ಪುತ್ತೂರು: ಸಂತ ಫಿಲೋಮಿನ ಪ್ರೌಢಶಾಲೆಯಲ್ಲಿ ನಡೆದ 2025-26 ಸಾಲಿನ ಶೈಕ್ಷಣಿಕ ವರ್ಗದ ತಾಲೂಕು ಮಟ್ಟದ 17ರ ವಯೋಮಾನದ ಬಾಲಕಿಯರ ಫುಟ್ಬಾಲ್ ಪಂದ್ಯಾಟ ಹಾಗೂ ಕೊಂಬೆಟ್ಟು ಶ್ರೀರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ 2025-26ನೇ ಸಾಲಿನ ತಾಲೂಕು ಮಟ್ಟದ 17ರ ವಯೋಮಾನದ ಬಾಲಕಿಯರ ವಿಭಾಗದ ಹ್ಯಾಂಡ್ಬಾಲ್ ಪಂದ್ಯಾಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯ ತಂಡಗಳು ದ್ವಿತೀಯ ಸ್ಥಾನ ಗಳಿಸಿ ಎರಡೂ ಪಂದ್ಯಾಟದ ವಿದ್ಯಾರ್ಥಿನಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲಾ ಮುಖ್ಯ ಶಿಕ್ಷಕಿ ರೋಸಲಿನ್ ಪ್ಲೇವಿ ಲೋಬೊರವರ ಮಾರ್ಗದರ್ಶನದಲ್ಲಿ ಶಾಲಾ ದೈಹಿಕ ಶಿಕ್ಷಕಿ ದೀಕ್ಷಾ ಪಿ. ಎನ್. ರವರು ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿರುತ್ತಾರೆ.