇತಿ ವಿಭಾಗದಲ್ಲಿ ಒಂದೊಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿ,ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ, ಅನೇಕ ಭವಿಷ್ಯದ ನಾಯಕರನ್ನು ಬೆಳೆಸಲು ಜೇಸಿಐ ಆಲಂಕಾರು ಘಟಕ ಮುಂದಾಗಿರುವುದು ಪ್ರಶಂಸನೀಯ ಎಂದು ಹೇಳಿದರು.
ಪ್ರದೀಪ್ ಬಾಕಿಲರ ಸ್ಮರಣಾರ್ಥ ಪ್ರತಿವರ್ಷ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದೆ ಬಂದಿರುವ ಬ್ಯಾಂಕ್ ಉದ್ಯೋಗಿ ಜೇಸಿ ರಾಧಾಕೃಷ್ಣ ಆನ ಇವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ದಿವಂಗತ ಪ್ರದೀಪ್ ಬಾಕಿಲರ ತಂದೆ ಮೋನಪ್ಪ ಗೌಡ ಬಾಕಿಲ,ಸಹೋದರ ಆಲಂಕಾರರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬಾಕಿಲ, ಹೇಮಲತಾ ಪ್ರದೀಪ್,ಪೆರಾಬೆ ಶಾಲೆಯ ಶಿಕ್ಷಕ ಜಯಪ್ರಕಾಶ್,ಜೇಸಿಐ ವಲಯ 15ರ ಪ್ರಮುಖರಾದ ವಲಯ ಉಪಾಧ್ಯಕ್ಷ ಜೇಸಿ ಸಂತೋಷ್ ಕುಮಾರ್ ಶೆಟ್ಟಿ,ಮ್ಯಾನೆಜ್ಮೆಂಟ್ ವಿಭಾಗದ ನಿರ್ದೇಶಕ ಜೇಸಿ ಅಜಿತ್ ಕುಮಾರ್ ರೈ,ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೇಸಿಐ ಸೆನೆಟರ್ ರಾಘವೇಂದ್ರ ಕುಲಾಲ್,ವಲಯಾಧಿಕಾರಿ ಜೇಸಿ ವಿನೀತ್ ಶಗ್ರಿತ್ತಾಯ,ಘಟಕದ ನಿಕಟಪೂರ್ವಾಧ್ಯಕ್ಷೆ ಮಮತಾ ಅಂಬರಾಜೆ,ಕಾರ್ಯದರ್ಶಿ ಮಹೇಶ್ ಪಾಟಾಳಿ,ಮಹಿಳಾ ಜೇಸಿ ಅಧ್ಯಕ್ಷೆ ಸುನೀತಾ ಜಿ.ರೈ,ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಜೇಸಿ ಗಣೇಶ್ ಕಟ್ಟಪುಣಿ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು,ಜೇಸಿ ಲಕ್ಷ್ಮೀನಾರಾಯಣ ಅಲೆಪ್ಪಾಡಿ ಜೇಸಿವಾಣಿ ವಾಚಿಸಿದರು.ಕಾರ್ಯಕ್ರಮ ನಿರ್ದೇಶಕ ಗುರುಕಿರಣ್ ಶೆಟ್ಟಿ ತರಬೇತಿ ಸಪ್ತಾಹದ ವರದಿ ವಾಚಿಸಿದರು,ಅಧ್ಯಕ್ಷ ಗುರುರಾಜ್ ರೈ ಸ್ವಾಗತಿಸಿ,ಕಾರ್ಯಕ್ರಮ ನಿರ್ದೇಶಕ ಚೇತನ್ ಮೊಗ್ರಾಲ್ ವಂದಿಸಿದರು.