ಪುತ್ತೂರು: ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಸಂಪ್ಯ ಇದರ ವತಿಯಿಂದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೆ.11ರಂದು ನಡೆಯಿತು.

ಶಿಬಿರದಲ್ಲಿ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರುಗಳಾದ ಡಾ.ವಿಶಾಲ್ ಯು.ಪಿ, ಡಾ.ಸ್ವಾತಿ, ಡಾ.ಅನೀಸ್ ಕಡವತ್ ಭಾಗವಹಿಸಿದ್ದರು.
ಮರ್ಕಝುಲ್ ಹುದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಿಗೆ, ಶಿಕ್ಷಕ ವೃಂದಕ್ಕೆ ಮತ್ತು ಸಿಬ್ಬಂದಿಗಳಿಗೆ ಈ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಒಟ್ಟು 410 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಅಶ್ಮೀರ್ ಕಮ್ಮಾಡಿ, ಕಾರ್ಯನಿರ್ವಾಹಕ ನಿರ್ದೇಶಕ ಆಶೀಶ್ ಕಮ್ಮಾಡಿ, ಲ್ಯಾಬ್ ಇನ್ ಚಾರ್ಜ್ ರಝಾಕ್ ಅಂಙತ್ತಡ್ಕ, ಪಿ.ಆರ್.ಒ ಅಬ್ದುಲ್ ರಝಾಕ್ ಸಾಲ್ಮರ, ಫಿಸಿಯೋ ಥೆರಫಿಸ್ಟ್ ಡಾ.ಅಫ್ರಾದ್ ಹಮೀದ್, ಮುಶ್ರೀಫ್ ಸಹಕರಿಸಿದರು.
ಶಿಬಿರದ ಕೊನೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ರಶೀದ್ ಝೈನಿ ಉಪಸ್ಥಿತರಿದ್ದರು.