ಸವಣೂರು: ವಲಯ ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ಖೋ-ಖೋ ಪಂದ್ಯಾಟವು ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಆನಡ್ಕದಲ್ಲಿ ನಡೆಯಿತು.
ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಕೆನರಾ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಜಯರಾಮ ಆಚಾರ್ಯ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಹರೀಶ್ ವಹಿಸಿದ್ದರು. ಕಾರ್ಯಕ್ರಮದ ವೇದಿಕೆಯಲ್ಲಿ ನರಿಮೊಗರು ಗ್ರಾಮ ಪಂಚಾಯತಿನ ಉಪಾಧ್ಯಕ್ಷ ಉಮೇಶ್, ಸದಸ್ಯರುಗಳಾದ ದಿನೇಶ್ ಮಜಲು, ತಾರಾನಾಥ, ಸುಧಾಕರ ಕುಲಾಲ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಶ್ ಮಜಲು, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಜಯರಾಮ ಪೂಜಾರಿ, ನರಿಮೊಗರು ಕ್ಲಸ್ಟರ್ ನ ಸಿಆರ್ಪಿ ಪರಮೇಶ್ವರಿ, ಭಾಗ್ಯೋದಯ ಇಂಡಸ್ಟ್ರೀಸ್ ನ ಮಾಲಕರಾದ ರವಿ ಮಣಿಯ, ನವಶಕ್ತಿ ಆರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ ನ ಸ್ಥಾಪಕ ಅಧ್ಯಕ್ಷ ಆನಂದ ಬಲ್ಯಾಯ, ಕಡಬ ತಾಲೂಕು ಪ್ರೌಢ ಶಾಲಾ ಶಿಕ್ಷಕ ಸಂಘದ ಪದಾಧಿಕಾರಿಗಳಾದ ಶ್ರೀಲತಾ ನೋಡಲ್ ಶಿಕ್ಷಕರಾದ ಬಾಲಕೃಷ್ಣ ಕಾಣಿಯೂರು, ಶ್ರೀ ಕೃಷ್ಣ ಪ್ರಸಾದ್ ಹಾಗೂ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪೊಡಿಯ, ಶಾಲಾ ಮುಖ್ಯಗುರು ಫೆಲ್ಸಿಟಾಡಿ ಕುನ್ಹಾ ಉಪಸ್ಥಿತರಿದ್ದರು.

ಕ್ರೀಡಾಂಗಣದ ಉದ್ಘಾಟನೆಯನ್ನು ಜಯರಾಮ ಪೂಜಾರಿ ನೆರವೇರಿಸಿದರು. ಬಳಿಕ ನಡೆದ ಪಂದ್ಯಾಟದ ಕೊನೆಯಲ್ಲಿ ಬಾಲಕರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕದ ತಂಡವು ಪ್ರಥಮ ಸ್ಥಾನವನ್ನೂ, ಬೆಸ್ಟ್ ಆಲ್ ರೌಂಡರ್ ಆಗಿ ಏಳನೇ ತರಗತಿಯ ವಿವೇಕ್, ಬೆಸ್ಟ್ ರನ್ನರ್ ಆಗಿ ದೀಪಕ್ ಮತ್ತು ದ್ವಿತೀಯ ಸ್ಥಾನವನ್ನು ಸಾಂದೀಪನಿ ವಿದ್ಯಾ ಸಂಸ್ಥೆಗಳು ಪಡೆದುಕೊಂಡಿರುತ್ತದೆ. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆನಡ್ಕ ತಂಡ ಪಡೆದು ಬೆಸ್ಟ್ ಆಲ್ರೌಂಡರ್ ಕೌಶಿತ, ಬೆಸ್ಟ್ ಚೇಸರ್ ಶ್ರೀಯ ಮತ್ತು ದ್ವಿತೀಯ ಸ್ಥಾನವನ್ನು ಕುದುಮಾರ್ ಶಾಲಾ ತಂಡ ಪಡೆದಿರುತ್ತದೆ.

ವಿಜೇತ ವಿದ್ಯಾರ್ಥಿಗಳಿಗೆ ವೈಯಕ್ತಿಕ ಹಾಗೂ ತಂಡದ ಟ್ರೋಫಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಎಸ್ ಡಿಎಂಸಿ ಯ ಉಪಾಧ್ಯಕ್ಷರು, ಸದಸ್ಯರು, ಶಾಲಾದಾನಿಗಳು, ಪೋಷಕರು, ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳು ಸಾಕ್ಷಿಭೂತರಾದರು. ಕಾರ್ಯಕ್ರಮಕ್ಕೆ ಶಾಲಾ ಮುಖ್ಯ ಗುರು ಎಲ್ಲರನ್ನೂ ಸ್ವಾಗತಿಸಿ ಶಿಕ್ಷಕ ಸುನಿಲ್ ವಂದನಾರ್ಪಣೆಗೈದರು. ಶಿಕ್ಷಕಿ ಮಾಲತಿ ಹಾಗೂ ವಿಶಾಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ನೀತಾ ಸೌಮ್ಯ ಪೂರ್ಣಿಮಾ ಸಹಕರಿಸಿದರು.