ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಲ್ಪವೃಕ್ಷ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ಬೆಳಿಗ್ಗೆ ೯.೩೦ಕ್ಕೆ ನೂತನ ಲಿಫ್ಟ್, ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ, ೧೦.೩೦ಕ್ಕೆ ವಾರ್ಷಿಕ ಮಹಾಸಭೆ
ಪುತ್ತಿಗೆ ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೧ಕ್ಕೆ ಕಡ್ಯ-ಕೊಣಾಜೆ ಗ್ರಾ.ಪಂ ೧ನೇ ವಾರ್ಡ್, ಕೊಣಾಜೆ ಶ್ರೀ ದುರ್ಗಾಂಬಿಕಾ ಸಭಾಭವನದಲ್ಲಿ ಅಪರಾಹ್ನ ೩ರಿಂದ ೨ನೇ ವಾರ್ಡ್ನ ವಾರ್ಡುಸಭೆ
ವಿಟ್ಲದ ಶಾಂತಿನಗರದಲ್ಲಿರುವ ಅಕ್ಷಯ ಸಮುದಾಯ ಭವನದಲ್ಲಿ ಬೆಳಿಗ್ಗೆ ೧೧ಕ್ಕೆ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆ
ಪುಣಚ ಗ್ರಾ.ಪಂನ ಸುವರ್ಣ ಸೌಧ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಸಭೆ
ಕಾಣಿಯೂರು ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಪುತ್ತೂರು ಭಾರತ್ ಸಿನೇಮಾಸ್ನಲ್ಲಿ ಸಂಜೆ ೭ಕ್ಕೆ ತೆನ್ಕಾಯಿ ಮಲೆ ಕಿರುಚಿತ್ರದ ಪದ್ಯ, ಟ್ರೈಲರ್ ಬಿಡುಗಡೆ
ಪುತ್ತೂರು ಜೆಸಿಐ ಘಟಕದ ವತಿಯಿಂದ ವಿದ್ಯಾಮಾತಾ ಅಕಾಡೆಮಿ ಕಚೇರಿಯಲ್ಲಿ ಬೆಳಿಗ್ಗೆ ಆರೋಗ್ಯ ತಪಾಸಣಾ ಶಿಬಿರ, ಅಪರಾಹ್ನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಪ.ಪೂ. ಕಾಲೇಜು ವಿದ್ಯಾರ್ಥಿಗಳಿಗೆ ಕ್ರೀಡಾಕೂಟ
ನೆಲ್ಯಾಡಿ ಜೇಸಿಐಯ ೪೨ನೇ ವರ್ಷದ ಜೇಸಿ ಸಪ್ತಾಹದ ಪ್ರಯುಕ್ತ ಬೆಳಿಗ್ಗೆ ೧೦.೩೦ರಿಂದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆರೋಗ್ಯ ತಪಾಸಣಾ ಶಿಬಿರ
ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯ರಿಂದ ಖೋ-ಖೋ ಪಂದ್ಯಾಟ
ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಬೆಳಿಗ್ಗೆ ೧೦ರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಉತ್ತರಕ್ರಿಯೆ
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಕೇನ್ಯ ರಘುನಾಥ ರೈಯವರ ಪತ್ನಿ ಆರುವಾರ ಬಾಳಿಕೆ ಹರಿಣಾಕ್ಷಿ ಆರ್. ರೈಯವರ ಉತ್ತರಕ್ರಿಯೆ