ಪುತ್ತೂರು: ಶಾಲಾ ಶಿಕ್ಷಣ ಇಲಾಖೆ, ದ.ಕ ಜಿಲ್ಲೆ, ವಿವೇಕಾನಂದ ಪದವಿ ಪೂರ್ವ ಕಾಲೇಜು ಇದರ ಆಶ್ರಯದಲ್ಲಿ ಸೆ.3ರಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದ ಬಾಲಕಿಯರ ವಿಭಾಗದಲ್ಲಿ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು ಚಾಂಪಿಯನ್ ಎನಿಸಿಕೊಂಡಿದೆ.
ವಾಲಿಬಾಲ್ ಪಂದ್ಯಾಟದಲ್ಲಿ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು ಸತತ ನಾಲ್ಕನೇ ಬಾರಿಗೆ ಚಾಂಪಿಯನ್ ಶಿಪ್ ಗಳಿಸಿದ್ದು, ಬೆಸ್ಟ್ ಲಿಪ್ಟರ್ ಆಗಿ ಭವ್ಯಶ್ರಿ, ಬೆಸ್ಟ್ ಅಟ್ಯಾಕರ್ ಆಗಿ ದೀಕ್ಷಾ ಬಿ ಪ್ರಶಸ್ತಿ ಗಳಿಸಿರುತ್ತಾರೆ. ಜೊತೆಗೆ ಆ.31 ರಂದು ನಡೆದ ತಾಲೂಕು ಮಟ್ಟದ ದಸರಾ ವಾಲಿಬಾಲ್ ಕ್ರೀಡಾಕೂಟದಲ್ಲಿ ಕುಂಬ್ರ ಸರಕಾರಿ ಪದವಿ ಪೂರ್ವ ಕಾಲೇಜು ತಂಡ ರನ್ನರ್ಸ್ ಪ್ರಶಸ್ತಿ ಗಳಿಸಿತ್ತು.
ತಂಡದಲ್ಲಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ಭವ್ಯಶ್ರಿ, ನಯನಶ್ರೀ, ಕೆ.ಎಸ್ ಹರ್ಷ, ಎಂ.ಎನ್ ರಿತಿಕಾ, ಬೀಷ್ಮಾ, ಸಾತ್ವಿ ಎಂ, ಹವ್ಯಶ್ರೀ, ಸುಪ್ರಿಯಾ, ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ದೀಕ್ಷಾ ಬಿ. ಜಸ್ಮಿತಾರವರು ಭಾಗವಹಿಸಿರುತ್ತಾರೆ.
ತಂಡದ ಟೀಮ್ ಮ್ಯಾನೇಜರ್ ಆಗಿ ಹರ್ಷಿತಾ ಎನ್.ಎಂ ಮತ್ತು ಆಶಾಲತಾ, ತಂಡದ ತರಬೇತುದಾರರಾಗಿ ಮನೋಜ್ ಕುಂಬ್ರರವರು ಸಹಕರಿಸಿರುತ್ತಾರೆ.