ವಿ.ವಿ. ಅಂತರ್-ಕಾಲೇಜು ಈಜು ಸ್ಪರ್ಧೆ- ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿಗೆ ಚಾಂಪಿಯನ್ಸ್ ಪಟ್ಟ

0

12 ಚಿನ್ನ, 16 ಬೆಳ್ಳಿ, 14 ಕಂಚು ಪಡೆದ ವಿದ್ಯಾರ್ಥಿಗಳು

ಪುತ್ತೂರು: ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಶ್ರಯದಲ್ಲಿ ಪುತ್ತೂರಿನ ಬಾಲವನ ಈಜುಕೊಳದಲ್ಲಿ ಸೆ.4ರಂದು ನಡೆದ ಮಂಗಳೂರು ವಿಶ್ವ ವಿದ್ಯಾನಿಲಯ ಅಂತರ್- ಕಾಲೇಜು ಈಜು ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 42 ಪದಕಗಳನ್ನು ಗಳಿಸುವುದರ ಮೂಲಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದ್ದಾರೆ.

ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ನಂದನ್ ನಾಯ್ಕ್ ಮೂರು ಚಿನ್ನ, ಮೂರು ಬೆಳ್ಳಿ, ಐದು ಕಂಚು, ತೃತೀಯ ಬಿಎ ವಿದ್ಯಾರ್ಥಿ ಶಿಶಿಲ್ ಗೌಡ ಮೂರು ಚಿನ್ನ, ಆರು ಬೆಳ್ಳಿ, ಎರಡು ಕಂಚು, ಪ್ರಥಮ ಎಂಕಾಂನ ತನ್ವಿರ್ ಪಿಂಟೋ ಮೂರು ಚಿನ್ನ, ಆರು ಕಂಚು, ಪ್ರಥಮ ಎಂಎಸ್ ಡಬ್ಲ್ಯೂನ ತ್ರಿಶುಲ್ ಗೌಡ ಮೂರು ಚಿನ್ನ, ಏಳು ಬೆಳ್ಳಿ, ಒಂದು ಕಂಚು ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ|ಎಲ್ಯಾಸ್ ಪಿಂಟೋರವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಮತ್ತು ತರಬೇತುದಾರರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಇದು ನಮ್ಮ ಕಾಲೇಜಿಗೆ ಹೆಮ್ಮೆಯ ವಿಷಯ. ಈ ಸಾಧನೆಯು ಇತರ ವಿದ್ಯಾರ್ಥಿಗಳಿಗೂ ಸ್ಫೂರ್ತಿ ನೀಡಲಿದೆ.

ಡಾ|ಆಂಟನಿ ಪ್ರಕಾಶ್ ಮೊಂತೆರೋ
ಕಾಲೇಜು ಪ್ರಾಂಶುಪಾಲರು


LEAVE A REPLY

Please enter your comment!
Please enter your name here