ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟ್‌ ನಿಂದ ಮಹಾಭಾರತ ಸರಣಿಯ ತಾಳ ಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ ಕಾರ್ಯಕ್ರಮ

0

ಹಿರಿಯರನ್ನು ಸ್ಮರಿಸುವುದು ನಮ್ಮ ಸಂಸ್ಕೃತಿ : ಭಾಸ್ಕರ ರೈ ಕುಕ್ಕುವಳ್ಳಿ


ಉಪ್ಪಿನಂಗಡಿ: ಕಲೆ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಮ್ಮ ಹಿರಿಯರು ಮಾಡಿರುವ ಸಾಧನೆಗಳಿಂದ ನಾವು ಸಾಮಾಜಿಕವಾಗಿ ಒಗ್ಗೂಡುವಂತಾಗಿದೆ. ಹಿರಿಯರ ಸಂಸ್ಮರಣೆಯಿಂದ ಈ ವಿಚಾರಧಾರೆಯು ಮುಂದಿನ ಪೀಳಿಗೆಗೆ ಆದರ್ಶವಾಗಿ ದಾರಿದೀಪವಾಗುತ್ತದೆಯೆಂದು ಮಂಗಳೂರು ಯಕ್ಷಾಂಗಣದ ಅಧ್ಯಕ್ಷ, ಅರ್ಥದಾರಿ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.


ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾಮಂಟಪದಲ್ಲಿ ಜರಗಿದ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಟ್ರಸ್ಟಿನ 50ನೇ ವರ್ಷದ ನಿಮಿತ್ತ ನಡೆಸುತ್ತಿರುವ ಮಹಾಭಾರತ ಸರಣಿಯ ತಾಳ ಮದ್ದಳೆ, ಪ್ರಶಸ್ತಿ ಪ್ರದಾನ ಮತ್ತು ನುಡಿ ನಮನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಂಬೋಟು ಮನೆತನದ ಹಿರಿಯರಾದ ದಿ.ಪದ್ಮನಾಭ ಮತ್ತು ದಿ. ನೀಲಾವತಿಯವರ ಸಂಸ್ಮರಣೆ ಮಾಡಲಾಯಿತು. ಅರ್ಥದಾರಿ ಗೋಪಾಲ ಶೆಟ್ಟಿ ಕಳೆಂಜ ಅವರಿಗೆ ‘ನೀಲ ಪದ್ಮ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


ಶ್ರೀ ರಾಮ ಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲರಾದ ಕಲಾವಿದ ಗಣರಾಜ ಕುಂಬ್ಳೆ ಕಲೆ, ಸಾಂಸ್ಕೃತಿಕ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಹಿರಿಯರಿಬ್ಬರ ಸಾಧನೆಗಳನ್ನು ತಿಳಿಸಿ ನುಡಿ ನಮನ ಅರ್ಪಿಸಿದರು.
ವೇದಿಕೆಯಲ್ಲಿ ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಪ್ರಾಂಶುಪಾಲ, ಕಲಾವಿದರಾದ ಗಣರಾಜ ಕುಂಬ್ಳೆ, ಉಮೇಶ್ ಶೆಣೈ ರಾಮನಗರ, ಪಾತಾಳ ಅಂಬಾ ಪ್ರಸಾದ್, ಪಟ್ಲ ಫೌಂಡೇಶನ್‌ನ ಉಪ್ಪಿನಂಗಡಿ ಘಟಕದ ಅಧ್ಯಕ್ಷ ಕೆ. ಜಗದೀಶ ಶೆಟ್ಟಿ, ದೇವದಾಸ ಎಸ್.ಪಿ. ಹರಿಹರ, ಡಾ ಸುರೇಶ್ ಶೆಟ್ಟಿ ಮಂಗಳೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಮಚಂದ್ರ ಮಣಿಯಾಣಿ, ಚಂದ್ರಶೇಖರ ಮಡಿವಾಳ, ಕೈಲಾರು ರಾಜಗೋಪಾಲ ಭಟ್, ಯು.ಜಿ. ರಾಧಾ, ಜಯಂತ ಪೊರೋಳಿ, ಸುರೇಶ ಪುತ್ತೂರಾಯ, ಸುಬ್ರಹ್ಮಣ್ಯ ರಾವ್, ಬಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಸಂಜೀವ ಪಾರೆಂಕಿ, ಸುರೇಶ್ ರಾವ್ ಬಿ., ಸುಧಾಕರ ಕೋಟೆ, ಶ್ರೀಧರ ಭಟ್ ಕೆ., ನೀರಜ್ ಕುಮಾರ್, ಹರೀಶ ಆಚಾರ್ಯ ಪುಳಿತ್ತಡಿ, ಆಶಾಲತಾ ಕಲ್ಲೂರಾಯ, ಮಲ್ಲಿಕಾ ಶೆಟ್ಟಿ ಸಿದ್ಧಕಟ್ಟೆ, ಭಾರತಿ ಎಂ.ಎಲ್., ಪವಿತ್ರಾಕ್ಷಿ, ರವೀಂದ್ರ ದರ್ಬೆ, ಸತೀಶ ಶಿರ್ಲಾಲು, ಹರೀಶ್ ಆಚಾರ್ಯ ಮದ್ದಡ್ಕ, ರಾಜೇಶ ಪ್ರಭು, ಗೀತಾ ಕುದ್ದಣ್ಣಾಯ, ಗುರುಮೂರ್ತಿ ಅಮ್ಮಣ್ಣಾಯ, ಪ್ರಚೇತ ಆಳ್ವ, ಶೃತಿ ವಿಸ್ಮಿತ್, ನಿತೀಶ್ ಮನೋಳಿತ್ತಾಯ, ಪ್ರಕಾಶ ಅಭ್ಯಂಕರ್, ಅರ್ಜುನ ಅಭ್ಯಂಕರ್, ದುಶ್ಯಂತ್ ಕೃಷ್ಣಾಪುರ ಮತ್ತಿತರರು ಇದ್ದರು.


ಕಾಳಿಕಾಂಬ ಯಕ್ಷ ಕಲಾ ಟ್ರಸ್ಟಿನ ಸಹ ಕಾರ್ಯದರ್ಶಿ ಪದ್ಮನಾಭ ಕುಲಾಲ್ ಇಳಂತಿಲ ಸ್ವಾಗತಿಸಿದರು. ಶಿಕ್ಷಕಿ ಪುಷ್ಪಾ ತಿಲಕ್ ವಂದಿಸಿದರು. ಟ್ರಸ್ಟಿನ ಅಧ್ಯಕ್ಷರಾದ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಅತಿಥಿ ಕಲಾವಿದರಿಂದ ‘ಭೀಷ್ಮ ಸೇನಾಧಿಪತ್ಯ’ ತಾಳಮದ್ದಳೆ ಜರಗಿತು. ಗಂಗಾಧರ್ ಟೈಲರ್ ಉಪ್ಪಿನಂಗಡಿಯವರ ಪರವಾಗಿ ಎಲ್ಲಾ ಕಲಾವಿದರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here