ನೆಲ್ಯಾಡಿ ಜೇಸಿಐ 42ನೇ ವರ್ಷದ ಜೇಸಿ ಸಪ್ತಾಹ ’ಸಪ್ತ ಸಂಭ್ರಮ’ಕ್ಕೆ ಚಾಲನೆ

0

ನೆಲ್ಯಾಡಿ: ಇಲ್ಲಿನ ಜೇಸಿಐ, ಮಹಿಳಾ ಜೇಸಿಐ ಹಾಗೂ ಜೂನಿಯರ್ ಜೇಸಿವಿಂಗ್ ಆಶ್ರಯದಲ್ಲಿ ನಡೆಯಲಿರುವ 42ನೇ ವರ್ಷದ ಜೇಸಿ ಸಪ್ತಾಹ-2025 ’ಸಪ್ತ ಸಂಭ್ರಮ’ಕ್ಕೆ ಸೆ.9 ರಂದು ಸಂಜೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಚಾಲನೆ ನೀಡಲಾಯಿತು.

ಜೇಸಿಐ ಭಾರತದ ವಲಯ 15ರ ವಲಯ ಸಂಯೋಜಕ ಜಿತೇಶ್ ಪಿರೇರಾ ಜೇಸಿ ಧ್ವಜಾರೋಹಣ ನೆರವೇರಿಸಿ ಸಪ್ತಾಹಕ್ಕೆ ಚಾಲನೆ ನೀಡಿದರು. ಬಳಿಕ ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಯಿತು. ಸಂತಜಾರ್ಜ್ ಪಿಯು ಕಾಲೇಜಿನ ಪ್ರಾಚಾರ್ಯ ಏಲಿಯಾಸ್ ಎಂ.ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಸದಸ್ಯ ರಾಕೇಶ್ ರೈ ಕೆಡೆಂಜಿಗುತ್ತು ಮಾಹಿತಿ ನೀಡಿದರು.

ಆಶ್ರಮ ಭೇಟಿ;
ಸಂಜೆ ಕೊಪ್ಪ ಪ್ರಶಾಂತ್ ನಿವಾಸದಲ್ಲಿ ವಾಕಥಾನ್ ಹಾಗೂ ಆಶ್ರಮ ಭೇಟಿ ನೀಡಿ ಮಾಡಲಾಯಿತು. ಈ ವೇಳೆ ಆಶ್ರಮ ವಾಸಿಗಳಿಗೆ ಹಣ್ಣು ಹಂಪಲು ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿದ್ದ ಜಿತೇಶ್ ಪಿರೇರಾ ಮಾತನಾಡಿ, ನೆಲ್ಯಾಡಿ ಜೇಸಿಐ ಅನೇಕ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ವಲಯ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಮಾಜಕ್ಕೆ ಹಲವು ಉತ್ತಮ ನಾಯಕರನ್ನು ನೀಡಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ಜೇಸಿಐ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಸ್ವಾಗತಿಸಿದರು. ವೇದಿಕೆಯಲ್ಲಿ ಕೊಪ್ಪ ಪ್ರಶಾಂತ ನಿಲಯ ಮೇಲ್ವಿಚಾರಕಿ ಸಿ| ಜೆಸ್ಸಿ ಜೋಸೆಫ್, ನೆಲ್ಯಾಡಿ ಅಶ್ವಮೇಧ ಕೆಟರರ‍್ಸ್ ಮಾಲಕ ರತ್ನಾಕರ ಶೆಟ್ಟಿ, ಸೀನಿಯರ್ ಛೇಂಬರ್ ನೆಲ್ಯಾಡಿ ಲೀಜನ್ ಅಧ್ಯಕ್ಷ ಪ್ರಕಾಶ್ ಕೆ.ವೈ., ನೆಲ್ಯಾಡಿ ಜೇಸಿಐನ ನಿಕಟಪೂರ್ವ ಅಧ್ಯಕ್ಷೆ ಸುಚಿತ್ರ ಜೆ ಬಂಟ್ರಿಯಾಲ್, ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ವಿನ್ಯಾಸ್ ಬಂಟ್ರಿಯಾಲ್, ಪುರಂದರ ಗೌಡ ಡೆಂಜ, ಮಹಿಳಾ ಜೇಸಿ ಅಧ್ಯಕ್ಷೆ ಪ್ರವೀಣಿ ಸುಧಾಕರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೀಲಾ ಮೋಹನ್ ಜೇಸಿವಾಣಿ ವಾಚಿಸಿದರು. ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನವ್ಯ ಪ್ರಸಾದ್ ವಂದಿಸಿದರು.

LEAVE A REPLY

Please enter your comment!
Please enter your name here