





ಹಿರೇಬಂಡಾಡಿ: ಸರ್ಕಾರಿ ಪ್ರೌಢಶಾಲೆ ಹಿರೇಬಂಡಾಡಿ ಇಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಬಾಲಕ ಹಾಗೂ ಬಾಲಕಿಯರ ಕ್ರೀಡಾಕೂಟದ 14 ಮತ್ತು 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಹಿರೇಬಂಡಾಡಿ ಪ್ರೌಢಶಾಲೆ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದೆ.


17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿನಿ ನೀತಾ 3000 ಮೀ. ಓಟದಲ್ಲಿ ಪ್ರಥಮ, 1500 ಮೀ. ಪ್ರಥಮ ಹಾಗೂ ಹಾಗೂ 800 ಮೀ.ಓಟದಲ್ಲಿ ದ್ವಿತೀಯ ಸ್ಥಾನಿಯಾಗಿ ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅನನ್ಯ ಎಂ. 100 ಮೀಟರ್ ಪ್ರಥಮ, 600 ಮೀ. ದ್ವಿತೀಯ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ಚಾಂಪಿಯನ್ ಆಗಿದ್ದಾರೆ. ಉಳಿದಂತೆ 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಅನುಶ್ರೀ ಜಾವೆಲಿನ್ ಪ್ರಥಮ, ಚಕ್ರ ಎಸೆತ ಪ್ರಥಮ, ಚಂದ್ರಿಕಾ ಗುಂಡು ಎಸೆತ ಪ್ರಥಮ, ತನುಶ್ರೀ ತ್ರಿವಿಧ ಜಿಗಿತ ಪ್ರಥಮ, ಬಾಲಕರ ವಿಭಾಗದಲ್ಲಿ ಸುಮನ್ 100 ಮೀ. ಓಟ ದ್ವಿತೀಯ, 200 ಮೀ.ತೃತೀಯ, ಸ್ನೇಹಿತ್ ಎತ್ತರ ಜಿಗಿತದಲ್ಲಿ ತೃತೀಯ, ಪೃಥ್ವಿರಾಜ್ ಗುಂಡು ಎಸೆತ ದ್ವಿತೀಯ, ಚಕ್ರ ಎಸೆತ ತೃತೀಯ, ತೇಜಸ್ ಗೌಡ ೩೦೦೦ ಮೀ.ಓಟದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.





14ರ ವಯೋಮಾನದ ಬಾಲಕರ ವಿಭಾಗದಲ್ಲಿ ಮಹಮ್ಮದ್ ಫಮೀಜ್ 100 ಮೀ. ಓಟದಲ್ಲಿ ತೃತೀಯ, ನಿತೇಶ್ 600 ಮೀ. ತೃತೀಯ, ಬಾಲಕಿಯರ ವಿಭಾಗದಲ್ಲಿ ಮಾನ್ಯ ಉದ್ದ ಜಿಗಿತದಲ್ಲಿ ಪ್ರಥಮ, ಪೂರ್ವಿ 600 ಮೀಟರ್ ಪ್ರಥಮ, ಎತ್ತರ ಜಿಗಿತ ದ್ವಿತೀಯ, ತನ್ವಿ ಸಿ.ಎಸ್.ಚಕ್ರ ಎಸೆತದಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ.
14ರ ವಯೋಮಾನದ ಬಾಲಕಿಯರ 4/100 ಮೀ.ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಆಗಿದೆ. 17ರ ವಯೋಮಾನದ ಬಾಲಕರ ವಿಭಾಗದ 4/100 ಮೀ.ರಿಲೇ ತಂಡವು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕಿಯರ 4/100 ಮೀ.ರಿಲೇ ತಂಡವು ತೃತೀಯ ಸ್ಥಾನ ಪಡೆದುಕೊಂಡಿದೆ.
ಕ್ರೀಡಾಪಟುಗಳಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಚಕ್ರಪಾಣಿ ಎ.ವಿ., ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಬಿ.ಮಾರ್ಗದರ್ಶನ ನೀಡಿದ್ದಾರೆ. ಕ್ರೀಡಾಪಟುಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಉಷಾಕಿರಣ ರೈ ಡಿ., ಶಿಕ್ಷಕವೃಂದ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರವೀಂದ್ರ ಪಟಾರ್ತಿ ಮತ್ತು ಸದಸ್ಯರು ಅಭಿನಂದಿಸಿದ್ದಾರೆ.








