ಬಾಲಕಿಯರ ವಿಭಾಗದಲ್ಲಿ 34 ನೆಕ್ಕಿಲಾಡಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ
ಬಾಲಕರ ವಿಭಾಗದಲ್ಲಿ 34ನೆಕ್ಕಿಲಾಡಿ ಹಿರಿಯ ಪ್ರಾಥಮಿಕ ಶಾಲೆ ದ್ವಿತೀಯ
ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪುತ್ತೂರು ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 34 ನೆಕ್ಕಿಲಾಡಿ ಇದರ ಜಂಟಿ ಆಶ್ರಯದಲ್ಲಿ ಸೆ.6ರಂದು 34 ನೆಕ್ಕಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ 14ರ ವಯೋಮಾನದ ಶಾಲಾ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾಟವನ್ನು ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷರಾದ ಜಾನ್ ಕ್ಯಾನೋಟ್ ಇವರು ಉದ್ಘಾಟಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು 34 ನೆಕ್ಕಿಲಾಡಿ ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ಸುಜಾತಾ ಆರ್ ರೈ ಇವರು ವಹಿಸಿದ್ದರು. ಪುತ್ತೂರು ಉಪ್ಪಿನಂಗಡಿ ವಲಯ ಮಟ್ಟದ ನೋಡಲ್ ದೈಹಿಕ ಶಿಕ್ಷಣ ಶಿಕ್ಷಕರಾದ ಕುಶಾಲಪ್ಪ ಗೌಡ ಇವರು ಪ್ರಸ್ತಾವಿಕವಾಗಿ ಮಾತನಾಡಿದರು. ವೇದಾವತಿ ಅಧ್ಯಕ್ಷರು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಶುಭ ಹಾರೈಸಿದರು. 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ದರ್ಬೆ, ಸದಸ್ಯರಾದ ಪ್ರಶಾಂತ್ ಎನ್, ಸ್ವಪ್ನ ಜೀವನ್, ವಿಜಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ತಾಲೂಕು ಭೂ ನ್ಯಾಯ ಮಂಡಳಿ ಸದಸ್ಯರು, ಉಪ್ಪಿನಂಗಡಿ ರೋಟರಿ ಕ್ಲಬ್ ನ ಕೋಶಾಧಿಕಾರಿ ಹಾಗೂ ಕೆಜಿ ತರಗತಿಯ ಕೋಶಾಧಿಕಾರಿ ಅಬ್ಬುಲ್ ರಹಿಮಾನ್ ಯುನಿಕ್, ಕೆಜಿ ತರಗತಿಯ ಉಪಾಧ್ಯಕ್ಷರಾದ ಅನಿ ಮಿನೇಜಸ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಜುಭೈರ್ ಹಾಗೂ 34 ನೆಕ್ಕಿಲಾಡಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಜೀವ ನಾಯ್ಕ, ಶಾಂತಿನಗರ ಪ್ರೌಢಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಕಾಶ್ ಗೌಡ, ಮಾದರಿ ಉಪ್ಪಿನಂಗಡಿ ಶಾಲೆಯ ದೈಹಿಕ ಶಿಕ್ಷಕರಾದ ಗಂಗಾಧರ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.

ಖೋ ಖೋ ಪಂದ್ಯಾಟದ ಅಂಕಣಕ್ಕೆ ತೆಂಗಿನ ಕಾಯಿ ಹೊಡೆಯುವುದರ ಮೂಲಕ ಚಾಲನೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಾಜೀವ ನಾಯ್ಕರವರು ನೆರವೇರಿಸಿದರು. ಮುಖ್ಯ ಗುರುಗಳಾದ ಕಾವೇರಿ ಸಿ ಸ್ವಾಗತಿಸಿ, ಶಿಕ್ಷಕಿ ಪದ್ಮ ವಂದಿಸಿದರು. ಶಿಕ್ಷಕಿ ಕವಿತಾ ಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಉಷಾ, ಪೂರ್ಣಿಮಾ, ಅಶ್ವಿನಿ, ಶಾಮಿನಿ ಸಹಕರಿಸಿದರು. ಆಶಾ ಕಾರ್ಯಕರ್ತೆ ಬಬಿತ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ನಿರ್ವಹಿಸಿದರು. ಶಾಂತಿನಗರ ಪ್ರೌಢಶಾಲೆಯ ಮುಖ್ಯ ಗುರುಗಳು ಹಾಗೂ ಅಕ್ಷರ ದಾಸೋಹ ನಿರ್ದೇಶಕರಾಗಿರುವ ವಿಷ್ಣುಪ್ರಸಾದ್ ಹಾಗೂ ಪುತ್ತೂರು ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿಯಾಗಿರುವ ಚಕ್ರಪಾಣಿ ಮಾರ್ಗದರ್ಶನ ನೀಡಿದರು.
ಸಮಾರೋಪ ಸಮಾರಂಭ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ವಿತರಿಸಲಾಯಿತು. ಕೋಡಿಂಬಾಡಿ ಕ್ಲಸ್ಟರ್ ಸಿ.ಆರ್.ಪಿ ಮಹಮದ್ ಅಶ್ರಫ್ ಕಾರ್ಯಕ್ರಮವನ್ನು ನಿರೂಪಿಸಿದರು.
ಸನ್ಮಾನ
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ತರಬೇತು ನೀಡಿದ ರಮೇಶ್ ಹಾಗೂ ಅತಿಥಿ ಶಿಕ್ಷಕಿಯಾದ ಉಷಾಕುಮಾರಿ ಇವರನ್ನು ಸನ್ಮಾನಿಸಲಾಯಿತು.
ಬಾಲಕಿಯರ ವಿಭಾಗದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 34 ನೆಕ್ಕಿಲಾಡಿ ಪ್ರಥಮ ,ಪಿ ಎಂ ಶ್ರೀ ನೆಲ್ಯಾಡಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತದೆ. ಬಾಲಕರ ವಿಭಾಗದಲ್ಲಿ ಕೋಣಾಲು ಪ್ರೌಢಶಾಲೆ ಪ್ರಥಮ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, 34 ನೆಕ್ಕಿಲಾಡಿ ದ್ವಿತೀಯ ಸ್ಥಾನವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿರುತ್ತದೆ.